Hero: ಅಗ್ಗದ ಬೈಕ್‌ಗಳನ್ನು ಖರೀದಿಸುವವರಿಗೆ ಹೀರೋ ಕಂಪನಿಯಿಂದ ಸದ್ದಿಲ್ಲದೇ ಶಾಕ್!

ಹೀರೋ ಮೋಟೋಕಾರ್ಪ್ (Hero MotoCorp), ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಹೊಂದಿದೆ. ಸದ್ದಿಲ್ಲದೇ ತನ್ನ ಪ್ರಯಾಣಿಕ ಮೋಟಾರ್‌ಸೈಕಲ್‌ಗಳ ಬೆಲೆಯನ್ನು ಪರಿಷ್ಕರಿಸಿದೆ. ಜನಪ್ರಿಯ ಹೆಚ್ಎಫ್ 100, ಹೆಚ್ಎಫ್ ಡಿಲಕ್ಸ್ ಹಾಗೂ ಪ್ಯಾಶನ್ ಪ್ಲಸ್‌ನಂತಹ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇವುಗಳ ದರವು ರೂ.250 ರಿಂದ ರೂ.750 ವರೆಗೆ ಅಧಿಕಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೀರೋ ಹೆಚ್ಎಫ್ 100 (⁠Hero HF 100):

ಇದು ಡ್ರಮ್ ಕಿಕ್ (Drum kick) ಎಂಬ ಏಕೈಕ ರೂಪಾಂತರದೊಂದಿಗೆ ಸಿಗುತ್ತದೆ. ಇದರ ಬೆಲೆ ರೂ.750 ಏರಿಕೆಯಾಗಿದ್ದು, ರೂ.59,489 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಹಿಂದೆ ರೂ.58,739 ಬೆಲೆಯನ್ನು ಒಳಗೊಂಡಿತ್ತು. ನೂತನ 'ಹೆಚ್ಎಫ್ 100' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ರೆಡ್-ಬ್ಲ್ಯಾಕ್ ಹಾಗೂ ಬ್ಲ್ಯೂ-ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Hero HF 100 HF Deluxe And Passion Plus Bikes Price Hike Details

ಈ ಮೋಟಾರ್‌ಸೈಕಲ್‌ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8.02 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 65 ಕಿಲೋಮೀಟರ್‌ವರೆಗೆ ಮೈಲೇಜ್‌ ಕೊಡುತ್ತದೆ.

ಹೊಸ 'ಹೀರೋ ಹೆಚ್ಎಫ್ 100' ಬೈಕ್ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಎಲೆಕ್ಟ್ರಿಕ್-ಸ್ಟಾರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟೂ-ಸ್ಟೆಪ್ ಅಡ್ಜಸ್ಟಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

Hero HF 100 HF Deluxe And Passion Plus Bikes Price Hike Details

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe):

ಇದನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಈ ಮೋಟಾರ್‌ಸೈಕಲ್‌ನ ಬ್ಲ್ಯಾಕ್ (Black) ರೂಪಾಂತರದ ಬೆಲೆ ರೂ.750 ಹೆಚ್ಚಳಗೊಂಡಿದ್ದು, ರೂ.55,992 ರಿಂದ ರೂ.56,742ಕ್ಕೆ ತಲುಪಿದೆ. ಸೆಲ್ಫ್ (Self) ರೂಪಾಂತರದ ದರವು ರೂ.750 ಏರಿಕೆಯಾಗಿದೆ. ಹಳೆಯ ಬೆಲೆ ರೂ.64,999 ಇತ್ತು. ಈಗ ರೂ.65,749 ಆಗಿದೆ.

ಕಿಕ್ (Kick) ರೂಪಾಂತರದ ದರವು ರೂ.749 ಅಧಿಕಗೊಂಡಿದ್ದು, ರೂ.59,793 ರಿಂದ ರೂ.60,542ಕ್ಕೆ ಮುಟ್ಟಿದೆ. ಐ3ಎಸ್ (i3S) ರೂಪಾಂತರದ ಬೆಲೆ ರೂ.750 ಏರಿಕೆಯಾಗಿದ್ದು, ರೂ.66,382 ರಿಂದ ರೂ.67,132ಕ್ಕೆ ತಲುಪಿದೆ. ಪ್ರೋ (Pro) ರೂಪಾಂತರ ದರವು ರೂ.753 ಹೆಚ್ಚಳಗೊಂಡಿದೆ. ಹಿಂದಿನ ಬೆಲೆ ರೂ.68,482 ಇತ್ತು. ನೂತನ ದರವು ರೂ.69,235 ಆಗಿದೆ.

Hero HF 100 HF Deluxe And Passion Plus Bikes Price Hike Details

ಹೊಸ 'ಹೀರೋ ಹೆಚ್ಎಫ್ ಡಿಲಕ್ಸ್' 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 70 ಕಿಲೋಮೀಟರ್‌ವರೆಗೆ ಮೈಲೇಜ್‌ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ಪ್ಯಾಶನ್ ಪ್ಲಸ್‌ (Hero Passion Plus):

ಇದು ಜಗಮೆಚ್ಚಿದ ಬೈಕ್ ಎಂದೇ ಹೆಸರುವಾಸಿಯಾಗಿದೆ. ಈ ಮೋಟಾರ್‌ಸೈಕಲ್‌ನ ಡ್ರಮ್ (Drum) ರೂಪಾಂತರದ ಬೆಲೆ ರೂ.250 ಏರಿಕೆಯಾಗಿದೆ. ಹಳೆಯ ದರ ರೂ.76,691 ಇತ್ತು. ಪ್ರಸ್ತುತ ರೂ.76,941 ಆಗಿದೆ. ಮಿಲಿಯನ್ ಎಡಿಷನ್ (Million Edition) ರೂಪಾಂತರದ ಬೆಲೆ ರೂ.250 ಹೆಚ್ಚಳಗೊಂಡಿದ್ದು, ರೂ.78,074 ರಿಂದ ರೂ.78,324ಕ್ಕೆ ಮುಟ್ಟಿದೆ.

ನೂತನ 'ಪ್ಯಾಶನ್ ಪ್ಲಸ್‌' 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 60 ರಿಂದ 70 ಕಿಲೋಮೀಟರ್‌ವರೆಗೆ ಮೈಲೇಜ್‌ ಕೊಡುತ್ತದೆ. ಅನಲಾಗ್ ಡಿಜಿಟಲ್ ಕ್ಲಸ್ಟರ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಮತ್ತು ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

More from DriveSpark

Article Published On: Saturday, January 24, 2026, 17:15 [IST]
English summary
Hero hf 100 hf deluxe and passion plus bikes price hike details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+