Bajaj Chetak: 91,399 ರೂಪಾಯಿ..113 Km ಓಡುತ್ತೆ.. ಹೊಸ 'ಬಜಾಜ್ ಚೇತಕ್ C25'ಗೆ 3 ಪರ್ಯಾಯ ಇ-ಸ್ಕೂಟರ್‌ಗಳಿವು!

ನಿನ್ನೆ ಹೊಚ್ಚ ಹೊಸ ಬಜಾಜ್ ಚೇತಕ್ ಸಿ25 (Bajaj Chetak C25) ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆಗೊಂಡಿದೆ. ಇದು ರೂ.91,399 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಓಷನ್ ಟೀಲ್, ರೇಸಿಂಗ್ ರೆಡ್, ಆಕ್ಟಿವ್ ಬ್ಲ್ಯಾಕ್, ಓಪಲೆಸೆಂಟ್ ಸಿಲ್ವರ್, ಕ್ಲಾಸಿಕ್ ವೈಟ್ ಹಾಗೂ ಮಿಸ್ಟಿ ಯೆಲ್ಲೋ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,225 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 108 ಕೆಜಿ ತೂಕವಿದೆ.

ನೂತನ 'ಚೇತಕ್ ಸಿ25' ಇ-ಸ್ಕೂಟರ್ 2.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 113 ರೇಂಜ್ (ಮೈಲೇಜ್) ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಮ್ಯೂಸಿಕ್ ಪ್ಲೇಬ್ಯಾಕ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Best 3 Alternative Electric Scooters for Bajaj Chetak C25 Ather Rizta TVS iQube And Hero Vida VX2

ನೀವು ಇದೇ 'ಬಜಾಜ್ ಚೇತಕ್ ಸಿ25'ಗೆ ಬದಲಾಗಿ ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಎಥರ್ ರಿಜ್ಟಾ, ಟಿವಿಎಸ್ ಐಕ್ಯೂಬ್, ಹೀರೋ ವಿಡಾ ವಿಎಕ್ಸ್2ಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಎಥರ್ ರಿಜ್ಟಾ (Ather Rizta):

ಇದು ಜನಪ್ರಿಯ ಸ್ಕೂಟರ್ ಆಗಿದೆ. 'ಬಜಾಜ್ ಚೇತಕ್ ಸಿ25'ಗೆ ಪರ್ಯಾಯ ಆಯ್ಕೆಯಾಗಲಿದೆ. ಅದಕ್ಕೆ ತಕ್ಕಂತೆ ರೂ.1.15 ಲಕ್ಷದಿಂದ ರೂ.1.32 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಯಾಚಿನ್ ವೈಟ್, ಟೆರಾಕೋಟಾ ರೆಡ್ ಹಾಗೂ ಪ್ಯಾಂಗೊಂಗ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 150 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 125 ಕೆಜಿ ತೂಕವಿದೆ.

Best 3 Alternative Electric Scooters for Bajaj Chetak C25 Ather Rizta TVS iQube And Hero Vida VX2

ಹೊಸ 'ರಿಜ್ಟಾ' 2.9 ಹಾಗೂ 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ಗಳನ್ನು ತನ್ನದಾಗಿಸಿಕೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಮತ್ತು ಮಲ್ಟಿ ಪರ್ಪಸ್ ಚಾರ್ಜರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಟಿವಿಎಸ್ ಐಕ್ಯೂಬ್ 3.1 ಕೆಡಬ್ಲ್ಯೂಹೆಚ್ (TVS iQube 3.1 kWh):

ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು 'ಬಜಾಜ್ ಚೇತಕ್ ಸಿ25'ಗೆ ಬದಲಾಗಿಯೂ ಕೊಂಡುಕೊಳ್ಳಬಹುದು. ರೂ.1.16 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೋಡಲು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ವೈಟ್, ಟೈಟಾನಿಯಂ ಗ್ರೇ ಮತ್ತು ಬೀಜ್‌ ವಿತ್ ಸ್ಟಾರ್‌ಲೈಟ್ ಬ್ಲೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 157 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,301 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 117 ಕೆಜಿ ತೂಕವಿದೆ.

Best 3 Alternative Electric Scooters for Bajaj Chetak C25 Ather Rizta TVS iQube And Hero Vida VX2

ನೂತನ 'ಐಕ್ಯೂಬ್' 3.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 121 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಸ್ಕ್ರೀನ್, ಹಿಲ್ ಹೋಲ್ಡ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ವಿಡಾ ವಿಎಕ್ಸ್2 (Hero Vida VX2):

ಇದೊಂದು ಪ್ರಮುಖ ಇ-ಸ್ಕೂಟರ್ ಆಗಿದೆ. ರೂ.99,490 ದಿಂದ ರೂ.1.21 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಪರ್ಲ್ ಬ್ಲ್ಯಾಕ್, ನೆಕ್ಸಸ್ ಬ್ಲೂ, ಪರ್ಲ್ ರೆಡ್, ಮ್ಯಾಟ್ ವೈಟ್, ಮ್ಯಾಟ್ ಲೈಮ್ ಮತ್ತು ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 115 ಕೆಜಿ ತೂಕವಿದೆ.

Best 3 Alternative Electric Scooters for Bajaj Chetak C25 Ather Rizta TVS iQube And Hero Vida VX2

ಹೊಸ 'ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್, 2.2 ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 142 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್ ಮತ್ತು ರಿಮೋಟ್ ಇಮೊಬಿಲೈಸೇಶನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

More from DriveSpark

Article Published On: Thursday, January 15, 2026, 11:39 [IST]
English summary
Best 3 alternative electric scooters for bajaj chetak c25 ather rizta tvs iqube and hero vida vx2
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+