ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಬೆಂಗಳೂರಿನ ಸಿಂಪಲ್ ಎನರ್ಜಿ: 400 ಕಿ.ಮೀ ಓಡಬಲ್ಲದು!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಸಿಂಪಲ್ ಎನರ್ಜಿ, ತನ್ನ ಜನ್-2 ಮಾಡಲ್‌ಗಳಾದ 'ಸಿಂಪಲ್ ಒನ್' (Simple One), 'ಸಿಂಪಲ್ ಒನ್‌ಎಸ್' (Simple OneS) ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ ಸಿಂಪಲ್ ಅಲ್ಟ್ರಾ (Simple Ultra) ಎಂಬ ಹೈ-ಸ್ಪೀಡ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸಿಂಪಲ್ ಅಲ್ಟ್ರಾ ವಿಶೇಷತೆ ಏನೆಂದರೆ ಒಮ್ಮೆ ಚಾರ್ಜ್ ಮಾಡಿ 400 ಕಿ.ಮೀ ಓಡಿಸಬಹುದು, ಇದು ಭಾರತದ ಅತಿ ಹೆಚ್ಚು ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜೊತೆಗೆ ಭಾರತದ ಎರಡನೇ ಅತಿ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಕಂಪನಿ ತಿಳಿಸಿದೆ.
ಸಿಂಪಲ್ ಅಲ್ಟ್ರಾ: ಸಿಂಪಲ್ ಅಲ್ಟ್ರಾ 115 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲುದು ಮತ್ತು 2.77 ಸೆಕೆಂಡುಗಳಲ್ಲಿ 40 ಕಿಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು ಉದ್ಯಮದಲ್ಲೇ ಮೊದಲ ಬಾರಿಗೆ 400 ಕಿ.ಮೀ ರೇಂಜ್ ನೀಡುವ ಇವಿ ಆಗಿದೆ. ಸದ್ಯ ಈ ಸ್ಕೂಟರ್‌ನ್ನು ಬಿಡುಗಡೆ ಮಾಡಿಲ್ಲ, ಬದಲಿಗೆ ಕೇವಲ ಅನಾವರಣಗೊಳಿಸಲಾಗಿದೆ. ಶೀಘ್ರದಲ್ಲೆ ಬಿಡುಗಡೆ ನಿರೀಕ್ಷಿಸಲಾಗಿದೆ.

ಸಿಂಪಲ್ ಒನ್‌ಎಸ್ ಜೆನ್-2 ಸ್ಕೂಟರ್
ಸಿಂಪಲ್ ಒನ್‌ಎಸ್ ಜೆನ್-2 ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 190 ಕಿ.ಮೀ ಓಡಿಸಬಹುದು. ಇದರ ಬೆಲೆ ರೂ. 1,49,999 (ಎಕ್ಸ್-ಶೋರೂಂ) ಇದೆ. ಇದು ಈಗ ಎರಡು ರೂಪಾಂತರಗಳಲ್ಲಿ (ವೇರಿಯೆಂಟ್) ಲಭ್ಯವಿದೆ. ಸಿಂಪಲ್ ಒನ್ ಜೆನ್ 2ರ 4.5 kWh ಬ್ಯಾಟರಿ ರೂಪಾಂತರವು 236 ಕಿ.ಮೀ ರೇಂಜ್ ನೀಡುತ್ತದೆ. ಇದರ ಬೆಲೆ ರೂ. 1,69,999 (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ.
5 kWh ಬ್ಯಾಟರಿ ರೂಪಾಂತರವು 265 ಕಿಮೀ ರೇಂಜ್ ನೀಡುತ್ತದೆ, ಇದರ ಬೆಲೆಯು ರೂ. 1,77,999 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಸಿಂಪಲ್ ಒನ್ (4.5 kWh), ಸಿಂಪಲ್ ಒನ್ (5 kWh), ಮತ್ತು ಸಿಂಪಲ್ ಒನ್‌ಎಸ್ ತಕ್ಷಣದ ಖರೀದಿಗೆ ಲಭ್ಯವಿದೆ. ಸೀಮಿತ ಅವಧಿಯ ಪರಿಚಯಾತ್ಮಕ ಕೊಡುಗೆಯ ಭಾಗವಾಗಿ, ಸಿಂಪಲ್ ಎನರ್ಜಿಯ ಜನ್ 2 ಶ್ರೇಣಿಯ ಬೆಲೆ ರೂ. 1,39,999 ರಿಂದ ಪ್ರಾರಂಭವಾಗುತ್ತದೆ.

ಸ್ಕೂಟರ್‌ಗಳು ಬೆಂಗಳೂರು, ಗೋವಾ, ಪುಣೆ, ವಿಜಯವಾಡ, ಹೈದರಾಬಾದ್, ವೈಜಾಗ್, ಕೊಚ್ಚಿ, ಜೈಪುರ, ಮಂಗಳೂರು ಮತ್ತು ಇತರ ನಗರಗಳಲ್ಲಿರುವ ಎಲ್ಲಾ 61 ಕ್ಕೂ ಹೆಚ್ಚು ಸಿಂಪಲ್ ಎನರ್ಜಿ ಶೋರೂಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕವೂ ಸ್ಕೂಟರ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು ಎಂದು ಕಂಪನಿ ಹೇಳಿದೆ.
ಈ ಸ್ಕೂಟರ್‌ಗಳು ಉದ್ಯಮ - ಪ್ರಮುಖ 8-ವರ್ಷಗಳ ಮೋಟಾರ್ ವಾರೆಂಟಿಯೊಂದಿಗೆ 3-ವರ್ಷ ಅಥವಾ 30,000 ಕಿ.ಮೀ (ಯಾವುದು ಮೊದಲೋ ಅದು) ವಾಹನ ವಾರೆಂಟಿ ಮತ್ತು 3-ವರ್ಷ / 20,000 ಕಿಮೀ ಚಾರ್ಜರ್ ವಾರೆಂಟಿ ನೀಡಲಾಗಿದೆ. ಎಲ್ಲಾ ಸಿಂಪಲ್ ಎನರ್ಜಿ ಸ್ಕೂಟರ್‌ಗಳು ಪೋರ್ಟಬಲ್ 750W ಚಾರ್ಜರ್ ಮೂಲಕ ಹೋಮ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತವೆ.
ವೈಶಿಷ್ಟ್ಯಗಳು: ಎರಡೂ ಸಿಂಪಲ್ ಒನ್ ಜೆನ್ 2 ರೂಪಾಂತರಗಳು ಇಕೊ X, ಇಕೊ, ರೈಡ್, ಏರ್, ಸೋನಿಕ್ ಮತ್ತು ಸೋನಿಕ್ X ಸೇರಿದಂತೆ ಆರು ರೈಡ್ ಮೋಡ್‌ಗಳನ್ನು ಹೊಂದಿವೆ. ದೈನಂದಿನ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾದ ಸ್ಕೂಟರ್‌ಗಳು 780 mm ಸೀಟ್ ಎತ್ತರ ಮತ್ತು 35L ಅಂಡರ್ ಸೀಟ್ ಸ್ಟೋರೇಜ್ ಅನ್ನು ಹೊಂದಿವೆ. ಇವು ಎರಡೂ ಚಕ್ರಗಳಲ್ಲಿ CBS ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.
ಜೊತೆಗೆ ನಾಲ್ಕು-ಹಂತದ ಸುಧಾರಿತ ಪುನರುತ್ಪಾದಕ ಬ್ರೇಕಿಂಗ್ (ರೀಜೆನ್ ಬ್ರೇಕಿಂಗ್) ಸಿಸ್ಟಮ್ ಪಡೆದಿವೆ. ಈ ಸ್ಕೂಟರ್‌ಗಳು ಐದು ಸಿಂಗಲ್-ಟೋನ್ ಫಿನಿಶ್‌ಗಳಾದ ಬ್ರೆಜನ್ ಬ್ಲ್ಯಾಕ್, ಏರೋ ಗ್ರೇ, ಗ್ರೇಸ್ ವೈಟ್, ಅಜುರೆ ಬ್ಲೂ ಮತ್ತು ಸೋನಿಕ್ ರೆಡ್, ಜೊತೆಗೆ ನಾಲ್ಕು ಡ್ಯುಯಲ್-ಟೋನ್ ಆಯ್ಕೆಗಳಾದ ಲೈಟ್ ಎಕ್ಸ್, ಏರೋ ಎಕ್ಸ್, ಬ್ರೆಜನ್ ಎಕ್ಸ್ ಮತ್ತು ಆಸ್ಫಾಲ್ಟ್ ಎಕ್ಸ್ ಬಣ್ಣಗಳಲ್ಲಿ ಲಭ್ಯವಿವೆ.


Click it and Unblock the Notifications








