ಹೀರೊ ಜತೆಗಾರ ಎರಿಕ್‌ನಿಂದ ಹೈಬ್ರಿಡ್ ಸ್ಕೂಟರ್ ಕಾನ್ಸೆಪ್ಟ್
ಹೈಬ್ರಿಡ್ ಕಾರು, ಎಲೆಕ್ಟ್ರಿಕ್ ಕಾರು ಹೀಗೆ ಹಲವು ವಿಧದ ಕಾರುಗಳನ್ನು ನೋಡಿರುತ್ತೇವೆ. ತಂತ್ರಜ್ಞಾನದ ಆವಿಷ್ಕಾರವಾದಂತೆ ಭವಿಷ್ಯದ ವಾಹನಗಳನ್ನು ರೂಪಿಸುವುದರಲ್ಲಿ ವಾಹನೋದ್ಯಮ ಸದಾ ಕಾರ್ಯ ಮಗ್ನವಾಗಿದೆ.
ಇದಕ್ಕೊಂದು ಸೇರ್ಪಡೆಯೆಂಬಂತೆ ನೂತನ ಹೈಬ್ರಿಡ್ ಚಾಲಿತ ಸ್ಕೂಟರನ್ನು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಜೊತೆ ಪಾಲುದಾರಿಕೆ ಹೊಂದಿರುವ ಅಮೆರಿಕಾ ಮೂಲದ ಪ್ರಖ್ಯಾತ ಟು ವೀಲರ್ ಸಂಸ್ಥೆ ಎರಿಕ್ ಬ್ಯುಯೆಲ್ ರೇಸಿಂಗ್ ಪ್ರಸ್ತುತಪಡಿಸಿದೆ.
ಎರಿಕ್ ಬ್ಯುಯೆಲ್ ಹೈಬ್ರಿಡ್ ಸ್ಕೂಟರನ್ನು ಇಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ನಿಮ್ಮ ಮಾಹಿತಿಗಾಗಿ ಎರಿಯ್ ಬ್ಯುಯೆಲ್ ಜತೆ ಹೀರೊ ತಂತ್ರಜ್ಞಾನ ಪಾಲುದಾರಿಕೆ ಹೊಂದಿದ್ದು, ಹಾಗಾಗಿ ಭವಿಷ್ಯದಲ್ಲಿ ಎರಿಕ್ ಹೈಬ್ರಿಡ್ ತಂತ್ರಜ್ಞಾನವನ್ನು ಹೀರೊ ಭಾರತಕ್ಕೆ ಪರಿಚಯಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ವಿಶಿಷ್ಟ ಹಕ್ಕುಪತ್ರ
ನಿಮ್ಮ ಮಾಹಿತಿಗಾಗಿ ಈ ನೂತನ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲು ಅಮೆರಿಕ ಮೂಲದ ಎರಿಕ್ ಬ್ಯುಯೆಲ್ ರೇಸಿಂಗ್ ವಿಶಿಷ್ಟ ಹಕ್ಕುಪತ್ರವನ್ನು ಪಡೆದುಕೊಂಡಿದೆ.

ಹೈಬ್ರಿಡ್ ತಳಿ
ಹೆಸರಲ್ಲೇ ಸೂಚಿಸಿರುವಂತೆಯೇ ಈ ಮಿಶ್ರತಳಿ ತಂತ್ರಗಾರಿಕೆಯ ಸ್ಕೂಟರ್‌ನಲ್ಲಿ ಪೆಟ್ರೋಲ್ ಎಂಜಿನ್ ಇರಲಿದೆ. ಇದು ಬ್ಯಾಟರಿ ಚಾರ್ಜ್ ಮಾಡುವುದರ ಸಲುವಾಗಿ ಜನರೇಟರ್‌ಗೆ ಶಕ್ತಿ ತುಂಬಲಿದೆ.

ಎಂಜಿನ್
ಈ ಹೈಬ್ರಿಡ್ ಸ್ಕೂಟರ್‌ನಲ್ಲಿ ಪೆಟ್ರೋಲ್ ಎಂಜಿನ್ ಜತೆಗೆ ಎಲೆಕ್ಟ್ರಿಕ್ ಮೋಟಾರ್ ಕೂಡಾ ಇರಲಿದೆ.

ಭಾರತದತ್ತ ಚಿತ್ತ
ಎರಿಕ್ ಬ್ಯುಯೆಲ್ ರೇಸಿಂಗ್‌ನಲ್ಲಿ ಹೀರೊ ಶೇರು ಇರುವುದರಿಂದ ಮುಂದಿನ ದಿನಗಳಲ್ಲಿ ಉತ್ಪಾದನಾ ವರ್ಷನ್ ಭಾರತಕ್ಕೂ ಲಗ್ಗೆಯಿಡುವ ಸಾಧ್ಯತೆಗಳಿವೆ.
ಹೀರೊ ಲೀಪ್ ಹೈಬ್ರಿಡ್ ಸ್ಕೂಟರ್ ಕಾನ್ಸೆಪ್ಟ್
ಈ ಹಿಂದೆ 2012ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೀರೊ ಪ್ರದರ್ಶಿಸಿರುವ ಹೀರೊ ಲೀಪ್ ಹೈಬ್ರಿಡ್ ಸ್ಕೂಟರ್ ಕಾನ್ಸೆಪ್ಟ್ ವೀಡಿಯೋ ಇಲ್ಲಿದೆ ನೋಡಿ..


Click it and Unblock the Notifications