ದೇಶದ ಅತ್ಯುತ್ತಮ ಮೈಲೇಜ್ ಬೈಕುಗಳು!

ನೂತನ ಬೈಕ್ ಖರೀದಿ ಮಾಡುವ ಪ್ರತಿಯೊಬ್ಬ ಗ್ರಾಹಕನೂ ಮೊದಲು ದೇಶದಲ್ಲಿ ದೊರಕುವ ಅತ್ಯುತ್ತಮ ಮೈಲೇಜ್ ಬೈಕ್‌ಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಆಪ್ತರಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.

ಹೀರೊ ಮೊಟೊಕಾರ್ಪ್, ಹೋಂಡಾ ಟು ವೀಲರ್ಸ್, ಬಜಾಜ್ ಆಟೋ, ಮಹೀಂದ್ರ ಟು ವೀಲರ್ಸ್ ಹಾಗೂ ಟಿವಿಎಸ್ ಮೋಟಾರ್ಸ್ ಸದ್ಯ ದೇಶದಲ್ಲಿರುವ ಟಾಪ್ ಬೈಕ್ ಬ್ರಾಂಡ್‌ಗಳಾಗಿವೆ. ದಿನದಿಂದ ದಿನಕ್ಕೆ ಇಂಧನ ದರ ವರ್ಧಿಸುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಇಂಧನ ಕ್ಷಮತೆಯುಳ್ಳ ಬೈಕ್‌ಗಳನ್ನು ಖರೀದಿಸುವುದು ಅನಿವಾರ್ಯವಾಗಿಬಿಟ್ಟಿದೆ.

ಇದರಂತೆ 100 ಹಾಗೂ 110ಸಿಸಿ ಪ್ರಯಾಣಿಕ ದ್ವಿಚಕ್ರ ವಾಹನಗಳಲ್ಲಿ ನಿಕಟ ಪೈಪೋಟಿ ಏರ್ಪಟ್ಟಿದೆ. ಗ್ರಾಹಕರು ಗರಿಷ್ಠ ಮೈಲೇಜ್ ನೀಡುವ ಬೈಕ್‌ಗಳನ್ನು ಆಯ್ಕೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಹಾಗಿರುವಾಗ ನಮ್ಮ ಡ್ರೈವ್ ಸ್ಪಾರ್ಕ್ ತಂಡ ದೇಶದಲ್ಲಿ ಸಿಗುವ ಅತ್ಯುತ್ತಮ ಇಂಧನ ಕ್ಷಮತೆಯುಳ್ಳ ಟಾಪ್ 5 ಬೈಕ್‌ಗಳ ಪಟ್ಟಿ ಮಾಡಿ ಕೊಡಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿರಿ. ಹಾಗೆಯೇ ಅಂತಿಮದಲ್ಲಿ ನಿಮ್ಮ ಬಳಿಯಿರುವ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ ಎಂಬುದನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಲು ಮರೆಯದಿರಿ...

ದೇಶದ ಅತ್ಯುತ್ತಮ ಮೈಲೇಜ್ ಬೈಕುಗಳು

ಇಲ್ಲಿ ನಗರ ಪ್ರದೇಶ ಹಾಗೂ ಹೆದ್ದಾರಿ ಪಯಣವನ್ನು ಜತೆಗೂಡಿಸಿ ಮೈಲೇಜ್ ಲೆಕ್ಕಾಚಾರವನ್ನು ಕೊಡಲಾಗಿದೆ. ಹಾಗೆಯೇ ಅಂತಹ ನಿರ್ದಿಷ್ಟ ಬೈಕುಗಳು ಹೊಂದಿರುವ ಇಂಧನ ಟ್ಯಾಂಕ್ ಸಾಮರ್ಥ್ಯ ಹಾಗೂ ದರ ಸೇರಿದಂತೆ ಇತರ ಅಗತ್ಯದ ಮಾಹಿತಿಯನ್ನು ಹಂಚಲಾಗಿದೆ.

ಟಿವಿಎಸ್ ಸ್ಟಾರ್ ಸ್ಪೋರ್ಟ್

ಟಿವಿಎಸ್ ಸ್ಟಾರ್ ಸ್ಪೋರ್ಟ್

ಚೆನ್ನೈ ಮೂಲದ ಕಂಪನಿಯಾಗಿರುವ ಟಿವಿಎಸ್ ಎಂಟ್ರಿ ಲೆವೆಲ್ 100ಸಿಸಿ ವಿಭಾಗದಲ್ಲಿ ಆಕರ್ಷಕ ಸ್ಟಾರ್ ಸ್ಪೋರ್ಟ್ ಬೈಕ್‌ನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಎಕ್ಸ್ ಶೋ ರೂಂ ದರ 40,000 ರು.ಗಳ ಅಸುಪಾಸಿನಲ್ಲಿದೆ. ಇದರಲ್ಲಿ 99.7 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಟಿವಿಎಸ್ ಸ್ಟಾರ್ ಸ್ಪೋರ್ಟ್

ಟಿವಿಎಸ್ ಸ್ಟಾರ್ ಸ್ಪೋರ್ಟ್

ಮೈಲೇಜ್

ಟಿವಿಎಸ್ ಸ್ಟಾರ್ ಸ್ಪೋರ್ಟ್- 16 ಲೀಟರ್ (ರಿಸರ್ವ್: 2.5 ಲೀಟರ್)

ಸರಾಸರಿ ಮೈಲೇಜ್: 65 kmpl

ದರ ಮಾಹಿತಿ: 39,925 ರು.ಗಳಿಂದ 43,215 ರು.ಗಳ ವರೆಗೆ (ಎಕ್ಸ್ ಶೋ ರೂಂ ಬೆಂಗಳೂರು)

ಹೀರೊ ಸ್ಲ್ಪೆಂಡರ್ ಎನ್‌ಎಕ್ಸ್‌ಜಿ

ಹೀರೊ ಸ್ಲ್ಪೆಂಡರ್ ಎನ್‌ಎಕ್ಸ್‌ಜಿ

2007ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಹೀರೊ ಸ್ಲ್ಬೆಂಡರ್ ಎನ್‌ಎಕ್ಸ್‌ಜಿ ಇದುವರೆಗೆ ಎರಡು ಬಾರಿ ಅಪ್‌ಗ್ರೇಡ್ ವರ್ಷನ್ ಪಡೆದುಕೊಂಡಿದೆ. ಇದು ಸ್ಲ್ಪೆಂಡರ್ ದರ್ಜೆಯ ಬೈಕುಗಳಲ್ಲಿ 'ಡಿಲಕ್ಸ್' ಬೈಕೆಂಬ ಖ್ಯಾತಿಯನ್ನು ಪಡೆದಿದೆ. ಇದರಲ್ಲಿ 97.2 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಹೀರೊ ಸ್ಲ್ಪೆಂಡರ್ ಎನ್‌ಎಕ್ಸ್‌ಜಿ

ಹೀರೊ ಸ್ಲ್ಪೆಂಡರ್ ಎನ್‌ಎಕ್ಸ್‌ಜಿ

ಮೈಲೇಜ್

ಹೀರೊ ಸ್ಲ್ಪೆಂಡರ್ ಎನ್‌ಎಕ್ಸ್‌ಜಿ: 9.51 ಲೀಟರ್ (ರಿಸರ್ವ್: 1.8 ಲೀಟರ್)

ಸರಾಸರಿ ಮೈಲೇಜ್: 65 kmpl

ದರ ಮಾಹಿತಿ: 44,442 ರು.ಗಳಿಂದ 51,224 (ಎಕ್ಸ್ ಶೋ ರೂಂ ಬೆಂಗಳೂರು)

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಕೆಲವು ತಿಂಗಳುಗಳ ಹಿಂದೆಯಷ್ಟೇ ಸೆಂಚುರೊ ಲಾಂಚ್ ಮಾಡಿದ್ದ ಮಹೀಂದ್ರ, ದ್ವಿಚಕ್ರ ಪ್ರಯಾಣಿಕ ಸೆಗ್ಮೆಂಟ್‌ಗೆ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತಲ್ಲದೆ ಕೇವಲ 18 ದಿನಗಳೊಳಗೆ 10,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರಲ್ಲಿ ಎಂಸಿಐ-5 106.7 ಸಿಸಿ ಎಂಜಿನ್ ಆಳವಡಿಸಲಾಗಿದ್ದು (8 ಅಶ್ವಶಕ್ತಿ, 8.5 ಎನ್‌ಎಂ ಟಾರ್ಕ್) 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಮಹೀಂದ್ರ ಸೆಂಚುರೊ

ಮಹೀಂದ್ರ ಸೆಂಚುರೊ

ಮೈಲೇಜ್

ಮಹೀಂದ್ರ ಸೆಂಚುರೊ- 13.7 ಲೀಟರ್ (ರಿವರ್ಸ್ 1.6 ಲೀಟರ್)

ಸರಾಸರಿ ಮೈಲೇಜ್- 70 kmpl

ದರ ಮಾಹಿತಿ- 46,329 ರು. (ಎಕ್ಸ್ ಶೋ ರೂಂ ಬೆಂಗಳೂರು)

ಹೋಂಡಾ ಸಿಬಿ ಟ್ವಿಸ್ಟರ್

ಹೋಂಡಾ ಸಿಬಿ ಟ್ವಿಸ್ಟರ್

110ಸಿಸಿ ಬೈಕ್‌ಗಳು ದೇಶದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಇದರಂತೆ 2009ರಲ್ಲಿ ಲಾಂಚ್ ಕಂಡಿದ್ದ ಹೋಂಡಾ ಟ್ವಿಸ್ಟರ್ 109ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 8 ಬಿಎಚ್‌ಪಿ (9 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಸಿಬಿ ಟ್ವಿಸ್ಟರ್

ಹೋಂಡಾ ಸಿಬಿ ಟ್ವಿಸ್ಟರ್

ಮೈಲೇಜ್

ಹೋಂಡಾ ಸಿಬಿ ಟ್ವಿಸ್ಟರ್- 8 ಲೀಟರ್

ಸರಾಸರಿ ಮೈಲೇಜ್- 70 kmpl

ದರ ಮಾಹಿತಿ: 48,112 ರು.ಗಳಿಂದ 54,982 ರು.ಗಳ ವರೆಗೆ. (ಎಕ್ಸ್ ಶೋ ರೂಂ ಬೆಂಗಳೂರು)

ಬಜಾಜ್ ಡಿಸ್ಕವರ್ 100ಟಿ

ಬಜಾಜ್ ಡಿಸ್ಕವರ್ 100ಟಿ

110 ಸಿಸಿ ವಿಭಾಗವನ್ನು ತೆರೆದು ನೋಡಿದಾಗ ಬಜಾಜ್ ಡಿಸ್ಕವರ್ ಹೆಚ್ಚು ಆಕರ್ಷಕ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದು. ಇದರಲ್ಲಿ 102 ಸಿಸಿ ಡಿಟಿಎಸ್-ಐ ಎಂಜಿನ್ ಆಳವಡಿಸಲಾಗಿದ್ದು, 10.2 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಬಜಾಜ್ ಡಿಸ್ಕವರ್ 100ಟಿ

ಬಜಾಜ್ ಡಿಸ್ಕವರ್ 100ಟಿ

ಮೈಲೇಜ್

ಬಜಾಜ್ ಡಿಸ್ಕವರ್ 100ಟಿ- 10 ಲೀಟರ್ (ರಿಸರ್ವ್: 3.5 ಲೀಟರ್)

ಸರಾಸರಿ ಮೈಲೇಜ್: 75 kmpl

ದರ ಮಾಹಿತಿ: ರು. 48,412 (ಎಕ್ಸ್ ಶೋ ರೂಂ ಬೆಂಗಳೂರು)

ಅಂತಿಮ ತೀರ್ಪು

ಅಂತಿಮ ತೀರ್ಪು

ಅಂತಿಮದಲ್ಲಿ ಮೈಲೇಜ್, ದರ, ವಿಶ್ವಸಾರ್ಹತೆ, ತಂತ್ರಗಾರಿಕೆ ಹಾಗೂ ವಿನ್ಯಾಸವನ್ನು ಪರಿಗಣಿಸಿದಾಗ ಹೋಂಡಾ ಸಿಬಿ ಟ್ವಿಸ್ಟರ್ ಇತರ ಬೈಕ್‌ಗಳಿಗಿಂತ ಸ್ವಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಫುಲ್ ಟ್ಯಾಂಕ್ ಇಂಧನ ಭರ್ತಿ ಮಾಡಿದರೆ ನಗರ ಹಾಗೂ ಹೆದ್ದಾರಿ ಪ್ರದೇಶವನ್ನು ಸೇರಿಸಿ 500 ಕೀ.ಮೀ. ತನಕ ಸಾಗಬಹುದಾಗಿದೆ. ಇನ್ನೊಂದೆಡೆ ದೀರ್ಘ ಪ್ರಯಾಣವನ್ನು ಬಯಸುವುದಾದ್ದಲ್ಲಿ ಟಿವಿಎಸ್ ಸ್ಟಾರ್ ಸ್ಪೋರ್ಟ್ ಉತ್ತಮ ಆಯ್ಕೆಯಾಗಿರಲಿದೆ. ಇದರ 16 ಲೀಟರ್ ಇಂಧನ ಟ್ಯಾಂಕ್ ನೆರವಿನಿಂದ 1040 ಕೀ.ಮೀ. ರೇಂಜ್ ವರೆಗೆ ಸರಾಗವಾಗಿ ಚಲಿಸಬಹುದಾಗಿದೆ.

ಮೇಲೆ ನೀಡಿರುವ ಮೈಲೇಜ್ ನಿಖರವಾಗಿರಬೇಕೆಂದಿಲ್ಲ. ಯಾಕೆಂದರೆ ಈ ಮೈಲೇಜ್ ಮಟ್ಟ ತಲುಪಲು ಗಂಟೆಗೆ 40ರಿಂದ 50 ಕೀ.ಮೀ. ವೇಗದಲ್ಲಿ ಚಲಿಸಬೇಕಾಗುತ್ತದೆ. ಸದ್ಯದ ನಮ್ಮ ಟ್ರಾಫಿಕ್ ಪರಿಸ್ಥಿತಿಯಲ್ಲಿ ಇದು ಅಸಾಧ್ಯದ ಮಾತು.

ದೇಶದ ಅತ್ಯುತ್ತಮ ಮೈಲೇಜ್ ಬೈಕುಗಳು

ಇದೀಗ ನಿಮ್ಮ ಬೈಕ್ ಎಷ್ಟು ಮೈಲೇಜ್ ನೀಡುತ್ತಿವೆ ಎಂಬುದರ ಕುರಿತು ಕಾಮೆಂಟ್ ಬಾಕ್ಸ್‌ನಲ್ಲಿ ಚರ್ಚೆ ಆರಂಭಿಸಿ. ಈ ಮುಖಾಂತರ ಕನ್ನಡಿಗರಿಗೆ ಉತ್ತಮ ಮಾಹಿತಿ ದೊರಕುವಂತಾಗಲಿ. ಹ್ಯಾಪಿ ಡ್ರೈವಿಂಗ್!

More from DriveSpark

Article Published On: Saturday, September 21, 2013, 7:01 [IST]
English summary
Bikes in the 100cc and 110cc commuter segment has thus become the battleground for the likes of Hero, Honda, Bajaj, TVS and Mahindra, fighting for supremacy. Each manufacturer has more than one model on offer. In our list we have shortlisted one model from each manufacturer that offers the highest fuel economy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+