Auto Expo 2025: ಭಾರತಕ್ಕೆ ಯಮಹಾ ಹೊಸ ಬೈಕ್ ಎಂಟ್ರ... 100 ವರ್ಷ ಭವಿಷ್ಯದ ವಾಹನ, ನಡುಕ ಶುರು!

ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಎಲ್ಲಾ ಬ್ರಾಂಡ್‌ಗಳಂತಲ್ಲದೆ ಯಮಹಾ ತನ್ನ ಹೊಸತನವನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ. Y/AI ಎಂಬ ಫ್ಯೂಚರಿಸ್ಟಿಕ್ ಕಾನ್ಸೆಪ್ಟ್ ಮೋಟಾರ್‌ಸೈಕಲ್ ಅನ್ನು ಪ್ರದರ್ಶನಕ್ಕೆ ಇಟ್ಟು ಎಲ್ಲರ ಗಮನ ಸೆಳೆದಿದೆ. ಇದು ಯಮಹಾದ Y/AI (Yamaha Y/AI) ಆಕರ್ಷಕ ಕಾನ್ಸೆಪ್ಟ್ ಮಾಡಲ್ ಆಗಿದ್ದು, ತಂತ್ರಜ್ಞಾನದ ಉತ್ಸಾಹ ಮತ್ತು ವಿನ್ಯಾಸದ ವಿಕಾಸವನ್ನು ಸಂಯೋಜಿಸುವ ನವೀನ ಯೋಜನೆಯ ಫಲಿತಾಂಶವಾಗಿದೆ. ಇದರ ಡಿಸೈನ್ ಹಾಗೂ ಫೀಚರ್ಸ್ ಸಂಪೂರ್ಣ ಸೈ-ಫೈ ಸಿನಿಮಾಗಳಲ್ಲಿ ಕಾಣುವ ಫ್ಯೂಚರಿಸ್ಟಿಕ್ ಮೋಟಾರ್‌ಸೈಕಲ್‌ನಂತೆ ಇವೆ.

ಯಮಹಾ ಕಂಪನಿಯ ಎಐ ಪ್ರೇರಿತ ಕಾನ್ಸೆಪ್ಟ್ ಸೂಪರ್ ಬೈಕ್, ಕತ್ತಲೆಯಲ್ಲಿ ನೀಲಿ ಹೊಳಪನ್ನು ಹೊರಸೂಸುವ ಸ್ಪೋಕ್ ಲೆಸ್, ಸೆಮಿ-ಟ್ರಾನ್ಸಪರೆಂಟ್ (ಅರೆ-ಪಾರದರ್ಶಕ) ವೀಲ್‌ಗಳನ್ನು ಹೊಂದಿದೆ. ಈ ಭವಿಷ್ಯದ ಮೋಟಾರ್ಸೈಕಲ್ ಯಮಹಾ-ನೆಟ್‌ಫ್ಲಿಕ್ಸ್ ಪಾಲುದಾರಿಕೆಯಲ್ಲಿ ಹೊರೊಹೊಮ್ಮಿದ್ದು, ಇದು ನೆಟ್‌ಫ್ಲಿಕ್ಸ್ ಅನಿಮೆ ಸಿರೀಸ್ ಆಗಿರುವ ಟೋಕಿಯೊ ಓವರ್‌ರೈಡ್‌ನಲ್ಲಿ ನೋಡಬಹುದು.

yamaha-y-ai-concept-motorcycle-at-auto-expo-2025

ಇದು ಭವಿಷ್ಯದಲ್ಲಿ ಎಐ 100 ವರ್ಷಗಳ ನಿಯಂತ್ರಣದಲ್ಲಿರುವಾಗ ಹೇಗಿರಲಿದೆ ಎಂಬುದನ್ನು ತೋರಿಸುವ ಜಲಕ್ ಆಗಿದೆ. ಈ ಮೋಟಾರ್‌ಸೈಕಲ್ ಪವರ್ ಟ್ರೇನ್ ಅನ್ನು ಮರೆಮಾಡಲಾಗಿದ್ದು, ಎರಡು ಚಕ್ರಗಳ ಸೇತುವೆಯಂತಹ ವಸ್ತುವನ್ನು ಜೋಡಿಸಲಾಗಿದೆ. ಮುಂಭಾಗದಲ್ಲಿ ಹೆಡ್ ಲೈಟ್‌ಗಳಾಗಿ ಎರಡು ತೆಳುವಾದ ಪಟ್ಟಿಗಳನ್ನು ಹೊಂದಿದ್ದು, ಹಿಂಭಾಗದಲ್ಲಿ ಚೂಪಾದ ಫೋರ್ಕ್ ಟೈಲ್ ಲೈಟ್ ಇದೆ.

ಬ್ರಾಂಡ್ ಹೆಸರನ್ನು ಎಲ್ಲೂ ತೋರಿಸದೇ ಇದ್ದರು, ನೋಡುತಿದ್ದಂತೆ ಇದು ಯಮಹಾ ಮೋಟಾರ್‌ಸೈಕಲ್‌ ಎಂದು ಗುರುತು ಹಿಡಿಯುವಂತೆ ಡಿಸೈನ್ ಮಾಡಲಾಗಿದೆ. ಮೋಟಾರ್‌ಸೈಕಲ್ ಕೆಳಗಿನ ಭಾಗದಿಂದ Y ಆಕಾರದ ಚೌಕಟ್ಟಿನಿಂದ ಬೇರ್ಪಡಿಸಲಾಗಿದ್ದು, ಇದು ಯಮಹಾ ಹೆಸರನ್ನು ಸೂಚಿಸುತ್ತದೆ. ಉಳಿದಂತೆ ಮೆಟ್‌ಲ್‌ನಂತಹ ದೊಡ್ಡ ಭಾಗಗವು ಸೇತುವೆಯಂತೆ ಎರಡು ಚಕ್ರಗಳನ್ನು ಸಂಪರ್ಕಿಸುತ್ತದೆ.

yamaha-y-ai-concept-motorcycle-at-auto-expo-2025

ಭವಿಷ್ಯದ ದೂರದೃಷ್ಟಿಯ ಪರಿಕಲ್ಪನೆ: ಈ ಬೈಕ್ ಅನ್ನು ಬಿಡುಗಡೆ ಮಾಡಲಾಗುವುದಿಲ್ಲ, ಇದು ಕೇವಲ ಕಾನ್ಸೆಪ್ಟ್‌ ಮಾಡಲ್ ಆಗಿದೆ. ಇಂದಿನಿಂದ ನೂರು ವರ್ಷಗಳ ನಂತರ ಭವಿಷ್ಯದಲ್ಲಿ ಕಲ್ಪಿಸಿಕೊಳ್ಳಲಾದ Y/AI ಕೇವಲ ಕಲ್ಪನೆಯಿಂದ ಹುಟ್ಟಿದ ಆವಿಷ್ಕಾರವಾಗಿದೆ. ಯಮಹಾ ಕ್ರಿಯೇಟಿವ್ ಸೆಂಟರ್ ವಿನ್ಯಾಸಗೊಳಿಸಿದ ಮೂಲ ಬೈಕ್ ತಾಂತ್ರಿಕ ನಾವೀನ್ಯತೆ ಮತ್ತು ಸೌಂದರ್ಯದ ವಿನ್ಯಾಸವನ್ನು ಸಂಯೋಜಿಸುತ್ತದೆ.

ಜಪಾನಿನ ಮೋಟಾರ್ ಸೈಕಲ್ ಬ್ರಾಂಡ್‌ನ ಸಂಪ್ರದಾಯಕ್ಕೆ ತಕ್ಕಂತೆ ವಿಶ್ವಕ್ಕೆ ಯಮಹಾ ಪವರ್ ಅನ್ನು ಪರಿಚಯಿಸುವಂತಿದೆ. YZF-R1 ಮತ್ತು V-ಮ್ಯಾಕ್ಸ್‌ ನಂತಹ ಅಪ್ರತಿಮ ಮಾದರಿಗಳಿಂದ ಸ್ಫೂರ್ತಿ ಪಡೆದ Y/AI ಯಮಹಾ ಪವರ್‌ ಭವಿಷ್ಯದಲ್ಲಿ ಹೇಗಿರಲಿದೆ ಎಂಬುದನ್ನು ಮರು ವ್ಯಾಖ್ಯಾನಿಸುತ್ತದೆ. ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಲೀನಗೊಳ್ಳುವ ಜಗತ್ತಿನ್ನು ಪ್ರಸ್ತುತಪಡಿಸುತ್ತದೆ.

yamaha-y-ai-concept-motorcycle-at-auto-expo-2025

ಪ್ರದರ್ಶನದಲ್ಲಿರುವ ಇತರ ಮಾದರಿಗಳು: ಯಮಹಾ ಕಂಪನಿಯು ಆಟೋ ಎಕ್ಸ್‌ಪೋ 2025 ರಲ್ಲಿ YZR-M1 ಅನ್ನು ಸಹ ಪ್ರದರ್ಶಿಸಿದೆ. ಇದು ಫ್ಯಾಬಿಯೊ ಕ್ವಾರ್ಟರಾರೊ ಮತ್ತು ಅಲೆಕ್ಸ್ ರೀನ್ಸ್ ಅವರ ರೇಸಿಂಗ್ ಸೂಟ್‌ಗಳು, ಹೆಲ್ಮೆಟ್‌ಗಳು ಮತ್ತು ಗ್ಲೌಸ್‌ಗಳನ್ನು ಒಳಗೊಂಡ ಅಧಿಕೃತ ಮೋಟೋಜಿಪಿ ಗೇರ್‌ಗಳೊಂದಿಗೆ 500 ಕ್ಕೂ ಹೆಚ್ಚು ಪೋಡಿಯಂ ಫಿನಿಶ್‌ಗಳನ್ನು ಪ್ರದರ್ಶಿಸಿದೆ.

ಯಮಹಾದ R-ಸಿರೀಸ್‌ನ R15, R3, ಮತ್ತು R7 ಮಾದರಿಗಳು, ಜಪಾನ್‌ನ ಡಾರ್ಕ್ ಸೈಡ್ ಥೀಮ್‌ನೊಂದಿಗೆ ಯಮಹಾದ MT ಸಿರೀಸ್‌ನ MT-15, MT-03, ಮತ್ತು MT-09 ಸಹ ಇವೆ. ಸ್ಮಾರ್ಟ್ ಮೋಟಾರ್ ಜನರೇಟರ್ ತಂತ್ರಜ್ಞಾನವನ್ನು ಹೊಂದಿರುವ ಭಾರತದ ಮೊದಲ ಹೈಬ್ರಿಡ್ ಮೋಟಾರ್‌ಸೈಕಲ್ ಆಗಿರುವ 2025 FZ-S Fi DLX ಸಹ ಇಲ್ಲಿ ಪ್ರದರ್ಶಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 20, 2025, 12:50 [IST]
English summary
Yamaha y ai concept motorcycle at auto expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+