ಸ್ವದೇಶಿ ಬ್ರಾಂಡ್‌ಗೆ ಭರ್ಜರಿ ಲಾಭ ತಂದುಕೊಟ್ಟ ಜನ: ದಾಖಲೆ ಸಂಖ್ಯೆಯಲ್ಲಿ ಮಾರಾಟ
2025-26ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 15.44 ಲಕ್ಷ ಯುನಿಟ್ ವಾಹನಗಳ ತ್ರೈಮಾಸಿಕ ಮಾರಾಟವನ್ನು ದಾಖಲಿಸಿದ್ದು, ಇದುವರೆಗಿನ ಅತ್ಯಧಿಕ ತ್ರೈಮಾಸಿಕ ಮಾರಾಟವಾಗಿದೆ. ಕಂಪನಿಯ ದ್ವಿಚಕ್ರ ವಾಹನ ಮಾರಟವು ಶೇ25 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, Q3FY25 ರಲ್ಲಿ 11.83 ಲಕ್ಷ ಯುನಿಟ್ ವಾಹನಗಳಿಂದ Q3FY26 ರಲ್ಲಿ 14.84 ಲಕ್ಷ ಯುನಿಟ್ ವಾಹನಗಳಿಗೆ ಏರಿಕೆಯಾಗಿದೆ. ಕಂಪನಿಯ ತ್ರಿಚಕ್ರ ವಾಹನ ಮಾರಾಟವು ಶೇ106 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, Q3FY25 ರಲ್ಲಿ 0.29 ಲಕ್ಷ ಯುನಿಟ್‌ಗಳಿಂದ Q3FY26 ರಲ್ಲಿ 0.60 ಲಕ್ಷ ಯುನಿಟ್‌ಗಳಿಗೆ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಕಂಪನಿಯು ಶೇ40 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, Q3FY25 ರಲ್ಲಿ 2.94 ಲಕ್ಷ ಯುನಿಟ್ ವಾಹನಗಳಿಂದ Q3FY26 ರಲ್ಲಿ 4.10 ಲಕ್ಷ ಯುನಿಟ್ ವಾಹನಗಳಿಗೆ ಏರಿಕೆಯಾಗಿದೆ. ಕಂಪನಿಯು ಡಿಸೆಂಬರ್ 2025 ರಲ್ಲಿ 481,389 ಯುನಿಟ್ ವಾಹನಗಳ ಮಾಸಿಕ ಮಾರಾಟವನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ ಮಾರಾಟವಾಗಿದ್ದ 321,687 ಯುನಿಟ್ ವಾಹನಗಳಿಗೆ ಹೋಲಿಸಿದರೆ ಶೇ50 ರಷ್ಟು ಬೆಳವಣಿಗೆ ಕಂಡಿದೆ.

ದ್ವಿಚಕ್ರ ವಾಹನ: ಒಟ್ಟು ದ್ವಿಚಕ್ರ ವಾಹನಗಳು ಶೇ48 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ 312,002 ಯುನಿಟ್‌ಗಳಿಂದ ಡಿಸೆಂಬರ್ 2025 ರಲ್ಲಿ 461,071 ಯುನಿಟ್‌ಗಳಿಗೆ ಮಾರಾಟ ಹೆಚ್ಚಾಗಿದೆ. ದೇಶೀಯ ದ್ವಿಚಕ್ರ ವಾಹನಗಳು ಶೇ54 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2024 ಡಿಸೆಂಬರ್ ತಿಂಗಳಲ್ಲಿ 215,075 ಯುನಿಟ್‌ಗಳಿಂದ 2025 ಡಿಸೆಂಬರ್ ತಿಂಗಳಲ್ಲಿ 330,362 ಯುನಿಟ್‌ಗಳಿಗೆ ಮಾರಾಟ ಹೆಚ್ಚಾಗಿದೆ.
ಮೋಟಾರ್ ಸೈಕಲ್ ಶೇ50 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ 144,811 ಯುನಿಟ್ ವಾಹನಗಳಿಂದ ಡಿಸೆಂಬರ್ 2025 ರಲ್ಲಿ 216,867 ಯುನಿಟ್ ವಾಹನಗಳಿಗೆ ಮಾರಾಟ ಹೆಚ್ಚಾಗಿದೆ. ಸ್ಕೂಟರ್ ವಿಭಾಗವು ಶೇ48 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಡಿಸೆಂಬರ್ 2024 ರಲ್ಲಿ 133,919 ಯುನಿಟ್ ವಾಹನಗಳು, ಡಿಸೆಂಬರ್ 2025 ರಲ್ಲಿ 198,017 ಯುನಿಟ್ ವಾಹನಗಳಿಗೆ ತಲುಪಿದೆ.

ಎಲೆಕ್ಟ್ರಿಕ್ ವಾಹನ: ಇವಿ ಮಾರಾಟವು ಶೇ77 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ 20,171 ಯುನಿಟ್ ವಾಹನಗಳಿಂದ ಡಿಸೆಂಬರ್ 2025 ರಲ್ಲಿ 35,605 ಯುನಿಟ್‌ಗಳಿಗೆ ಏರಿಕೆಯಾಗಿದೆ. ಬ್ರ್ಯಾಂಡ್ ನ ಅಸ್ತಿತ್ವದಲ್ಲಿರುವ ಇವಿ ಪೋರ್ಟ್ಫೋಲಿಯೊದಲ್ಲಿ ಟಿವಿಎಸ್ ಎಕ್ಸ್ ಹೈ-ಎಂಡ್ ಸ್ಕೂಟರ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಹೊಸದಾಗಿ ಬಿಡುಗಡೆಯಾದ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ನಂತಹ ಮಾಡಲ್‌ಗಳು ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿವೆ.
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿನ ಬೆಳವಣಿಗೆಯು ಮುಖ್ಯವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಹೊಸ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಂದ ಸಾಧ್ಯವಾಗಿದೆ. ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸದ್ಯ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಹಲವು ಫೀಚರ್ಸ್ ಹೊಂದಿರುವ ಕಾರಣ ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ವ್ಯವಹಾರ: ಕಂಪನಿಯ ಒಟ್ಟು ರಫ್ತುಗಳು ಶೇ40 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ 104,393 ಯುನಿಟ್‌ಗಳಿಂದ ಡಿಸೆಂಬರ್ 2025 ರಲ್ಲಿ 146,022 ಯುನಿಟ್‌ಗಳಿಗೆ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ರಫ್ತುಗಳು ಶೇ35 ರಷ್ಟು ಹೆಚ್ಚಾಗಿದ್ದು, ಡಿಸೆಂಬರ್ 2024 ರಲ್ಲಿ 96,927 ಯುನಿಟ್‌ಗಳಿಂದ ಡಿಸೆಂಬರ್ 2025 ರಲ್ಲಿ 130,709 ಯುನಿಟ್‌ಗಳಿಗೆ ಏರಿಕೆಯಾಗಿದೆ.
ತ್ರಿಚಕ್ರ ವಾಹನ: ತ್ರಿಚಕ್ರ ವಾಹನಗಳು ಶೇ110 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2024 ರಲ್ಲಿ 9,685 ಯುನಿಟ್‌ಗಳಿಂದ ಡಿಸೆಂಬರ್ 2025 ರಲ್ಲಿ ಮಾರಾಟವು 20,318 ಯುನಿಟ್‌ಗಳಿಗೆ ಏರಿಕೆಯಾಗಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








