Valentine's Day: ನಿಮ್ಮ ಪ್ರೇಯಸಿಗೆ ಗಿಫ್ಟ್ ಕೊಡಲು ಈ ಸ್ಕೂಟರ್‌ಗಳು ಉತ್ತಮ... ಯಾವುವು, ಕಡಿಮೆ ಬೆಲೆಗೂ ಲಭ್ಯ!
ವಿಶ್ವದೆಲ್ಲೆಡೆ ಫೆ.14ರಂದು ಪ್ರೇಮಿಗಳ ದಿನವನ್ನು (Valentine's Day) ಯುವ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ತಮ್ಮ ಪ್ರೇಯಸಿಗೆ ವಿಶೇಷ ಉಡುಗೊರೆಯನ್ನು ನೀಡಿ, ಪ್ರಪೋಸ್ ಮಾಡಬೇಕೆಂಬುದು ಹಲವು ಯುವಕರ ಬಹುದೊಡ್ಡ ಆಸೆಯಾಗಿರುತ್ತದೆ. ನಿಮ್ಮ ಪ್ರೇಯಸಿಗೆ ಸರ್ಪ್ರೆಸ್ ಗಿಫ್ಟ್ ಕೊಡಲು ಆಲೋಚಿಸುತ್ತಿದ್ದೀರಾ.. ಹಾಗಾದರೆ, ಈ ಸುಜುಕಿ ಆಕ್ಸೆಸ್ 125, ಹೀರೋ ಜೂಮ್ 110, ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್‌ಗಳು ಅತ್ಯುತ್ತಮ ಆಯ್ಕೆಯಾಗಲಿವೆ. ಬನ್ನಿ.. ಇವುಗಳ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಯೋಣ.
ಮೊದಲಿಗೆ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂ.81,700 ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 125 - ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 45 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. ಸ್ಟ್ಯಾಂಡರ್ಡ್, ಸ್ಪೆಷಲ್ & ರೈಡ್ ಕನೆಕ್ಟ್ ಎಡಿಷನ್ ಎಂಬ 3 ರೂಪಾಂತರಗಳೊಂದಿಗೂ ಲಭ್ಯವಿದೆ.

ಈ ಸ್ಕೂಟರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಡಿಸ್ಕ್ & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಹಾಗೂ ಪರ್ಲ್ ಗ್ರೇಸ್ ವೈಟ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.
ಹೀರೋ ಜೂಮ್ 110 (Hero Xoom 110) ಕೂಡ ಜನಪ್ರಿಯ ಸ್ಕೂಟರ್ ಆಗಿದ್ದು, ಮಹಿಳೆಯರು ಹಾಗೂ ಪುರುಷರು ಸುಲಭವಾಗಿ ಬಳಕೆ ಮಾಡಬಹುದು. ಇದು ರೂ.76,561 ರಿಂದ ರೂ.87,050 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 110.9 - ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 53.4 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

ನೂತನ ಜೂಮ್ 110 ಸ್ಕೂಟರ್ ಸೆಮಿ ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಗ್ಲೋವ್‌ಬಾಕ್ಸ್ & ಬೂಟ್‌ಲೈಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ಈ ಸ್ಕೂಟರ್ 108 ಕೆಜಿ ತೂಕವಿದ್ದು, 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.
ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest) ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.68,249 ರಿಂದ ರೂ.71,052 ಎಕ್ಸ್ ಶೋರೂಂ ದರವನ್ನು ಹೊಂದಿದೆ. 109.7 - ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 48 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.

ಈ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಮ್ಯಾಟ್ ಬ್ಲಾಕ್, ಮ್ಯಾಟ್ ಬ್ಲೂ, ಮ್ಯಾಟ್ ಪರ್ಪಲ್ ಹಾಗೂ ಮ್ಯಾಟ್ ರೆಡ್ ಎಂಬ ಬಣ್ಣಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದು ಬರೋಬ್ಬರಿ 103 ಕೆಜಿ ತೂಕವಿದ್ದು, 5-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications