ಬಡವರಿಗಾಗಿ ಮಹೀಂದ್ರಾದಿಂದ ಹೊಸ ಇ-ಆಟೋರಿಕ್ಷಾ ಬಿಡುಗಡೆ.. ಬೈಕ್ ಬೆಲೆಗೆ ಸಿಗುತ್ತೆ.. 200 Km ರೇಂಜ್!

ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (Mahindra Last Mile Mobility Limited), ಕಷ್ಟಪಟ್ಟು ದುಡಿಯುವ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹೈದರಾಬಾದ್‌ನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ಉಡೋ' ಹೆಸರಿನ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಬಿಡುಗಡೆಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ ಇ-ಆಟೋರಿಕ್ಷಾದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಮಹೀಂದ್ರಾ ಉಡೋ (Mahindra UDO) ಎಲೆಕ್ಟ್ರಿಕ್ ಆಟೋರಿಕ್ಷಾ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ರೂ.3.59 ಲಕ್ಷ ಪರಿಚಯಾತ್ಮಕ ದರವನ್ನು ಪಡೆದಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಆ ಬಳಿಕ, ರೂ.3.84 ಲಕ್ಷ (ಎಕ್ಸ್-ಶೋರೂಂ) ಬೆಲೆಯಾಗಲಿದೆ.

Mahindra Udo Launched In India Rs 3 59 Lakh Price Details

ನೂತನ ಇ-ಆಟೋರಿಕ್ಷಾ 'ವಿಮಾನ' ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಇದರ ಹೆಸರನ್ನು ಹಿಂದಿ ಭಾಷೆಯಿಂದ ಎರವಲು ಪಡೆಯಲಾಗಿದೆ. 'ಉಡೋ' ಎಂದರೆ 'ಹಾರುವ' ಎಂಬ ಅರ್ಥ ಬರುತ್ತದೆ. ಜೊತೆಗಿದು ಬೋಲ್ಡ್ ಹೆಡ್‌ಲ್ಯಾಂಪ್‌ಗಳು, ಇಂಡಿಕೇಟರ್‌ಗಳು, ಟೈಲ್ ಲೈಟ್‌ಗಳು ಹಾಗೂ ಸ್ಟೈಲಿಶ್ ಮಿರರ್‌ಗಳನ್ನು ಪಡೆದಿದೆ. ದೊಡ್ಡ ಗಾತ್ರದ ವಿಂಡ್‌ಶೀಲ್ಡ್‌ನ್ನು ಒಳಗೊಂಡಿದೆ.

ನೂತನ 'ಮಹೀಂದ್ರಾ ಉಡೋ' ಎಲೆಕ್ಟ್ರಿಕ್ ಆಟೋರಿಕ್ಷಾದ ಡ್ರೈವರ್ ಸೀಟ್‌ನ್ನು 'ಪೈಲಟ್ ಸೀಟ್' ಎಂದು ಕರೆಯಲಾಗಿದೆ. ಇದರಲ್ಲಿ 3 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಪ್ರದೇಶಗಳಿಗೆ ಸಂಚರಿಸಬಹುದು. ವಿಶಾಲವಾದ ಹೆಡ್‌ರೂಮ್ ಹಾಗೂ ಲೆಗ್‌ರೂಮ್‌ನ್ನು ಪಡೆದಿದೆ.

Mahindra Udo Launched In India Rs 3 59 Lakh Price Details

ಇದು ಬೆಲೆಗೆ ತಕ್ಕಂತೆ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 11.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 200 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಈ ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಬಳಕೆ ಮಾಡಿರುವ ಮೋಟಾರ್, 13.41 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 52 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ.

ಈ 'ಉಡೋ' ಎಲೆಕ್ಟ್ರಿಕ್ ಆಟೋರಿಕ್ಷಾ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) ಡುಯಲ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಇಂಡಿಪೆಂಡೆಂಟ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ರಿವರ್ಸ್ ಥ್ರೊಟಲ್, ರಿಜನರೇಟಿವ್ ಬ್ರೇಕಿಂಗ್ ಹಾಗೂ ಹಿಲ್ ಹೋಲ್ಡ್ ಅಸಿಸ್ಟ್‌ನ್ನು ಒಳಗೊಂಡಿದೆ.

Mahindra Udo Launched In India Rs 3 59 Lakh Price Details

ಹೊಸ 'ಮಹೀಂದ್ರಾ ಉಡೋ' ಇ-ಆಟೋರಿಕ್ಷಾ ರೇಂಜ್ (Range), ರೈಡ್ (Ride) ಹಾಗೂ ರೇಸ್ (Race) ಎಂಬ ಮೂರು ಆಕರ್ಷಕವಾದ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಬೃಹದಾಕಾರದ 12-ಇಂಚಿನ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಆಟೋರಿಕ್ಷಾವು 6 ವರ್ಷ ಅಥವಾ 1.5 ಲಕ್ಷ ಕಿಲೋಮೀಟರ್‌ಗಳ ವಾರಂಟಿಯನ್ನು ಪಡೆದಿದೆ. ಹಾಗೆಯೇ 1 ಲಕ್ಷ ಕಿಲೋಮೀಟರ್‌ವರೆಗೆ ಉಚಿತ ಸರ್ವಿಸ್‌ನ್ನು ಒದಗಿಸಲಾಗಿತ್ತದೆ. 'ಉಡೋ'ದ ಎಲ್ಲ ಗ್ರಾಹಕರು ಉದಯ್ ನೆಕ್ಸ್ಟ್ (UDAY NXT) ಸ್ಕೀಮ್‌ನಲ್ಲಿ ದಾಖಲು ಮಾಡಿಕೊಳ್ಳಬೇಕು. ಅವರಿಗೆ ರೂ.20 ಲಕ್ಷ ಅಪಘಾತ ವಿಮೆ ಲಭ್ಯವಾಗಲಿದೆ.

ನೂತನ 'ಮಹೀಂದ್ರಾ ಉಡೋ' ಇ-ಆಟೋರಿಕ್ಷಾವನ್ನು ತೆಲಂಗಾಣದ ಜಹೀರಾಬಾದ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತದೆ. ಇಲ್ಲಿ ಆಟೋಮೆಟಿಕ್ ಲೇಸರ್ ವೆಲ್ಡಿಂಗ್ ಬ್ಯಾಟರಿ ಪ್ಯಾಕ್ ಲೈನ್‌ಗಳು ಹಾಗೂ ಬಾಡಿ-ಇನ್-ವೈಟ್ ಅಸೆಂಬ್ಲಿ ಲೈನ್‌ನಂತಹ ತಯಾರಿಕಾ ಸೌಕರ್ಯಗಳನ್ನು ಮೇಲ್ದರ್ಜೆರಿಸಲು ರೂ.218 ಕೋಟಿ ಹೂಡಿಕೆ ಮಾಡಲಾಗಿದೆ. ಈ ಘಟಕದಲ್ಲಿ ವಾರ್ಷಿಕ 160,000 ಯುನಿಟ್‌ ವಾಹನಗಳನ್ನು ಉತ್ಪಾದಿಸಬಹುದು. ಆದರೀಗ 90,000 ಯುನಿಟ್‌ಗಳು ಮಾತ್ರ ತಯಾರಾಗುತ್ತಿವೆ.

More from DriveSpark

Article Published On: Thursday, February 12, 2026, 17:16 [IST]
English summary
Mahindra udo launched in india rs 3 59 lakh price details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+