ಬಜಾಜ್ ಪ್ಲಾಟಿನಾ 100 vs ಹೋಂಡಾ ಶೈನ್ 100: ಇವೆರೆಡು ಬಡವರ ಬಂಡಿಗಳು.. ಯಾವುದು ಬೆಸ್ಟ್, ನೀವೇ ಹೇಳಿ?

ಬಜಾಜ್ ಪ್ಲಾಟಿನಾ 100 (Bajaj Platina 100) ಹಾಗೂ ಹೋಂಡಾ ಶೈನ್ 100 (Honda Shine 100) ವಿಶ್ವಾಸಾರ್ಹ ಪ್ರಯಾಣಿಕ ಬೈಕ್‌ಗಳಾಗಿ ಹೊರಹೊಮ್ಮಿವೆ. ತುಂಬಾ ಸರಳವಾದ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿವೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ಗಳ ಬೆಲೆ, ಕಾರ್ಯಕ್ಷಮತೆ ಮತ್ತು ವಿಶೇಷತೆಗಳ ಕುರಿತು ಹೋಲಿಕೆ ಮಾಡಿದ್ದೇವೆ.

ಬೆಲೆ (Price):

ನೂತನ 'ಬಜಾಜ್ ಪ್ಲಾಟಿನಾ 100' ರೂ.65,850 ದರವನ್ನು ಪಡೆದಿದೆ. ಅದೇ ರೀತಿಯಲ್ಲಿ 'ಹೋಂಡಾ ಶೈನ್ 100' ರೂ.65,561 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿವೆ. ಇವೆರೆಡು ಬೈಕ್‌ಗಳ ದರವು ಹೆಚ್ಚು - ಕಮ್ಮಿ ಒಂದೇ ರೀತಿಯಲ್ಲಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಸುಲಭವಾಗಿ ಕೈಗೆಟುಕುತ್ತದೆ.

Bajaj Platina 100 vs Honda Shine 100 Which Bike Best Details

ವಿನ್ಯಾಸ (Design):

ಇವುಗಳ ವಿನ್ಯಾಸವು ಚೆನ್ನಾಗಿದೆ. 'ಪ್ಲಾಟಿನಾ 100' ಉತ್ತಮವಾಗಿರುವ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಬ್ಲ್ಯಾಕ್-ರೆಡ್, ಬ್ಲ್ಯಾಕ್-ಸಿಲ್ವರ್, ಬ್ಲ್ಯಾಕ್-ಗೋಲ್ಡ್ ಮತ್ತು ಬ್ಲ್ಯಾಕ್-ಬ್ಲ್ಯೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,255 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಶೈನ್ 100' ಅತ್ಯಾಕರ್ಷಕವಾದ ಹೆಡ್‌ಲ್ಯಾಂಪ್ ಮತ್ತು ಟೈಲ್ ಲೈಟ್‌ನ್ನು ಪಡೆದಿದೆ. ಆರೆಂಜ್ ವಿತ್ ಬ್ಲ್ಯಾಕ್, ಗ್ರೀನ್ ವಿತ್ ಬ್ಲ್ಯಾಕ್, ಗ್ರೇ ವಿತ್ ಬ್ಲ್ಯಾಕ್, ಬ್ಲ್ಯೂ ವಿತ್ ಬ್ಲ್ಯಾಕ್ ಮತ್ತು ರೆಡ್ ವಿತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,245 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ಕಾರ್ಯಕ್ಷಮತೆ (Performance):

ಈ ಮೋಟಾರ್‌ಸೈಕಲ್‌ಗಳು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿವೆ. 'ಬಜಾಜ್ ಪ್ಲಾಟಿನಾ 100' ಬೈಕ್, 102-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 75 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಬರೀ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

'ಹೋಂಡಾ ಶೈನ್ 100' ಮೋಟಾರ್‌ಸೈಕಲ್‌, 98.98 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 65 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 7.82 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಮೈಲೇಜ್ ವಿಚಾರದಲ್ಲಿ 'ಶೈನ್'ಗಿಂತ ಪ್ಲಾಟಿನಾ ಮುಂದಿದೆ ಎಂದು ಹೇಳಬಹುದು.

ವೈಶಿಷ್ಟ್ಯಗಳು (Features):

ಬಜಾಜ್ ಪ್ಲಾಟಿನಾ 100 ಮತ್ತು ಹೋಂಡಾ ಶೈನ್ 100 ಬೈಕ್‌ಗಳೆರೆಡು ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. 'ಪ್ಲಾಟಿನಾ' ಅನಲಾಗ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ & ಹಿಂಭಾಗ (ರೇರ್) ಡುಯಲ್-ಸ್ಪ್ರಿಂಗ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

'ಶೈನ್' ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೆನ್ಸರ್ ಮತ್ತು ಸಿಂಗಲ್-ಪೀಸ್ ಸೀಟ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಒಟ್ಟಾರೆಯಾಗಿ, ಬಜಾಜ್ ಪ್ಲಾಟಿನಾ 100 ಮತ್ತು ಹೋಂಡಾ ಶೈನ್ 100 ಮೋಟಾರ್‌ಸೈಕಲ್‌ಗಳೆರೆಡು ಒಂದಕ್ಕಿಂದ ಒಂದು ಅದ್ಬುತವಾಗಿವೆ. ಹಳ್ಳಿ ಹಾಗೂ ಪಟ್ಟಣ ಪ್ರದೇಶದ ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ.. ನಿಮಿಷ್ಟದ ಬೈಕ್ ಯಾವುದೆಂದು ಕಾಮೆಂಟ್ ಮಾಡಿರಿ.

More from DriveSpark

Article Published On: Sunday, January 4, 2026, 17:23 [IST]
English summary
Bajaj platina 100 vs honda shine 100 which bike best details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+