ಹರ್ಲಿ ಅಗ್ಗದ ಬೈಕ್ ಲಾಂಚ್; ಬೆಲೆ 4.1 ಲಕ್ಷ ರು.
ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 750 ಅಗ್ಗದ ಬೈಕ್, ಪ್ರತಿಷ್ಠಿತ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದೆ.
2014 ಆಟೋ ಎಕ್ಸ್ ಪೋ ಲೈವ್
ಗ್ರೇಟರ್ ನೋಯ್ಢಾದಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿರುವ ಹರ್ಲಿ ಸ್ಟ್ರೀಟ್ 750 ಬೈಕ್ 4.1 ಎಕ್ಸ್ ಶೋ ರೂಂ ಲಕ್ಷ ರು.ಗಳಲ್ಲಿ ಗ್ರಾಹಕರನ್ನು ತಲುಪಲಿದೆ.

ದೇಶದಲ್ಲಿ ಮಾರ್ಚ್ ತಿಂಗಳಿಂದ ಹರ್ಲಿ ಸ್ಟ್ರೀಟ್ 750 ಬೈಕ್ ಮಾರಾಟ ಆರಂಭವಾಗಲಿದೆ. ಇದು ದೇಶದಲ್ಲಿ ಸ್ಥಿತಗೊಂಡಿರುವ 13 ಡೀಲರ್‌ಶಿಪ್‌ಗಳಲ್ಲಿ ವಿತರಣೆಯಾಗಲಿದೆ.

ಮುಂದಿನ ದಿನಗಳಲ್ಲಿ 500 ಸಿಸಿ ಬೈಕ್ ಕೂಡಾ ಲಾಂಚ್ ಆಗಲಿದೆ. ಇದು 750 ಆವೃತ್ತಿಗಿಂತಲೂ ಕಡಿಮೆ ದರಗಳಲ್ಲಿ ಮಾರುಕಟ್ಟೆ ತಲುಪಲಿದೆ.

ಮುಂಬೈ, ದೆಹಲಿ ಸೇರಿದಂತೆ 10 ವಿಭಿನ್ನ ದೇಶಗಳಲ್ಲಿನ 3000ರಷ್ಟು ಬೈಕರುಗಳ ವಿಮರ್ಶೆಯ ಆಧಾರದಲ್ಲಿ ನೂತನ ಸ್ಟ್ರೀಟ್ 750 ವಿನ್ಯಾಸ ರಚಿಸಲಾಗಿದೆ.

ಅಂದ ಹಾಗೆ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ವಿ ಟ್ವಿನ್ 749 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.


Click it and Unblock the Notifications








