ಜುಲೈನಲ್ಲಿ ಹೊಸ ಸ್ಕೂಟರ್ ಬಿಡುಗಡೆ ಸಜ್ಜು: ಖರ್ಚಿಲ್ಲದೆ ನಿತ್ಯ 150 ಕಿ.ಮೀ ಓಡಬಲ್ಲದು!
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಝೀಲಿಯೋ ಇ (ZELIO E) ಮೊಬಿಲಿಟಿ, ತನ್ನ ಜನಪ್ರಿಯ ಲೆಜೆಂಡರ್ ಸ್ಕೂಟರ್‌ನ ಫೇಸ್‌ಲಿಫ್ಟ್ ಮಾದರಿಯ ಮುಂಬರುವ ಬಿಡುಗಡೆಯನ್ನು ಘೋಷಿಸಿದೆ. ಹೊಸ ಡಿಸೈನ್, ಹೊಸ ಬಣ್ಣ ಆಯ್ಕೆಗಳು ಮತ್ತು ವರ್ಧಿತ ಫೀಚರ್‌ಗಳೊಂದಿಗೆ, ಹೊಸ ಲೆಜೆಂಡರ್ ಲೋ-ಸ್ಪೀಡ್ ಇ-ಸ್ಕೂಟರ್ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಸಜ್ಜಾಗಿದೆ. 2025 ರ ಜುಲೈನಲ್ಲಿ ಬಿಡುಗಡೆ ನಿಗದಿಪಡಿಸಲಾಗಿದ್ದು, ಲೆಜೆಂಡರ್ ಫೇಸ್‌ಲಿಫ್ಟ್ ಪರ್ಫಾಮೆನ್ಸ್, ಕೈಗೆಟುಕುವಿಕೆ ಮತ್ತು ಆಧುನಿಕ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಝೀಲಿಯೋ ಇ ತಿಳಿಸಿದೆ.
ಭಾರತದ ವಿಕಸಿಸುತ್ತಿರುವ ನಗರ ಪ್ರಯಾಣಿಕರ ಅಗತ್ಯಗಳಿಗೆ ಅನುಗುಣವಾಗಿ ಈ ಹೊಸ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲೆಜೆಂಡರ್ ದಕ್ಷ 60/72V BLDC ಮೋಟಾರ್‌ನಿಂದ ಚಾಲಿತವಾಗಿದ್ದು, ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ದೈನಂದಿನ ಪ್ರಯಾಣಕ್ಕೆ ಪರಿಸರ ಸ್ನೇಹಿ ಪರಿಹಾರವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಫೇಸ್‌ಲಿಫ್ಟೆಡ್ ಲೆಜೆಂಡರ್ ಗಂಟೆಗೆ 25 ಕಿ.ಮೀ ವೇಗ ಮತ್ತು ಪ್ರತಿ ಚಾರ್ಜ್‌ಗೆ 150 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ. ವಿಶ್ವಾಸಾರ್ಹತೆ ಮತ್ತು ಕಡಿಮೆ ಚಾಲನಾ ವೆಚ್ಚಗಳನ್ನು ಒಳಗೊಂಡಿರುವ ಸ್ಕೂಟರ್‌ಗಳಿಗಾಗಿ ಹುಡುಕುತ್ತಿರುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. ಬಿಡುಗಡೆಯ ನಂತರ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ನಿರೀಕ್ಷೆಯಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಇನ್ನು ಇದರ ಡಿಸೈನ್ ಬಗ್ಗೆ ಹೇಳಿಕೊಂಡಿರುವ ಕಂಪನಿಯು, ಈ ಫೇಸ್‌ಲಿಫ್ಟ್ ಮಾದರಿಯನ್ನು ವಿಭಿನ್ನವಾಗಿಸುವುದು ಅದರ ಹೊಸ ಗ್ರಾಫಿಕ್ಸ್, ಆಧುನೀಕರಿಸಿದ ಬಾಡಿ ಸ್ಟೈಲಿಂಗ್, ಸ್ಪೋರ್ಟಿ ಬೋಲ್ಡ್ ಲುಕ್ - ಯುವ ಮತ್ತು ಸ್ಟೈಲ್ ಬಗ್ಗೆ ಕಾಳಜಿಯುಳ್ಳ ಸವಾರರನ್ನು ಆಕರ್ಷಿಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಝೀಲಿಯೋ ಇ ತಿಳಿಸಿದೆ.
ಸ್ಕೂಟರ್ ಕುರಿತು ಪ್ರತಿಕ್ರಿಯಿಸಿದ ZELIO E ಮೊಬಿಲಿಟಿ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಆರ್ಯ, "ದಿ ಲೆಜೆಂಡರ್ ಬಹಳ ಹಿಂದಿನಿಂದಲೂ ನಮ್ಮ ಪೋರ್ಟ್‌ಫೋಲಿಯೊದಲ್ಲಿ ಅಚ್ಚುಮೆಚ್ಚಿನದಾಗಿದೆ, ಅದರ ದಕ್ಷತೆ, ವಿಶ್ವಾಸಾರ್ಹತೆ ಮತ್ತು ದೈನಂದಿನ ಪ್ರಾಯೋಗಿಕತೆಗಾಗಿ ಮೆಚ್ಚುಗೆ ಪಡೆದಿದೆ. ಅದರ ಫೇಸ್‌ಲಿಫ್ಟ್‌ನೊಂದಿಗೆ ಲೆಜೆಂಡರ್ ಮತ್ತೆ ದಿಟ್ಟ, ತಾಜಾ ಮತ್ತು ಇಂದಿನ ಸವಾರರ ಆಕಾಂಕ್ಷೆಗಳಿಗೆ ಇನ್ನಷ್ಟು ಹೊಂದಿಕೆಯಾಗುತ್ತದೆ.
ಈ ನವೀಕರಣವು ನಮ್ಮ ಗ್ರಾಹಕರು ತೋರಿಸಿರುವ ನಂಬಿಕೆ ಮತ್ತು ಪ್ರೀತಿಗೆ ಗೌರವವಾಗಿದೆ. ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಸ್ಟೈಲಿಶ್, ಕೈಗೆಟುಕುವ ಮತ್ತು ಭವಿಷ್ಯಕ್ಕೆ ಸಿದ್ಧವಾಗಿಸುವ ನಮ್ಮ ಪ್ರಯಾಣದಲ್ಲಿ ಒಂದು ಹೆಜ್ಜೆ ಮುಂದಿದೆ. ಮುಂಬರಲಿರುವ ನಮ್ಮ ಹೊಸ ಸ್ಕೂಟರ್ ನಗರ ಪ್ರಯಾಣಗಳಿಗೆ ಬೆಸ್ಟ ಆಯ್ಕೆಯಾಗಿ ನಿಲ್ಲಲಿದೆ. ಸಣ್ಣ ಪ್ರಯಾಣಗಳಿಗೆ ಪ್ರಮುಖ ಸಾರಿಗೆ ಮೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ZELIO E ಮೊಬಿಲಿಟಿ 2,00,000 ಕ್ಕೂ ಹೆಚ್ಚು ಗ್ರಾಹಕರು ಮತ್ತು 400 ಕ್ಕೂ ಹೆಚ್ಚು ಔಟ್‌ಲೆಟ್‌ಗಳ ದೃಢವಾದ ಡೀಲರ್‌ಶಿಪ್ ಜಾಲದೊಂದಿಗೆ, ಬ್ರ್ಯಾಂಡ್ 2025 ರ ಅಂತ್ಯದ ವೇಳೆಗೆ 1,000 ಡೀಲರ್‌ಶಿಪ್‌ಗಳಿಗೆ ವಿಸ್ತರಿಸುವ ಗುರಿಯಿದೆ. ZELIO ಭಾರತದ ಹಸಿರು ಸಾರಿಗೆಯ ದೊಡ್ಡ ಗುರಿಗಳೊಂದಿಗೆ ಹೊಂದಿಕೊಂಡು ವಿದ್ಯುತ್ ಚಲನಶೀಲತೆಗೆ ಜಾಗೃತಿಯನ್ನು ಹೆಚ್ಚಿಸುವುದನ್ನು ಮುಂದುವರೆಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








