Yamaha: ಯಮಹಾ ಪ್ರಿಯರಿಗೆ ಸಿಹಿಸುದ್ದಿ: ಬಹು ಬೇಡಿಕೆಯ ಬೈಕ್‌ಗಳ ಮೇಲೆ 1 ಲಕ್ಷ ಬೆಲೆ ಇಳಿಕೆ!

ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಅನುಗುಣವಾಗಿ ಮತ್ತು ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ತನ್ನ ಪ್ರಮುಖ ಮಾದರಿಗಳಾದ ಯಮಹಾ ಆರ್‌3 (Yamaha R3) ಮತ್ತು ಎಂಟಿ-03 (Yamaha MT-03) ಗಳ ಮೇಲೆ ಫೆಬ್ರವರಿ 1, 2025 ರಿಂದ ಜಾರಿಗೆ ಬರುವಂತೆ 1.10 ಲಕ್ಷ ರೂಪಾಯಿಗಳವರೆಗೆ ಬೆಲೆ ಕಡಿತವನ್ನು ಘೋಷಿಸಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಯಮಹಾದ ಸಿಗ್ನೇಚರ್ ರೇಸಿಂಗ್ DNA ಗೆ ಹೆಸರುವಾಸಿಯಾದ ಈ ಮಾದರಿಗಳು ಈಗ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ಯಮಹಾ R3 ಭಾರೀ ಬೆಲೆ ಕಡಿತದ ಬಳಿಕ ಈಗ ರೂ. 3,59,900 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಐಕಾನ್ ಬ್ಲೂ ಮತ್ತು ಬ್ಲಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೇ MT-03 ವಿಷಯಕ್ಕೆ ಬಂದರೆ ದಿಟ್ಟ ವಿನ್ಯಾಸ ಮತ್ತು ರಸ್ತೆ ಕಾರ್ಯಕ್ಷಮತೆಯೊಂದಿಗೆ ರೂ. 3,49,900 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಮಿಡ್‌ನೈಟ್ ಸಯಾನ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

yamaha-announced-price-cut-on-r3-and-mt-03

ಕಳೆದ 10 ವರ್ಷಗಳಲ್ಲಿ, ಯಮಹಾ R3 ತನ್ನ ಟ್ರ್ಯಾಕ್-ಆಧಾರಿತ ನಿಖರತೆ, ಹೈ - ಪರ್ಫಾಮೆನ್ಸ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಜಾಗತಿಕವಾಗಿ ತನಗೆಂದೆ ಪ್ರತ್ಯೇಕ ಅಭಿಮಾನಿಗಳನ್ನು ಗಳಿಸಿದೆ. ಅದರ ಹಗುರವಾದ ಡೈಮೆಂಡ್ ಚೌಕಟ್ಟು, ಯಮಹಾದ ಐಕಾನಿಕ್ YZR-M1 ನಿಂದ ಸ್ಫೂರ್ತಿ ಪಡೆದ ಏರೋಡೈನಮಿಕ್ ವಿನ್ಯಾಸ ಮತ್ತು ಶಕ್ತಿಶಾಲಿ 321cc ಎಂಜಿನ್‌ನೊಂದಿಗೆ R3 ರೋಮಾಂಚಕ ಸವಾರಿ ಅನುಭವವನ್ನು ನೀಡುತ್ತದೆ.

50/50 ತೂಕ ವಿತರಣೆ, ಸ್ಪೋರ್ಟಿ ರೈಡಿಂಗ್ ಪೋಸ್ಚರ್ ಮತ್ತು ಸುಧಾರಿತ ಬ್ರೇಕಿಂಗ್ ವ್ಯವಸ್ಥೆಯು ಟ್ರ್ಯಾಕ್ ಮತ್ತು ರಸ್ತೆ ಉತ್ಸಾಹಿಗಳಿಗೆ ಯಮಹಾ R3 ಪರಿಪೂರ್ಣ ಒಡನಾಡಿಯಾಗಿದೆ. ಯಮಹಾ ಜಾಗತಿಕವಾಗಿ R3 ಪರಂಪರೆಯನ್ನು ಆಚರಿಸುತ್ತಿದ್ದು, ಈ ಬೆಲೆ ಪರಿಷ್ಕರಣೆಯು ತನ್ನ ಗ್ರಾಹಕರು ಮತ್ತು ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗಕ್ಕೆ ಬ್ರ್ಯಾಂಡ್‌ನ ಬದ್ಧತೆಯನ್ನು ಬಲಪಡಿಸುತ್ತದೆ.

yamaha-announced-price-cut-on-r3-and-mt-03

ಹೈಪರ್-ನೇಕೆಡ್ ಸ್ಟ್ರೀಟ್‌ಫೈಟರ್ ಆಗಿರುವ ಯಮಹಾ MT-03 ವಿಷಯಕ್ಕೆ ಬಂದರೆ, ಅದರ ಆಕ್ರಮಣಕಾರಿ ಡಿಸೈನ್ ಮತ್ತು ಟಾರ್ಕ್-ಕೇಂದ್ರಿತ ಕಾರ್ಯಕ್ಷಮತೆಯೊಂದಿಗೆ ಎದ್ದು ಕಾಣುತ್ತದೆ. ಚುರುಕು ಮತ್ತು ದೈನಂದಿನ ಬಳಕೆಯ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಇದು ನೇರವಾದ ಸವಾರಿ ಸ್ಥಾನ, ಟ್ವಿನ್-ಐ LED ಹೆಡ್‌ಲೈಟ್‌ಗಳು ಮತ್ತು ಅದರ ದಿಟ್ಟ ಪಾತ್ರವನ್ನು ಎತ್ತಿ ತೋರಿಸುವ ಮಾಸ್-ಫಾರ್ವರ್ಡ್ ಬಾಡಿವರ್ಕ್ ಹೊಂದಿದೆ.

ಯಮಹಾ R3 ಮೋಟಾರ್‌ಸೈಕ್‌ನಂತೆಯೇ MT-03 ಕೂಡ ಅದೇ 321cc ಎಂಜಿನ್‌ ಹೊಂದಿದ್ದು, ರೋಮಾಂಚಕ ವೇಗವರ್ಧನೆ ಮತ್ತು ಸುಗಮ ಪರ್ಫಾಮೆನ್ಸ್ ಹೊಂದಿದೆ. ಆದರೆ ಅದರ ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಮೊನೊ - ಕ್ರಾಸ್ ಹಿಂಭಾಗದ ಸಸ್ಪೆನ್ಷನ್ ನಗರ ಸಂಚಾರದಲ್ಲಿ ಸಾಟಿಯಿಲ್ಲದ ಪವರ್‌-ಫುಲ್ ಪರ್ಫಾಮೆನ್ಸ್‌ಗೆ ಹೇಳಿ ಮಾಡಿಸಿದಂತಿರುತ್ತದೆ.

ಬೆಲೆಯಲ್ಲಿನ ಈ ಬದಲಾವಣೆಯೊಂದಿಗೆ, ಯಮಹಾ ಪರ್ಫಾಮೆನ್ಸ್, ವಿನ್ಯಾಸ ಮತ್ತು ನಾವೀನ್ಯತೆ ಜೊತೆಗೆ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಬಯಸುವ ಗ್ರಾಹಕರಿಗೆ ಇನ್ನಷ್ಟು ಕೈಗೆಟುಕುವಂತೆ ಮಾಡಿದೆ. ಈ ಮೂಲಕ ಭಾರತದಲ್ಲಿ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ಯಮಹಾದ ನೆಲೆಯನ್ನು ಮತ್ತಷ್ಟು ಬಲಪಡಿಸಿದೆ. ಯಮಹಾ ಉತ್ಸಾಹಿಗಳನ್ನು ವ್ಯಾಪಕವಾಗಿ ಆಕರ್ಷಿಸುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 31, 2025, 13:40 [IST]
English summary
Yamaha announced price cut on r3 and mt 03
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+