Suzuki e-ACCESS: ಓಲಾ, ಎಥರ್‌ಗೆ ಬಿಗ್ ಶಾಕ್: ಎಲೆಕ್ಟ್ರಿಕ್ ಆಕ್ಸಿಸ್ ಬಿಡುಗಡೆ: ರಿವರ್ಸ್‌ ಗೇರ್‌ ಇದೆ!

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಸುಜುಕಿ (Suzuki), ಇಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ 'ಸುಜುಕಿ ಇ-ಅಕ್ಸೆಸ್' (Suzuki e-ACCESS) ಬಿಡುಗಡೆ ಮಾಡಿದೆ. ಸುಜುಕಿ ಇ-ಅಕ್ಸೆಸ್ ಬೆಲೆ ರೂ. 1,88,490 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಎಲ್ಲಾ ಅಧಿಕೃತ ಸುಜುಕಿ ಡೀಲರ್ ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದು. ಹೆಚ್ಚುವರಿಯಾಗಿ ಸುಜುಕಿ ಇ-ಅಕ್ಸೆಸ್ ಮಾರಾಟ ಪ್ರಾರಂಭವಾದ ನಂತರ ಫ್ಲಿಪ್ ಕಾರ್ಟ್ ಮೂಲಕವೂ ಖರೀದಿಗೆ ಲಭ್ಯವಾಗಲಿದೆ ಎಂದು ಸುಜುಕಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶಾಲವಾದ ಸರ್ವಿಸ್ ನೆಟವರ್ಕ್ ಹೋಂದಿರುವ ಸುಜುಕಿ, 1,200 ಸ್ಟೋರ್‌ಗಳಲ್ಲಿ ಗ್ರಾಹಕರು ಸುಜುಕಿಯ ಇ-ಅಕ್ಸೆಸ್‌ಗೆ ಅನುಕೂಲಕರ ಚಾರ್ಜಿಂಗ್ ಸೌಲಭ್ಯಗಳನ್ನು ಪಡೆಯಬಹುದು. ಪ್ರಸ್ತುತ ಡಿಸಿ ಚಾರ್ಜರ್ ಗಳು 240ಕ್ಕೂ ಹೆಚ್ಚು ಸ್ಟೋರ್‌ಗಳಲ್ಲಿ ಲಭ್ಯವಿವೆ. ಹಂತ ಹಂತವಾಗಿ ವಿಸ್ತರಿಸಲಾಗುತ್ತದೆ. ಹೆಚ್ಚುವರಿಯಾಗಿ ಎಸಿ ಪೋರ್ಟಬಲ್ ಚಾರ್ಜರ್‌ಗಳನ್ನು ಎಲ್ಲ 1,200 ಮಳಿಗೆಗಳಲ್ಲಿ ಲಭ್ಯವಿರುವಂತೆ ಮಾಡಲಾಗಿದೆ.

suzuki-first-electric-scooter-e-access-launched-with-best-features

ಗ್ರಾಹಕರಿಗೆ ಒಳ್ಳೆಯ ಆಫರ್:

ಸುಜುಕಿಯ ಇ-ಅಕ್ಸೆಸ್‌ ಖರೀದಿ ಮೇಲೆ 7 ವರ್ಷಗಳವರೆಗೆ ಅಥವಾ ಯಾವುದೇ ವೆಚ್ಚವಿಲ್ಲದೆ 80,000 ಕಿ.ಮೀ.ಗಳವರೆಗೆ ವಿಸ್ತೃತ ವಾರೆಂಟಿ, 3 ವರ್ಷಗಳ ನಂತರ ಶೇ60 ವರೆಗೆ ಉಚಿತ ಬೈ-ಬ್ಯಾಕ್ ಭರವಸೆ, ನೀವು ಈಗಾಗಲೇ ಸುಜುಕಿ ಗ್ರಾಹಕರಾಗಿದ್ದರೆ ರೂ. 10,000 ವರೆಗೆ ಲಾಯಲ್ಟಿ ಬೋನಸ್, ಒಂದು ವೇಳೆ ನೀವು ಮೊದಲ ಬಾರಿಯ ಸುಜುಕಿ ಗ್ರಾಹಕರಾಗಿದ್ದರೆ ರೂ. 7,000 ವರೆಗೆ ವೆಲ್ ಕಮ್ ಬೋನಸ್, 5.99% ಕಡಿಮೆ ಬಡ್ಡಿದರವನ್ನು ಒದಗಿಸಲಾಗುತ್ತಿದೆ.

3.07 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಹಾಗೂ 4.1 ಕಿಲೋವ್ಯಾಟ್ ಮೋಟಾರ್ ಹೊಂದಿರುವ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್, ಫುಲ್‌ ಚಾರ್ಜ್‌ ಮಾಡಿದರೆ 95 ಕಿ.ಮೀವರೆಗೆ ರೇಂಜ್ ನೀಡುತ್ತದೆ. 71 ಕಿ.ಮೀ ಟಾಪ್ ಸ್ಪೀಡ್‌ ಸಾಮರ್ಥ್ಯವನ್ನು ಹೊಂದಿದ್ದು, ಪೋರ್ಟಬಲ್ ಚಾರ್ಜರ್ ಮೂಲಕ 6 ಗಂಟೆ 20 ನಿಮಿಷಗಳಲ್ಲಿ ಶೇ100 ಚಾರ್ಜ್ ಆಗುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಕೇವಲ 2 ಗಂಟೆ 12 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದು.

suzuki-first-electric-scooter-e-access-launched-with-best-features

ಸುಜುಕಿಯ ಇ-ತಂತ್ರಜ್ಞಾನದೊಂದಿಗೆ ಸನ್ನದ್ಧವಾದ ಸುಜುಕಿ ಇ-ಅಕ್ಸೆಸ್ ಐದು ಪ್ರಮುಖ ಅಂಶಗಳೊಂದಿಗೆ ನಿರ್ಮಿಸಲಾಗಿದೆ. ಮೊದಲನೇಯದು ವಿಶ್ವಾಸಾರ್ಹತೆ ಮತ್ತು ದೀರ್ಘಬಾಳಿಕೆಗೆ ಒತ್ತು ನೀಡಲಾಗಿದ್ದು, ಸುಜುಕಿ ಜಾಗತಿಕವಾಗಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕಠಿಣ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ ನೀರಿನಲ್ಲಿ ಮುಳುಗಿಸುವಿಕೆ, ತೀವ್ರ ಉಷ್ಣತೆಗಳು, ಕಂಪನ ಮತ್ತು ಬ್ಯಾಟರಿ ಸುರಕ್ಷತೆ ಪರೀಕ್ಷೆಗಳು ಸೇರಿವೆ.

ಎರಡನೇಯದು ದೀರ್ಘ ಬ್ಯಾಟರಿ ಬಾಳಿಕೆ, ಸುಜುಕಿ ಇ-ಅಕ್ಸೆಸ್ ಲಿಥಿಯಂ ಐರನ್ ಫಾಸ್ಫೇಟ್ (ಎಲ್.ಎಫ್.ಪಿ) ಬ್ಯಾಟರಿಯನ್ನು ಒಳಗೊಂಡಿದ್ದು, ಇದು ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (ಎನ್.ಎಂ.ಸಿ.) ಬ್ಯಾಟರಿಗಳಿಗಿಂತ ನಾಲ್ಕು ಪಟ್ಟು ದೀರ್ಘ ಬ್ಯಾಟರಿ ಲೈಫ್ ನೀಡುತ್ತದೆ. ಮೂರನೇಯದು ಚುರುಕಾದ ನಿರ್ವಹಣೆ, ಈ ಹೊಸ ಸ್ಕೂಟರ್ ಹಗುರವಾದ ಚಾಸಿಗಳನ್ನು ಅಲ್ಯುಮಿನಿಯಂ ಬ್ಯಾಟರಿ ಕೇಸ್ ನೊಂದಿಗೆ ಬರುತ್ತದೆ, ಇದನ್ನು ಹೆಚ್ಚಿನ ಬಿಗಿತಕ್ಕೆ ಫ್ರೇಮ್ ಒಳಗಡೆ ಸೇರಿಸಲಾಗಿದೆ.

suzuki-first-electric-scooter-e-access-launched-with-best-features

ನಾಲ್ಕನೇಯದು ಉನ್ನತ ಗುಣಮಟ್ಟದ ಫಿಟ್ ಅಂಡ್ ಫಿನಿಷ್ ಆಗಿದ್ದು, ಸುಜುಕಿ ಇ-ಅಕ್ಸೆಸ್ ಎಲ್.ಇ.ಡಿ. ಲೈಟಿಂಗ್, ಟು-ಟೋನ್ ಅಲಾಯ್ ವ್ಹೀಲ್ಸ್ ಮತ್ತು ನಿರ್ವಹಣೆ ಮುಕ್ತ ಡ್ರೈವ್ ಬೆಲ್ಟ್ ಹೊಂದಿದೆ. ಇದು 7 ವರ್ಷಗಳವರೆಗೆ ಅಥವಾ 70,000 ಕಿ.ಮೀ. ವರೆಗೆ ಬಾಳಿಕೆ ಬರುತ್ತದೆ. ಈ ಸ್ಕೂಟರ್ ಅನ್ನು ಮೂರು ರೈಡ್ ಮೋಡ್‌ಗಳು (ಇಕೊ, ರೈಡ್ ಎ ಮತ್ತು ರೈಡ್ ಬಿ), ರಿವರ್ಸ್ ಮೋಡ್ ಮತ್ತು ರೀಜನರೇಟಿವ್ ಬ್ರೇಕಿಂಗ್ ಅನ್ನು ಸಹ ಹೊಂದಿದೆ.

ಐದನೇಯದು ತಡೆರಹಿತ ಆಕ್ಸಲರೇಷನ್, ಶಕ್ತಿಯುತ 4.1 ಕೆ.ಡಬ್ಲ್ಯೂ ಮೋಟಾರ್ ಸುಜುಕಿ ಇ-ಅಕ್ಸೆಸ್ ತಡೆರಹಿತ ಆಕ್ಸಲರೇಷನ್ ಮತ್ತು ಅದೇ ಪ್ರತಿಕ್ರಿಯೆಯನ್ನು ಶೇ.10ರಷ್ಟು ಸ್ಟೇಟ್ ಆಫ್ ಚಾರ್ಜ್ (ಎಸ್.ಒ.ಸಿ.)ಯಲ್ಲಿ ನೀಡುತ್ತದೆ. ಗ್ರಾಹಕರಿಗೆ ಹೆಚ್ಚು ಆಯ್ಕೆಗಳನ್ನು ನೀಡುತ್ತಿರುವ ಕಂಪನಿಯು ಸುಜುಕಿ ಇ- ಅಕ್ಸೆಸ್ ಅನ್ನು ಈಗ ನಾಲ್ಕು ಸೊಗಸಾದ ಬಣ್ಣದ ಆಯ್ಕೆಗಳಲ್ಲಿ ನೀಡುತ್ತಿದೆ ಅವುಗಳೆಂದರೆ:

1. ಮೆಟಾಲಿಕ್ ಮ್ಯಾಟ್ ಬ್ಲಾಕ್ ನಂ.2/ ಮೆಟಾಲಿಕ್ ಮ್ಯಾಟ್ ಬಾರ್ಡ್ಯೂಕ್ಸ್ ರೆಡ್
2. ಪರ್ಲ್ ಗ್ರೇಸ್ ವೈಟ್/ಮೆಟಾಲಿಕ್ ಫೈಬ್ರಾಯಿನ್ ಗ್ರೇ
3. ಪರ್ಲ್ ಜೇಡ್ ಗ್ರೀನ್/ ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ
4. ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ/ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ

More from DriveSpark

Article Published On: Friday, January 9, 2026, 19:30 [IST]
English summary
Suzuki first electric scooter e access launched with best features
Read more on suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+