ಹೆಲ್ಮೆಟ್ ತಪಾಸಣೆ ತೀವ್ರ: ದಂಡ ತಪ್ಪಿಸಲು ಈ ISI ಹೆಲ್ಮೆಟ್‌ಗಳನ್ನು ಬಳಸಿ, ಸುರಕ್ಷಿತವಾಗಿರಿ

ಈ ವಾರ ಸಂಚಾರ ಪೊಲೀಸರ ಹೆಲ್ಮೆಟ್ ತಪಾಸಣೆ ಕಾರ್ಯಚರಣೆ ತೀವ್ರಗೊಂಡಿದೆ. ದೆಹಲಿಯಲ್ಲಿ ಕಳೆದ ವಾರ ನಿಯಮ ಉಲ್ಲಂಘಿಸಿದ 30,000ಕ್ಕೂ ಹೆಚ್ಚು ಮಂದಿಗೆ ದಂಡ ಹಾಕಲಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಧರಿಸದ್ದಕ್ಕೇ ಸಂಬಂಧಿಸಿವೆ. ಸೆಪ್ಟೆಂಬರ್ 1 ರಂದು ಉತ್ತರ ವಲಯದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲೇ ಹೆಲ್ಮೆಟ್ ರಹಿತ ಚಾಲನೆಗೆ 751 ಚಲನ್‌ಗಳನ್ನು ನೀಡಲಾಗಿದೆ. ಇನ್ನು ಛತ್ರಪತಿ ಸಂಭಾಜಿನಗರದಲ್ಲಂತೂ ಪೊಲೀಸರು ಕೇವಲ ಎರಡೇ ದಿನಗಳಲ್ಲಿ 9,000ಕ್ಕೂ ಹೆಚ್ಚು ಸವಾರರಿಗೆ ದಂಡ ವಿಧಿಸಿದ್ದು, ಮುಂಬರುವ ವಾರಾಂತ್ಯಗಳಲ್ಲಿ ತಪಾಸಣೆ ಇನ್ನಷ್ಟು ಬಿಗಿಯಾಗುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.

ಹಾಗಾದ್ರೆ ಪೊಲೀಸರು ಮುಖ್ಯವಾಗಿ ಯಾವುದಕ್ಕೆಲ್ಲ ದಂಡ ವಿಧಿಸುತ್ತಿದ್ದಾರೆ? ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194D ಪ್ರಕಾರ, ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿಕೆ ಮಾಡಿದರೆ ₹1,000 ದಂಡ ಮತ್ತು 3 ತಿಂಗಳ ಕಾಲ ಚಾಲನಾ ಪರವಾನಗಿ (DL) ಅಮಾನತುಗೊಳಿಸಲಾಗುತ್ತದೆ. ಕಳಪೆ ಮಟ್ಟದ ಅಥವಾ ISI ಮುದ್ರೆ ಇಲ್ಲದ ಹೆಲ್ಮೆಟ್ ಧರಿಸುವುದು ಹಾಗೂ ಬೆಲ್ಟ್ (ಸ್ಟ್ರಾಪ್) ಹಾಕದಿರುವುದಕ್ಕೂ ದೆಹಲಿ ಪೊಲೀಸರು ದಂಡ ಜಡಿಯುತ್ತಿದ್ದಾರೆ. ಹಿಂಬದಿ ಸವಾರರು ಹೆಲ್ಮೆಟ್ ಹಾಕದಿದ್ದರೂ ₹1,000 ದಂಡ ಬೀಳಲಿದೆ. ಇನ್ನು ಚಾಲನೆ ಮಾಡುವಾಗ ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡಿದರೆ ₹5,000 ದಂಡ ಖಚಿತ, ಪದೇ ಪದೇ ನಿಯಮ ಉಲ್ಲಂಘಿಸಿದರೆ ದಂಡದ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ.

Helmet Rules 2026: How to Avoid Traffic Fines and Choose the Best ISI Certified Helmets for Safety

ಹೆಲ್ಮೆಟ್ ತಪಾಸಣೆ: ISI ಪ್ರಮಾಣೀಕರಣ ಪರಿಶೀಲಿಸುವುದು ಹೇಗೆ? ಯಾವುದು ಸೇಫ್?

ವಾರಾಂತ್ಯದ ರೈಡಿಂಗ್ ಹೊರಡುವ ಮುನ್ನ ನಿಮ್ಮ ಹೆಲ್ಮೆಟ್ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಹೆಲ್ಮೆಟ್‌ನ ಹೊರಭಾಗ ಅಥವಾ ಸ್ಟ್ರಾಪ್ ಮೇಲಿರುವ IS 4151 ಮಾರ್ಕ್ ಮತ್ತು BIS ಲೈಸೆನ್ಸ್ ಸಂಖ್ಯೆಯನ್ನು ಒಮ್ಮೆ ಚೆಕ್ ಮಾಡಿ. 'BIS Care' ಆಪ್ ಬಳಸಿ ಈ ಲೈಸೆನ್ಸ್ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ ಅಥವಾ ಎಂಟರ್ ಮಾಡಿ ಪರಿಶೀಲಿಸಿ, ಅದರ ಸ್ಕ್ರೀನ್‌ಶಾಟ್ ತೆಗೆದಿಟ್ಟುಕೊಳ್ಳಿ. ISI ಪ್ರಮಾಣೀಕೃತ ಫುಲ್-ಫೇಸ್ ಮತ್ತು ಓಪನ್-ಫೇಸ್ ಹೆಲ್ಮೆಟ್‌ಗಳಿಗೆ ಮಾತ್ರ ಅನುಮತಿ ಇದ್ದು, ಕಳಪೆ ಗುಣಮಟ್ಟದ 'ಹಾಫ್' ಹೆಲ್ಮೆಟ್‌ಗಳನ್ನು ಧರಿಸಿದರೆ ದಂಡ ತೆರಬೇಕಾಗುತ್ತದೆ.

ಹೆಲ್ಮೆಟ್ ನಿಯಮಗಳು: ಬ್ಲೂಟೂತ್, ಹಿಂಬದಿ ಸವಾರರು ಮತ್ತು ಮಕ್ಕಳ ಸುರಕ್ಷತೆಗೆ ಏನು ರೂಲ್ಸ್?

ಗಮನ ಬೇರೆಡೆಗೆ ಸೆಳೆಯದಿದ್ದರೆ ಬ್ಲೂಟೂತ್ ಇಂಟರ್‌ಕಾಮ್‌ಗಳನ್ನು ಬಳಸಲು ಅಭ್ಯಂತರವಿಲ್ಲ. ಆದರೆ ರೈಡಿಂಗ್ ವೇಳೆ ಕೈಯಲ್ಲಿ ಫೋನ್ ಹಿಡಿದು ಮಾತನಾಡಿದರೆ ₹5,000 ದಂಡ ವಿಧಿಸಲಾಗುತ್ತದೆ. ಸೌಂಡ್ ಕಡಿಮೆ ಇರಲಿ ಮತ್ತು ಹೆಲ್ಮೆಟ್‌ಗೆ ಡ್ರಿಲ್ ಮಾಡದೆ, ನೀಡಲಾದ ಕ್ಲಾಂಪ್‌ಗಳನ್ನು ಬಳಸಿ ಬ್ಲೂಟೂತ್ ಸಾಧನವನ್ನು ಅಳವಡಿಸಿ. ಚಾಲನೆ ವೇಳೆ ಚಿನ್-ಸ್ಟ್ರಾಪ್ (ಗಲ್ಲದ ಬೆಲ್ಟ್) ಸದಾ ಲಾಕ್ ಆಗಿರಲಿ. ನಾಲ್ಕು ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ (ಸುರಕ್ಷತಾ ಪಟ್ಟಿ), ಚೈಲ್ಡ್ ಹೆಲ್ಮೆಟ್ ಕಡ್ಡಾಯ ಹಾಗೂ ಬೈಕ್ ವೇಗ ಗಂಟೆಗೆ 40 ಕಿ.ಮೀ ಮೀರಬಾರದು.

ಹೆಲ್ಮೆಟ್ ಶಾಪಿಂಗ್: ₹2,000 ಮತ್ತು ₹5,000 ಒಳಗಿನ ಅತ್ಯುತ್ತಮ ISI ಹೆಲ್ಮೆಟ್‌ಗಳು

ದೈನಂದಿನ ಪ್ರಯಾಣ, ಹೈವೇ ರೈಡಿಂಗ್ ಹಾಗೂ ಬೆಂಗಳೂರಿನ ಮಳೆಯ ವಾತಾವರಣಕ್ಕೂ ಹೊಂದುವ ಕೆಲವು ಅತ್ಯುತ್ತಮ ISI ಹೆಲ್ಮೆಟ್‌ಗಳು ಇಲ್ಲಿವೆ. ಇವು ಉತ್ತಮ ಗಾಳಿಯಾಡುವಿಕೆ (Airflow), ಸ್ಪಷ್ಟ ವೈಸರ್, ಸೌಕರ್ಯ ಮತ್ತು ಬಿಡಿಭಾಗಗಳ ಲಭ್ಯತೆಗೆ ಹೆಸರಾಗಿವೆ. ದರ ಮತ್ತು ಲಭ್ಯತೆ ಬದಲಾಗುತ್ತಿರುವುದರಿಂದ ಆರ್ಡರ್ ಮಾಡುವ ಮುನ್ನ ಸೈಜ್ ಸರಿಯಾಗಿದೆಯೇ ಎಂದು ಪರಿಶೀಲಿಸಿ ಹಾಗೂ ಡೆಲಿವರಿ ವೇಳೆ 'BIS Care' ಆಪ್‌ನಲ್ಲಿ ISI ಖಾತರಿಪಡಿಸಿಕೊಳ್ಳಿ.

ಬಜೆಟ್ ಮಾಡೆಲ್ ಪ್ರಮಾಣೀಕರಣ ಏತಕ್ಕಾಗಿ ಸರಿಹೊಂದುತ್ತದೆ? ಅಂದಾಜು ಬೆಲೆ
₹2,000 ಒಳಗೆ ವೆಗಾ ಎಡ್ಜ್ ಫುಲ್ ಫೇಸ್ (Vega Edge Full Face) ISI ಹಗುರವಾಗಿದೆ, ವೈಸರ್ ಸುಲಭವಾಗಿ ಬದಲಾಯಿಸಬಹುದು, ಬೇಸಿಗೆಗೆ ಉತ್ತಮ ಗಾಳಿಯಾಡುವಿಕೆ ₹998–₹1,300.
₹2,000 ಒಳಗೆ ಸ್ಟಡ್ಸ್ ಥಂಡರ್ ಫುಲ್ ಫೇಸ್ (Studds Thunder Full Face) ISI ಪರ್ಫೆಕ್ಟ್ ಫಿಟ್ಟಿಂಗ್, ಬಿಡಿಭಾಗಗಳು ಸುಲಭವಾಗಿ ಲಭ್ಯ ₹1,900–₹2,000.
₹5,000 ಒಳಗೆ ಆಕ್ಸರ್ ಅಪೆಕ್ಸ್ (Axor Apex) ISI, ECE, DOT ಪಿನ್‌ಲಾಕ್-ರೆಡಿ ವೈಸರ್ ಮತ್ತು ಹೈವೇ ರೈಡಿಂಗ್‌ನಲ್ಲಿ ಉತ್ತಮ ಸ್ಥಿರತೆ ₹4,800–₹4,950.
₹5,000 ಒಳಗೆ ಎಸ್‌ಎಮ್‌ಕೆ ಸ್ಟೆಲ್ಲಾರ್ (SMK Stellar) ISI, ECE 22.06 ಗಟ್ಟಿಮುಟ್ಟಾದ ಶೆಲ್, ಸುಲಭವಾಗಿ ಪಿನ್‌ಲಾಕ್ ಅಪ್‌ಗ್ರೇಡ್ ಮಾಡಬಹುದು ₹3,800–₹4,300.

ಸೆಪ್ಟೆಂಬರ್ 5 ರ ನಂತರ ಸಂಚಾರ ಪೊಲೀಸರ ಪರಿಶೀಲನೆ ತೀವ್ರಗೊಂಡಿದ್ದು, ವಾರಾಂತ್ಯದಲ್ಲಿ ಇನ್ನಷ್ಟು ಬಿಗಿಯಾಗಲಿದೆ. ಇದನ್ನು ಕಿರಿಕಿರಿ ಎಂದು ಭಾವಿಸದೆ ನಿಮ್ಮ ಸ್ವಂತ ಸುರಕ್ಷತೆಯ ದೃಷ್ಟಿಯಿಂದ ನೋಡಿ. ಸೂಕ್ತ ISI ಪ್ರಮಾಣೀಕೃತ ಹೆಲ್ಮೆಟ್ ಧರಿಸಿ, ಸ್ಟ್ರಾಪ್ ಗಟ್ಟಿಯಾಗಿ ಹಾಕಿ, ಬ್ಲೂಟೂತ್ ಹ್ಯಾಂಡ್ಸ್-ಫ್ರೀ ಆಗಿರಿಸಿ, ಸುರಕ್ಷಿತವಾಗಿ ಚಾಲನೆ ಮಾಡಿ. ನೀವು ಉಳಿಸುವ ದಂಡದ ಮೊತ್ತ ಚಿಕ್ಕದಿರಬಹುದು, ಆದರೆ ಹೆಲ್ಮೆಟ್ ನೀಡುವ ಜೀವಸುರಕ್ಷತೆ ಅಪಾರ.

Article Published On: Saturday, September 5, 2026, 20:24 [IST]
Read more on road safety traffic rules
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+