ಬಡವರು ಖರೀದಿಸಬಹುದು: ವಿನ್‌ಫಾಸ್ಟ್‌ನಿಂದ ಹಲವು ನೂತನ ಇ-ಸ್ಕೂಟರ್‌ಗಳ ಪ್ರದರ್ಶನ.. ಕಡಿಮೆ ಬೆಲೆಗೆ ಮಾರಾಟಕ್ಕೆ?

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಏಷ್ಯಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದ್ದು, ಭಾರತಕ್ಕೂ ಬರಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಅದರ ಭಾಗವಾಗಿ ನವದೆಹಲಿಯಲ್ಲಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹಲವು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶಿಸಿದೆ. ಇದರೊಟ್ಟಿಗೆ ಶ್ರೀಸಾಮಾನ್ಯರಿಗೂ ಹೆಚ್ಚಿನ ಅನುಕೂಲವಾಗಿಸುವ ನಿಟ್ಟಿನಲ್ಲಿ ವಿವಿಧ ಇ-ಸ್ಕೂಟರ್‌ಗಳನ್ನು ಬಹಿರಂಗಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿಯೂ ಖರೀದಿಗೆ ಲಭ್ಯವಿವೆ. ಇವುಗಳು ದೇಶೀಯ ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿನ್‌ಫಾಸ್ಟ್ ಇವೊ ಎಸ್ (VinFast Evo S): ಸದ್ಯ, ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಈ ಎಲೆಕ್ಟ್ರಿಕ್ ಸ್ಕೂಟರ್, ವಿನ್ಯಾಸದ ದೃಷ್ಟಿಯಿಂದ ರೆಟ್ರೋ ಲುಕ್‌ನ್ನು ಹೊಂದಿದೆ. ಜೊತೆಗೆ ಆಕರ್ಷಕವಾದ ಯೆಲ್ಲೋ (ಹಳದಿ) ಬಣ್ಣವನ್ನು ಪಡೆದಿದ್ದು, ಶಕ್ತಿಯುತವಾದ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ತನ್ನದಾಗಿಸಿಕೊಂಡಿದೆ.

VinFast Showcased Evo S Theon S Klara S Feliz S And Other Electric Two Wheelers At Auto Expo

ವಿನ್‌ಫಾಸ್ಟ್ ಥಿಯೋನ್ ಎಸ್ (VinFast Theon S): ಇದು ಕೂಡ ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಸ್ಕೂಟರ್‌ನಲ್ಲಿ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ ಉಪಯೋಗಿಸಲಾಗಿದೆ. ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ (ರೇಂಜ್) ನೀಡುತ್ತದೆ. 99 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 2-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ವಿನ್‌ಫಾಸ್ಟ್ ಕ್ಲಾರಾ ಎಸ್ (VinFast Klara S): ಈ ಎಲೆಕ್ಟ್ರಿಕ್ ಸ್ಕೂಟರ್ ಸಹ ನೋಡಲು ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದೆ. 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 120 ಕೊಲೋಮೀಟರ್ ಓಡುತ್ತದೆ. ಇಬ್ಬರು ವಯಸ್ಕರು ಹಾಗೂ ಒಂದು ಮಗು ಸ್ಕೂಟರ್‌ನಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

VinFast Showcased Evo S Theon S Klara S Feliz S And Other Electric Two Wheelers At Auto Expo

ವಿನ್‌ಫಾಸ್ಟ್ ಫೆಲಿಜ್ ಎಸ್ (VinFast Feliz S): ಇದರ ಬಗ್ಗೆ ಹೇಳಿವುದಾದರೆ, ಈ ಸ್ಕೂಟರ್ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 198 ಕಿಲೋಮೀಟರ್ ಕ್ರಮಿಸುತ್ತದೆ. 78 ಟಾಪ್ ಸ್ಪೀಡ್‌ನ್ನು ಪಡೆದಿದೆ. 25-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಒಳಗೊಂಡಿದೆ. ಮೋಸ್ ಗ್ರೀನ್ ಮತ್ತು ಶಿನಿ ಬ್ಯ್ಲಾಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.

ವಿನ್‌ಫಾಸ್ಟ್ ವೆಂಟೊ ಎಸ್ (VinFast Vento S): ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಕೂಡ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. 89 ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿಯು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

VinFast Showcased Evo S Theon S Klara S Feliz S And Other Electric Two Wheelers At Auto Expo

ವಿನ್‌ಫಾಸ್ಟ್ ಡ್ರಗ್ನ್‌ಫ್ಲೈ (VinFast DrgnFly): ಇದೊಂದು ಇ-ಬೈಕ್ ಆಗಿದೆ. 48ವಿ 14ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಗ್ರೇ ಹಾಗೂ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಇದು ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಸೆಟಪ್ ಪಡೆದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 20, 2025, 13:23 [IST]
English summary
Vinfast showcased evo s theon s klara s feliz s and other electric two wheelers at auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+