ಭಾರತದ ಮೂಲೆ ಮೂಲೆಯಲ್ಲಿ ಹೆಸರು ಮಾಡುತ್ತಿದೆ ಕರ್ನಾಟಕದ ಸ್ಕೂಟರ್ ಬ್ರ್ಯಾಂಡ್

ಸ್ವದೇಶಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಸಿಂಪಲ್ ಎನರ್ಜಿ, ಭಾರತದ ಪೂರ್ವ ಭಾಗದಲ್ಲಿ ಬರುವ ಸಿಲಿಗುರಿಯಲ್ಲಿ ತನ್ನ ಮೊದಲ ಡೀಲರ್‌ಶಿಪ್ ಪ್ರಾರಂಭಿಸುವ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. CTA ಕನೆಕ್ಟ್ ಜೊತೆ ಪಾಲುದಾರಿಕೆಯಲ್ಲಿ ಸ್ಥಾಪಿಸಲಾದ 2,400 ಚದರ ಅಡಿ ವಿಸ್ತೀರ್ಣದ ಈ ಸಿಂಪಲ್ ಸ್ಟೋರ್ 3S ಸೌಲಭ್ಯವಾಗಿ (ಮಾರಾಟ, ಸೇವೆ ಮತ್ತು ಬಿಡಿಭಾಗಗಳು) ಕಾರ್ಯನಿರ್ವಹಿಸುತ್ತದೆ. ಅಂದರೆ ಗ್ರಾಹಕರಿಗೆ ಒಂದೇ ಸೂರಿನಡಿ ಸಮಗ್ರ ಸೇವಾ ಅನುಭವವನ್ನು ನೀಡುತ್ತದೆ ಎಂದು ಸಿಂಪಲ್ ಎನರ್ಜಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಧುನಿಕ, ಗ್ರಾಹಕ-ಕೇಂದ್ರಿತ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಲಾದ ಈ ಡೀಲರ್‌ಶಿಪ್, ಹೊಸದಾಗಿ ಬಿಡುಗಡೆಯಾದ ಸಿಂಪಲ್ ಒನ್ ಜನ್ 2 (5 kWh) ಮತ್ತು ಸಿಂಪಲ್ ಒನ್ ಎಸ್ ಜನ್ 2 ಸೇರಿದಂತೆ ಸಿಂಪಲ್ ಎನರ್ಜಿಯ ಸ್ಕೂಟರ್‌ಗಳನ್ನು ಪ್ರದರ್ಶಿಸುತ್ತದೆ. ಸಿಂಪಲ್ ಒನ್ ಜೆನ್ 2 (5 kWh) ಬೆಲೆಯು ರೂ.1,77,999 (ಎಕ್ಸ್ ಶೋರೂಂ) ಮತ್ತು ಸಿಂಪಲ್ ಒನ್ ಜೆನ್ 2 ಬೆಲೆಯು ರೂ.1,49,999 (ಎಕ್ಸ್ ಶೋರೂಂ) ಇದೆ.

simple-energy-launches-1st-store-in-siliguri-expantion-in-eastern-india

ಸಿಂಪಲ್ ಒನ್ ಜನ್ 2 (5 kWh) ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 265 ಕಿ.ಮೀ IDC ರೇಂಜ್ ನೀಡುತ್ತದೆ. ಹಾಗೆಯೇ ಸಿಂಪಲ್ ಒನ್ ಎಸ್ ಜನ್ 2 ಸ್ಕೂಟರ್ ಅನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 191 ಕಿ.ಮೀ IDC ರೇಜ್ ನೀಡುತ್ತದೆ. ಇನ್ನು ಹೊಸದಾಗಿ ತರೆಯಲಾದ ಶೋರೂಂನಲ್ಲಿ ವ್ಯಾಪಕ ಶ್ರೇಣಿಯ ಪರಿಕರಗಳನ್ನು ಸಹ ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಸಿಂಪಲ್ ಎನರ್ಜಿಯ ಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್ ಮಾತನಾಡಿ, "ಸಿಲಿಗುರಿಯಲ್ಲಿ ನಮ್ಮ ಮೊದಲ ಸಿಂಪಲ್ ಸ್ಟೋರ್‌ನ ಉದ್ಘಾಟನೆಯು ಪೂರ್ವ ಭಾರತದಲ್ಲಿ ಸಿಂಪಲ್ ಎನರ್ಜಿಯ ಉಪಸ್ಥಿತಿಯನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈಶಾನ್ಯಕ್ಕೆ ಪ್ರಮುಖ ದ್ವಾರವಾಗಿ, ನಗರವು ಎಲೆಕ್ಟ್ರಿಕ್ ವಾಹನಗಳಿಗೆ ಬಲವಾದ ಸಾಮರ್ಥ್ಯವನ್ನು ಒದಗಿಸುತ್ತದೆ.

simple-energy-launches-1st-store-in-siliguri-expantion-in-eastern-india

ನಮ್ಮ ವಾಹನಗಳನ್ನು ಹುಡುಕುವುದರಿಂದ ಹಿಡಿದು ಮಾರಾಟದ ನಂತರದ ಬೆಂಬಲದವರೆಗೆ ನಮ್ಮ 3S ಸೆಟಪ್‌ನೊಂದಿಗೆ, ನಾವು ಸಿಂಪಲ್ ಎನರ್ಜಿ ಅನುಭವವನ್ನು ಗ್ರಾಹಕರಿಗೆ ಹತ್ತಿರ ತರುತ್ತಿದ್ದೇವೆ. ಸಿಲಿಗುರಿಯಲ್ಲಿ ಸವಾರರಿಗೆ ನಮ್ಮ ದೀರ್ಘ-ಶ್ರೇಣಿಯ, ಹೈ-ಪರ್ಫಾಮೆನ್ಸ್ ಸ್ಕೂಟರ್‌ಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ, ಈ ಪ್ರದೇಶದಾದ್ಯಂತ ಎಲೆಕ್ಟ್ರಿಕ್ ವಾಹನಳಿಗೆ ಜನರ ಪರಿವರ್ತನೆಯನ್ನು ವೇಗಗೊಳಿಸಲು ಬದ್ಧರಾಗಿದ್ದೇವೆ" ಎಂದರು.

ಪ್ರಸ್ತುತ, ಸಿಂಪಲ್ ಎನರ್ಜಿ ಬೆಂಗಳೂರು, ದೆಹಲಿ, ಪಾಟ್ನಾ, ಭೋಪಾಲ್, ಆಗ್ರಾ, ಗೋವಾ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂ, ಕೊಚ್ಚಿ ಮತ್ತು ಚೆನ್ನೈ ಸೇರಿದಂತೆ ಇತರ ನಗರಗಳಲ್ಲಿ 63 ಔಟ್‌ಲೆಟ್‌ಗಳನ್ನು ನಿರ್ವಹಿಸುತ್ತಿದೆ. ಕಂಪನಿಯು ತನ್ನ ಪ್ಯಾನ್-ಇಂಡಿಯಾ ವಿಸ್ತರಣೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಸಿಂಪಲ್ ಎನರ್ಜಿ ನಾಗ್ಪುರ, ರಾಂಚಿ ಮತ್ತು ಭುವನೇಶ್ವರ ಮತ್ತು ಇತರ ನಗರಗಳಿಗೆ ವಿಸ್ತರಿಸಲಿದೆ.

ಸಿಂಪಲ್ ಒನ್ ಜೆನ್ 2 (5 kWh) ಮತ್ತು ಸಿಂಪಲ್ ಒನ್ ಎಸ್ ಜೆನ್ 2 ಮಾಡಲ್ ಬ್ರ್ಯಾಂಡ್‌ನ ಪ್ರಮುಖ ಸ್ಕೂಟರ್‌ಗಳಾಗಿವೆ. ಗ್ರಾಹಕರು ಪರೀಕ್ಷಾ ಸವಾರಿಗಳಿಗಾಗಿ ಶೋರೂಂಗೆ ಭೇಟಿ ನೀಡಬಹುದು, ಪರಿಕರಗಳನ್ನು ಆನ್‌ಲೈನ್‌ ವೀಕ್ಷಿಸಬಹುದು ಅಥವಾ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಪರೀಕ್ಷಾ ಸವಾರಿಗಳು ಸಹ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಸಿಂಪಲ್ ಎನರ್ಜಿ ಬಗ್ಗೆ

ಸಿಂಪಲ್ ಎನರ್ಜಿ 2019 ರಲ್ಲಿ ಬೆಂಗಳೂರಿನಲ್ಲಿ ಸುಹಾಸ್ ರಾಜ್‌ಕುಮಾರ್ ಸ್ಥಾಪಿಸಿದ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಆಗಿದೆ. ಕಂಪನಿಯು ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರಚಿಸುವತ್ತ ಗಮನಹರಿಸುತ್ತದೆ. ಇದರ ಮೊದಲ ವಾಹನವಾದ ಸಿಂಪಲ್ ಒನ್ ಅನ್ನು 2021 ರಲ್ಲಿ ಬಿಡುಗಡೆ ಮಾಡಲಾಯಿತು. ಸಿಂಪಲ್ ಎನರ್ಜಿ ಸುಸ್ಥಿರ ಚಲನಶೀಲತೆಗೆ ಪರಿವರ್ತನೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.

More from DriveSpark

Article Published On: Thursday, March 12, 2026, 18:19 [IST]
English summary
Simple energy launches 1st store in siliguri expantion in eastern india
Read more on simple energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+