ಸ್ಪ್ಲೆಂಡರ್‌ ವಿರುದ್ಧ ನೂತನ ಹೋಂಡಾ ಬೈಕ್ ಮಾರಾಟಕ್ಕೆ.. 86,000 ರೂಪಾಯಿ.. ಫುಲ್ ಟ್ಯಾಂಕ್‌ನಲ್ಲಿ 630 Km ಮೈಲೇಜ್!

ಈಚೆಗೆ ನೂತನ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲಾಗಿತು. ಇದು ಸಖತ್ ಸ್ಟೈಲಿಶ್ ಆಗಿದ್ದು, ಜೆನ್-ಜಿಗಳಿಗಾಗಿಯೇ ತಯಾರಿಸಿದ ರೀತಿಯಲ್ಲಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಶೈನ್ 125 ಲಿಮಿಟೆಡ್ ಎಡಿಷನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ (Price):

ಇದು ಅಗ್ಗದ ಬೆಲೆಯಲ್ಲಿಯೂ ಲಭ್ಯವಿದೆ. ರೂ.86,211 ಎಕ್ಸ್-ಶೋರೂಂ ದರವನ್ನು ಹೊಂದಿದೆ. ರೂ.99,000 ವರೆಗೆ ಆನ್-ರೋಡ್ ಬೆಲೆಯಿದೆ. ರೂ.20,000 ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.79,000 ವರೆಗೆ ಸಾಲವಿರುತ್ತದೆ. ಶೇಕಡ 10% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ರೂ.2,500 ವರೆಗೆ ಇಎಂಐ ಪಾವತಿಸಬೇಕು.

Honda Shine 125 Limited Edition Bike Price Design Colour Engine Mileage Features And All Details

ವಿನ್ಯಾಸ & ಬಣ್ಣಗಳು (Design & Colour):

ಈ ಬೈಕ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ ಮತ್ತು ಟೈಲ್ ಲ್ಯಾಂಪ್‌ನ್ನು ಪಡೆದಿದೆ. ನವೀನವಾಗಿರುವ ಸೈಡ್ ಕವರ್‌ಗಳು & ಎಕ್ಸಾಸ್ಟ್ ಮಫ್ಲರ್ ಕವರ್‌ನ್ನು ಹೊಂದಿದೆ. ಫ್ಯುಯೆಲ್ ಟ್ಯಾಂಕ್‌ನ ಮೇಲೆ ದೊಡ್ಡದಾದ 'ಶೈನ್' ಗ್ರಾಫಿಕ್ಸ್ ಇದ್ದು, 'ಪರ್ಲ್ ಸೈರನ್ ಬ್ಲೂ' ಎಂಬ ಬಣ್ಣದ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಸುತ್ತಳತೆ (Dimension):

ಹೊಸ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಸಾಕಷ್ಟು ವಿಶಾಲವಾಗಿದೆ. 2,046 ಎಂಎಂ ಉದ್ದ, 741 ಎಂಎಂ ಅಗಲ ಮತ್ತು 1,116 ಎಂಎಂ ಎತ್ತರವಿದೆ. 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 113 ಕೆಜಿ ತೂಕವಿದೆ.

Honda Shine 125 Limited Edition Bike Price Design Colour Engine Mileage Features And All Details

ಕಾರ್ಯಕ್ಷಮತೆ (Performance):

ಇದು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 123.94-ಸಿಸಿ 4 ಸ್ಟ್ರೋಕ್ ಬಿಎಸ್-6 ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 10.63 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಮೈಲೇಜ್ (Mileage):

ಈ ಮೋಟಾರ್‌ಸೈಕಲ್‌ ಉತ್ತಮ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದೆ. ನಿರ್ವಹಣಾ ವೆಚ್ಚವು ಕಡಿಮೆಯಿದೆ. 50 ರಿಂದ 60 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 10.5 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. ಒಮ್ಮೆ ಭರ್ತಿಯಾಗಿ ತುಂಬಿಸಿದರೆ, 525 ರಿಂದ 630 ಕಿಲೋಮೀಟರ್‌ವರೆಗೂ ಓಡುತ್ತದೆ.

Honda Shine 125 Limited Edition Bike Price Design Colour Engine Mileage Features And All Details

ವೈಶಿಷ್ಟ್ಯಗಳು (Features):

ನೂತನ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸೈಲೆಂಟ್ ಸ್ಟಾರ್ಟ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಪೈರೈಟ್ ಬ್ರೌನ್ ಬಣ್ಣದ ಅಲಾಯ್ ವೀಲ್‌ಗಳು (18-ಇಂಚು) ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ. ಸೀಟ್ ಎತ್ತರ 791 ಎಂಎಂ ಇದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಇದು ಸವಾರರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂದೆ (ರೇರ್) ಡುಯಲ್ ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಹಾಗೆಯೇ ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) & ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಪ್ರತಿಸ್ಪರ್ಧಿ ಬೈಕ್‌ಗಳು (Rival Bikes):

ಈ ಮೋಟಾರ್‌ಸೈಕಲ್‌ಗೆ ಹಲವು ಪ್ರತಿಸ್ಪರ್ಧಿಗಳಿವೆ. ಬಹುಮುಖ್ಯವಾಗಿ ಟಿವಿಎಸ್ ರೈಡರ್ 125, ಬಜಾಜ್ ಪಲ್ಸರ್ 125, ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್, ಬಜಾಜ್ ಪಲ್ಸರ್ ಎನ್ಎಸ್125 ಮತ್ತು ಹೀರೋ ಗ್ಲಾಮರ್ ಎಕ್ಸ್‌ಟೆಕ್ ಬೈಕ್‌ಗಳು ಪ್ರಬಲವಾದ ಎದುರಾಳಿಯಾಗಿವೆ.

More from DriveSpark

Article Published On: Friday, February 6, 2026, 8:15 [IST]
English summary
Honda shine 125 limited edition bike price design colour engine mileage features and all details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+