ಯಮಹಾ ಜೋರು: ಬಿಡುಗಡೆಯಾಗಿ ವಾರವು ಆಗಿಲ್ಲ... ಫುಲ್ ಡಿಮ್ಯಾಂಡ್, ಆಗಲೆ ಡೆಲಿವರಿ ಪ್ರಾರಂಭ

ಯಮಹಾ ತನ್ನ ಬಹುನಿರೀಕ್ಷಿತ ಎಕ್ಸ್ಎಸ್ಆರ್ 155 (Yamaha XSR 155) ಮೋಟಾರ್‌ಸೈಕಲ್ ಅನ್ನು ಇತ್ತೀಚೆಗಷ್ಟೆ (ನವೆಂಬರ್ 4) ಬಿಡುಗಡೆ ಮಾಡಿತ್ತು. ಇದೀಗ ಬೈಕಿನ ವಿತರಣೆಯನ್ನು ಅಧಿಕೃತವಾಗಿ ಭಾರತದಲ್ಲಿ ಪ್ರಾರಂಭಿಸಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಸಜ್ಜಾಗಿರುವ ಈ ಬೈಕ್ ಬೆಲೆಯು ರೂ.1.50 ಲಕ್ಷ (ಎಕ್ಸ್ ಶೋರೂಂ) ಆಗಿದ್ದು, ಹೈ - ಪರ್ಫಾಮೆನ್ಸ್ ಮತ್ತು ರೆಟ್ರೊ ಮೋಡಿಯ ವಿಶಿಷ್ಟ ಮಿಶ್ರಣವಾಗಿದೆ. ಇದು ಯಮಹಾದ ಸರಣಿಯಲ್ಲಿ ಎದ್ದು ಕಾಣುವಂತಹ ಬೈಕ್ ಆಗಿದೆ. ಈ ಮೋಟಾರ್‌ಸೈಕಲ್‌ ಕುರಿತ ಸಂಪೂರ್ಣ ವಿವರುಗಳು ಇಲ್ಲಿವೆ.

ಯಮಹಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಗಳಾದ ಏರೋಕ್ಸ್-ಇ ಮತ್ತು ಇಸಿ-06 ಸೇರಿದಂತೆ ಹಲವಾರು ಹೊಸ ಮಾಡಲ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದ ನಂತರ Yamaha XSR 155 ಬಿಡುಗಡೆಯಾಗಿದೆ. ಈ ಹೊಸ ಉತ್ಪನ್ನ ಶ್ರೇಣಿಯೊಂದಿಗೆ, ಯಮಹಾ ಪರಿಸರ ಎಲೆಕ್ಟ್ರಿಕ್ ವಾಹನ ಬಳಕೆದಾರರಿಂದ ಹಿಡಿದು ಪೆಟ್ರೋಲ್ ವಾಹನಗಳನ್ನು ಪ್ರೀತಿಸುವ ಉತ್ಸಾಹಿಗಳವರೆಗೆ ಎಲ್ಲಾ ರೀತಿಯ ಸವಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

yamaha-started-deliveries-of-its-xsr-155-in-india

ಯಮಹಾ ಎಕ್ಸ್ಎಸ್ಆರ್ 155 ವಿಶೇಷತೆಗಳು: ಹೊಸ ಯಮಹಾ ಎಕ್ಸ್ಎಸ್ಆರ್ 155 ಮೋಟಾರ್‌ಸೈಕಲ್ 155 ಸಿಸಿ ಲಿಕ್ವಿಡ್-ಕೂಲ್ಡ್, 4-ವಾಲ್ವ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 18.1 ಬಿಎಚ್‌ಪಿ ಪವರ್ ಹಾಗೂ 14.2 ಎನ್‌ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 48.58 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಯಮಹಾ ಎಕ್ಸ್ಎಸ್ಆರ್ 155 ಮೋಟಾರ್‌ಸೈಕಲ್ 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಫೀಚರ್ಸ್ ವಿಷಯಕ್ಕೆ ಬಂದರೆ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಸ್ಮಾರ್ಟ್‌ಫೋನ್‌ ಬ್ಲ್ಯೂಟೂತ್ ಕನೆಕ್ಟಿವಿಟಿ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನ್ನು ಹೊಂದಿದೆ. 2005 ಮಿ.ಮೀ ಉದ್ದ, 805 ಮಿ.ಮೀ ಅಗಲ, 180 ಮಿ.ಮೀ ಎತ್ತರ, 810 ಮಿ.ಮೀ ಸೀಟ್ ಎತ್ತರವಿದೆ. 120 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1325 ಮಿ.ಮೀ ವೀಲ್‌ಬೇಸ್‌ ಇದೆ.

yamaha-started-deliveries-of-its-xsr-155-in-india

ಡಿಸೈನ್ ವಿಷಯಕ್ಕೆ ಬಂದರೆ, ಇದರ ನಿಯೋ-ರೆಟ್ರೊ ವಿನ್ಯಾಸವು ರಗಡ್ ಲುಕ್ ನೀಡುತ್ತದೆ. ಇದು ಹಳೆಯ ಸ್ಟೈಲಿಂಗ್ ಅನ್ನು ಹೊಸ ಯುಗದ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತದೆ. ಈ ಬೈಕ್ ದುಂಡಗಿನ ಎಲ್ಇಡಿ ಹೆಡ್ ಲ್ಯಾಂಪ್, ಹೊಂದಾಣಿಕೆಯಾಗುವ ದುಂಡಗಿನ ಎಲ್‌ಇಡಿ ಟೈಲ್ ಲೈಟ್ ಮತ್ತು ದಪ್ಪ "ಎಕ್ಸ್ ಎಸ್ ಆರ್ 155" ಬ್ರ್ಯಾಂಡಿಂಗ್ ನೊಂದಿಗೆ ಸೊಗಸಾದ ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್ ಹಾಗೂ ಫ್ಲಾಟ್ ಸಿಂಗಲ್-ಪೀಸ್ ಸೀಟ್ ಪಡೆದುಕೊಂಡಿದೆ.

ಮುಂಭಾಗ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ನೀಡಲಾಗಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 17 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮೆಟಾಲಿಕ್ ಗ್ರೇ, ವಿವಿಡ್ ರೆಡ್, ಗ್ರೇಯಿಶ್ ಗ್ರೀನ್ ಮೆಟಾಲಿಕ್ ಮತ್ತು ಮೆಟಾಲಿಕ್ ಬ್ಲೂ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

yamaha-started-deliveries-of-its-xsr-155-in-india

ಹೊಸ ಸವಾರರಿಗೆ ಅಥವಾ ಸರಳ ವಿನ್ಯಾಸವನ್ನು ಮೆಚ್ಚುವ ಯಾರಿಗಾದರೂ, ಈ ರೆಟ್ರೊ ಸ್ಟೈಲಿಂಗ್ ಕಣ್ಣಿಗೆ ಕಟ್ಟುತ್ತದೆ. ಇದರ ಕ್ಲಾಸಿಕ್ ನೋಟದ ಹೊರತಾಗಿಯೂ, ಪೂರ್ಣ ಎಲ್ಇಡಿ ಲೈಟಿಂಗ್ ಹಾಗೂ ಆಧುನಿಕ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ರೆಟ್ರೊ-ಶೈಲಿಯ ಎಲ್‌ಸಿಡಿ ಡಿಜಿಟಲ್ ಡಿಸ್ಪ್ಲೇ ಹಳೆಯ ಸೌಂದರ್ಯದ ಜೊತೆಗೆ ಆಧುನಿಕ ಪ್ರೀಮಿಯಂ ಭಾವನೆಯನ್ನು ನೀಡುತ್ತದೆ.

ಒಟ್ಟಾರೆ ಬಹುನಿರೀಕ್ಷಿತ ಯಮಹಾ ಎಕ್ಸ್ಎಸ್ಆರ್ 155 ಮೋಟಾರ್‌ಸೈಕಲ್ ಅನ್ನು ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಎಲ್ಲರ ಕಣ್ಣು ಕುಕ್ಕುವಂತಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮೇಲೆ ತಿಳಿಸಿರುವ ವಿವರಗಳೊಂದಿಗೆ ಬೈಕ್ ಕುರಿತ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Saturday, November 15, 2025, 15:18 [IST]
English summary
Yamaha started deliveries of its xsr 155 in india
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+