ಸೆಂಚುರೊ ಯಶಸ್ಸಿನ ಹಾದಿಯಲ್ಲಿ ಮಹೀಂದ್ರ ಮೊಜೊ ಸ್ಪೋರ್ಟ್ಸ್ ಬೈಕ್
ಸೆಂಚುರೊ ಯಶಸ್ಸಿನಲ್ಲಿ ತೇಲಾಡುತ್ತಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ, ದೆಹಲಿ ಆಟೋ ಎಕ್ಸ್ ಪೋದಲ್ಲಿ ನೂತನ 300 ಸಿಸಿ ಸ್ಪೋರ್ಟ್ಸ್ ಬೈಕ್ ಪ್ರದರ್ಶಿಸಿದೆ.
2014 ಆಟೋ ಎಕ್ಸ್ ಪೋ
ಈ ಹಿಂದೆ ಸ್ಟಾಲಿಯೊ ಲಾಂಚ್ ಮಾಡಿದ್ದ ಮಹೀಂದ್ರ, ಭಾರಿ ವೈಫಲ್ಯವನ್ನು ಅನುಭವಿಸಿತ್ತು. ಇದರಿಂದ ಎದೆಗುಂದದ ಸಂಸ್ಥೆಯು ಸೆಂಚರೊ ಮುಖಾಂತರ ಭರ್ಜರಿ ಪುನರಾಗಮನ ಮಾಡಿಕೊಂಡಿತ್ತು. ಇದೀಗ ಕ್ರೀಡಾ ಬೈಕ್ ಉತ್ಪಾದನಾ ವರ್ಷನ್ ಪ್ರದರ್ಶಿಸುವ ಮೂಲಕ ತನ್ನ ಬೈಕ್‌ಗಳನ್ನು ಇನ್ನಷ್ಟು ವಿಸ್ತರಿಸಿದೆ.

ಮೊಜೊ ಕ್ರೀಡಾ ಬೈಕನ್ನು 2010ನೇ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿದ್ದ ಮಹೀಂದ್ರ, ಇದೀಗ ನಿರ್ಮಾಣ ಸಿದ್ಧ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹಾಗಿದ್ದರೂ ನೂತನ ಬೈಕ್‌ನಲ್ಲಿರುವ ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ವಿವರಣೆ ನೀಡಲು ಸಂಸ್ಥೆ ನಿರಾಕರಿಸಿದೆ. ಈ ಮೂಲಕ ಗ್ರಾಹಕರಲ್ಲಿ ಕುತೂಹಲ ಕಾಯ್ದುಕೊಂಡಿದೆ.

ಸೆಂಚುರೊದಲ್ಲಿ ಆಳವಡಿಸಲಾದ ಗರಿಷ್ಠ ಪ್ರಮಾಣದ ತಂತ್ರಜ್ಞಾನವೇ ಯಶಸ್ಸಿಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಮೊಜೊ ಕ್ರೀಡಾ ಬೈಕ್‌ನಲ್ಲಿ ಯಾವೆಲ್ಲ ನೂತನ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಗ್ರಾಹಕರು ಕಾತರದಿಂದಿದ್ದಾರೆ.

ವರದಿಗಳ ಪ್ರಕಾರ ನೂತನ ವಿನ್ಯಾಸ ಪಡೆದುಕೊಂಡಿರುವ ಮೊಜೊ ವರ್ಷಾಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಇದು 295 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 28 ಬಿಎಚ್‌ಪಿ ಪವರ್ ಉತ್ಪಾದಿಸುವ (25 ಎನ್ಎಂ ಟಾರ್ಕ್) ಸಾಮರ್ಥ್ಯ ಹೊಂದಿರಲಿದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಮಹೀಂದ್ರ ಕ್ರೀಡಾ ಬೈಕ್ ಗರಿಷ್ಠ ನಿರ್ವಹಣೆ ನೀಡಲಿದೆ. ಇದು ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಇದುವರೆಗೆ ಲಭ್ಯವಾಗಿರುವ ವರದಿಗಳ ಪ್ರಕಾರ ಮಹೀಂದ್ರ ಮೊಜೊ, ಪೆಡಾಲ್ ಶೈಲಿಯ ಡಿಸ್ಕ್ ಬ್ರೇಕ್, ರೇಡಿಯಲ್ ಮತ್ತು ಪೈರಲ್ಲಿ ಡಿಮೋನ್ ಚಕ್ರಗಳನ್ನು ಪಡೆಯಲಿದೆ.

ಇದರ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಿಜಿಟಲ್ ಸ್ಪೀಡೊ ಮತ್ತು ಅನಲಾನ್ ಟೆಕೊಮೀಟರ್ ಹೊಂದಿರಲಿದೆ. ಹಾಗಿದ್ದರೂ ಸೆಂಚರೊದಲ್ಲಿರುವಂತಹ ಫೀಚರುಗಳ ಬಗ್ಗೆ ಯಾವುದೇ ಮಾಹತಿಗಳು ಹೊರಬಂದಿಲ್ಲ.


Click it and Unblock the Notifications








