ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

By Nagaraja

ಜಗತ್ತಿನ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಹರ್ಲಿ ಡೇವಿಡ್ಸನ್, ಭವಿಷ್ಯದ ಅಗತ್ಯಗಳಿನುಸಾರವಾಗಿ ತನ್ನ ಸಾಂಪ್ರದಾಯಿಕ ನಿರ್ಮಾಣ ಶೈಲಿಯಲ್ಲೂ ಬದಲಾವಣೆ ತರಲು ಮುಂದಾಗಿದೆ.

ಇದರ ಪರಿಣಾಮವೆಂಬಂತೆ ಅಮೆರಿಕದ ಈ ಐಕಾನಿಕ್ ಸಂಸ್ಥೆಯು ಸಂಪೂರ್ಣ ವಿದ್ಯುತ್ ಚಾಲಿತ ಬೈಕ್‌ವೊದನ್ನು ಅಭಿವೃದ್ಧಿಪಡಿಸಿದೆ. ಇದು 'ಲೈವ್‌ವೈರ್' ಎಂದು ಹೆಸರಿಸಿಕೊಳ್ಳಲಿದೆ. ತವರೂರಾದ ಅಮೆರಿಕದಲ್ಲಿ ಜೂನ್ 19ರಂದು ಬಿಡುಗಡೆಯಾಗಿರುವ ಹರ್ಲಿಯ ಎಲೆಕ್ಟ್ರಿಕ್ ಬೈಕ್ ಸದ್ಯದಲ್ಲೇ ಜಗತ್ತಿನ ಇತರೆಡೆಗಳಿಗೂ ವ್ಯಾಪಿಸಲಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಆಟೋ ಉತ್ಸಾಹಿಗಳ ಪಾಲಿಗಿದು ಮಹತ್ತರ ಸುದ್ದಿಯಾಗಿದ್ದು, ಈ ಹಿಂದೆ ತಮ್ಮ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದ್ದರೂ ಯಾರೂ ಕೂಡಾ ಇಷ್ಟು ಬೇಗನೇ ಹರ್ಲಿ ಎಲೆಕ್ಟ್ರಿಕ್ ಬೈಕ್ ರಂಗಪ್ರವೇಶ ಮಾಡಲಿದೆ ಎಂದು ಅಂದುಕೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಸಂಸ್ಥೆಯ ಪ್ರಯತ್ನವನ್ನು ಮೆಚ್ಚಲೇ ಬೇಕು.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

3 ಫೇಸ್ ಎಸಿ ಇಂಡಕ್ಷನ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುವ ಹರ್ಲಿಯ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ 55 ಕೆಡಬ್ಲ್ಯು (74 ಅಶ್ವಶಕ್ತಿಗೆ ಸಮಾನ) ಹಾಗೂ 70 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಸರಿ ಸುಮಾರು 115 ಕೆ.ಜಿ ಭಾರ ಹೊಂದಿರುವ ಇದರ ಲಿಥಿಯಂ ಇಯಾನ್ ಬ್ಯಾಟರಿಯ ನೆರವಿನಿಂದ 85 ಕೀ.ಮೀ. ವರೆಗೂ ಸಂಚರಿಸಬಹುದಾಗಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಬೈಕ್‌ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ಲೈವ್‌ವೈರ್, 4 ಸೆಕೆಂಡುಗಿಂತಲೂ ಕಡಿಮೆ ಅವಧಿಯಲ್ಲಿ ಗಂಟೆಗೆ 0-96 ಕೀ.ಮೀ. ವೇಗವರ್ಧಿಸುವ ಹಾಗೆಯೇ ಗರಿಷ್ಠ 150 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಬ್ರೇಕಿಂಗ್‌ನಲ್ಲಿ ಮರು ಉತ್ಪಾದಕ ಶಕ್ತಿ ಹೊಂದಿರುವ ಲೈವ್‌ವೈರ್, 3.5 ತಾಸಿನಲ್ಲಿ (220 ವೋಲ್ಟ್) ಸಂಪೂರ್ಣ ಚಾರ್ಜ್ ಆಗಲಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಇತರ ವಿದ್ಯುತ್ ಬೈಕ್‌ಗಳನ್ನು ಹೋಲಿಸಿದಾಗ ವಿನ್ಯಾಸದಲ್ಲಿ ಯಾವುದೇ ರಾಜಿಗೂ ಹರ್ಲಿ ತಯಾರಾಗಿಲ್ಲ ಎಂಬುದು ಕಂಡುಬಂದಿದೆ. ಇದು ಈಗಲೂ ಹರ್ಲಿಯ ಸಾಂಪ್ರದಾಯಕ ವಿನ್ಯಾಸ ಕಾಪಾಡಿಕೊಂಡು ಬಂದಿದೆ.

ಹರ್ಲಿಯ ಚೊಚ್ಚಲ ವಿದ್ಯುತ್ ಬೈಕ್ 'ಲೈವ್‌ವೈರ್'

ಸಹಜವಾಗಿಯೇ ಈ ವಿದ್ಯುತ್ ಬೈಕ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಜಾಗದಲ್ಲಿ ಎಲ್‌ಸಿಡಿ ಪರದೆ ಕಂಡುಬಂದಿದೆ. ಹಾಗೆಯೇ ಮುಂದುಗಡೆ ಎಲ್‌ಇಡಿ ಹೆಡ್‌ಲೈಟ್ ಹಾಗೂ ಮಿರರ್ ಸೌಲಭ್ಯವಿರಲಿದೆ.

More from DriveSpark

Article Published On: Wednesday, June 25, 2014, 6:02 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+