330 Km ಮೈಲೇಜ್.. 90,000 ರೂಪಾಯಿ, ಈ ಬಜಾಜ್ CNG ಬೈಕ್ ಕೊಳ್ಳಲು 5 ಪ್ರಮುಖ ಕಾರಣಗಳು
ಬಜಾಜ್ ಫ್ರೀಡಂ 125 (Bajaj Freedom 125) ಪ್ರಮುಖ ಸಿಎನ್‌ಜಿ ಮೋಟಾರ್‌ಸೈಕಲ್ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಸಿಗುತ್ತದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ನಾವಿಲ್ಲಿ ಇದೇ 'ಫ್ರೀಡಂ 125' ಬೈಕ್‌ನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.
ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯ (Most Affordable Price):
ಇದನ್ನು ಎಲ್ಲ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ಕನಿಷ್ಠ ರೂ.90,976 ಹಾಗೂ ಗರಿಷ್ಠ ರೂ.1.07 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಡ್ರಮ್, ಡ್ರಮ್ ಎಲ್ಇಡಿ ಹಾಗೂ ಡಿಸ್ಕ್ ಎಲ್ಇಡಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ತುಂಬಾ ಸರಳವಾದ ವಿನ್ಯಾಸ (Very Simple Design):
ನೂತನ 'ಬಜಾಜ್ ಫ್ರೀಡಂ 125' ತುಂಬಾ ಸರಳವಾದ ವಿನ್ಯಾಸವನ್ನು ಒಳಗೊಂಡಿದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲೈಟ್ ಮತ್ತು ಸಿಂಗಲ್-ಪೀಸ್ ಸೀಟ್‌ನ್ನು ಪಡೆದಿದೆ. ರೇಸಿಂಗ್ ರೆಡ್, ಸೈಬರ್ ವೈಟ್, ಎಬೊನಿ ಬ್ಲ್ಯಾಕ್, ಪ್ಯೂಟರ್ ಗ್ರೇ, ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್-ಗ್ರೇ ಮತ್ತು ಪ್ಯೂಟರ್ ಗ್ರೇ ಯೆಲ್ಲೋ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,340 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಕಡಿಮೆ ಚಾಲನಾ ವೆಚ್ಚಗಳು & ಉತ್ತಮವಾದ ಇಂಧನ ದಕ್ಷತೆ (Low Running Costs & Better Fuel Efficiency):
ಈ ಬೈಕ್ 124.58 ಸಿಸಿ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಪೆಟ್ರೋಲ್ (ಲೀಟರ್‌ಗೆ ರೂ102.92) ಬೆಲೆ ದುಬಾರಿಯಾಗಿದೆ. ಆದರೆ, ಸಿಎನ್‌ಜಿ ದರವು (ಕೆಜಿ ರೂ.89) ಅಗ್ಗವಾಗಿದೆ. ಜೊತೆಗೆ ಸರಿ ಸುಮಾರು 330 ಕಿ.ಮೀ (ಸಿಎನ್‌ಜಿ - 200 ಕಿ.ಮೀ & ಪೆಟ್ರೋಲ್ 130 ಕಿ.ಮೀ) ಮೈಲೇಜ್ ಕೊಡುತ್ತದೆ.

ಪರಿಸರ ಸ್ನೇಹಿ ಪ್ರಯಾಣ (Eco-Friendly Travel):
ಹೊಸ 'ಬಜಾಜ್ ಫ್ರೀಡಂ 125' ಮೋಟಾರ್‌ಸೈಕಲ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, ಇಂಗಾಲ (carbon) ಹೊರಸೂಸುವಿಕೆಯ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಕಡಿಮೆಗೊಳಿಸುತ್ತದೆ. ಹೀಗಾಗಿ, ಪರಿಸರ ಸ್ನೇಹಿಯಾದ ದ್ವಿಚಕ್ರ ವಾಹನ (Two wheelers) ಹುಡುಕುವವರಿಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ.
ಸಾಟಿಯಿಲ್ಲದ ಹತ್ತಾರು ವೈಶಿಷ್ಟ್ಯಗಳು (Dozens Of Features):
ಇದು ಫುಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆಯಲಿದೆ. 7.85 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಒಟ್ಟಾರೆಯಾಗಿ 'ಬಜಾಜ್ ಫ್ರೀಡಂ 125'ನ್ನು ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಸೆಕೆಂಡ್ ಬೈಕ್ ಮಾರುಕಟ್ಟೆಯಲ್ಲಿಯೂ ವ್ಯಾಪಕವಾದ ಬೇಡಿಕೆಯಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಹೋಂಡಾ ಎಸ್‌ಪಿ 125, ಹೋಂಡಾ ಶೈನ್ 125, ಟಿವಿಎಸ್ ರೈಡರ್, ಬಜಾಜ್ ಪಲ್ಸರ್ 125, ಹೀರೋ ಗ್ಲಾಮರ್ ಹಾಗೂ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








