ಹೋಂಡಾಗೆ ಟಕ್ಕರ್ ನೀಡಲು ಸಾಲು ಗಟ್ಟಿ ನಿಂತಿರುವ ಹೀರೊ ಸ್ಕೂಟರುಗಳು

By Nagaraja

ಇದೀಗ ಎಲ್ಲವೂ ಸ್ಪಷ್ಟ; ಗ್ರಾಹಕರು ಸುಲಭ ಚಾಲನೆ ಹೆಚ್ಚೆಚ್ಚು ಇಷ್ಟಪಡುತ್ತಾರೆ. ಅವರೀಗ ನಗರದ ವಾಹನ ದಟ್ಟಣೆಯಲ್ಲಿ ಪದೇ ಪದೇ ಗೇರ್ ಬದಲಾವಣೆ ಮಾಡುವ ಗೋಜಿಗೆ ಹೋಗಲು ಇಷ್ಟಪಡುವುದಿಲ್ಲ. ಬದಲಾಗಿ ಸುಲಭ ಆಟೋಮ್ಯಾಟಿಕ್ ಚಾಲನೆ ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್ ಸೆಗ್ಮೆಂಟ್ ಶಿಪ್ರ ಗತಿಯಿಂದ ಬೆಳೆಯುತ್ತಲೇ ಇದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೀರೊ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಆದರೆ ಸ್ಕೂಟರ್ ಸೆಗ್ಮೆಂಟ್ ವಿಭಾಗಕ್ಕೆ ಬಂದಾಗ ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ಸ್ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇವೆಲ್ಲಕ್ಕೂ ಕಾರಣ ಹೋಂಡಾ ಜನಪ್ರಿಯ ಆಕ್ಟಿವಾ ಹಾಗೂ ಡಿಯೊ ಸ್ಕೂಟರುಗಳು. ಪ್ರಸ್ತುತ ಅತಿ ಶೀಘ್ರದಲ್ಲೇ ಆಕ್ಟಿವಾ ಐ 125 ಸಿಸಿ ಸ್ಕೂಟರ್ ಲಾಂಚ್ ಮಾಡಲಿರುವ ಹೋಂಡಾ ತನ್ನ ಸ್ಥಾನವನ್ನು ಇನ್ನಷ್ಟು ಸುಭದ್ರಪಡಿಸಲಿದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗಿರುವ ಹೀರೊ ಕೂಡಾ ನಿಕಟ ಭವಿಷ್ಯದಲ್ಲೇ ಡ್ಯಾಶ್, ಡೇರ್, ಜೀರ್ ಮತ್ತು ಲೀಪ್‌ಗಳೆಂಬ ಸ್ಕೂಟರುಗಳನ್ನು ವಿವಿಧ ಸೆಗ್ಮೆಂಟ್‌ಗಳಲ್ಲಿ ಲಾಂಚ್ ಮಾಡಲಿದೆ. ಈ ಎಲ್ಲ ಮಾದರಿಗಳು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವುದು ಗಮನಾರ್ಹವಾಗಿದೆ.

ಹೀರೊ ಡ್ಯಾಶ್

ಹೀರೊ ಡ್ಯಾಶ್

ಸೆಗ್ಮೆಂಟ್: 110 ಸಿಸಿ

ಹೀರೊ ಪಾಲಿಗೆ 110ಸಿಸಿ ವಿಭಾಗದ ಡ್ಯಾಶ್ ಅತಿ ಮುಖ್ಯವೆಸಿದ್ದು, ಇದು 8.5 ಅಶ್ವಶಕ್ತಿ (9.4 ಎನ್‌ಎಂ ಟಾರ್ಕ್) 111ಸಿಸಿ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

ಹೀರೊ ಡ್ಯಾಶ್

ಹೀರೊ ಡ್ಯಾಶ್

ಬಾಹ್ಯ ಇಂಧನ ತುಂಬಿಸುವ ವ್ಯವಸ್ಥೆ, ಡಿಜಿಟಲ್ ಅನಾಲಾಗ್ ಡ್ಯಾಶ್ ಬೋರ್ಡ್, ಮೊಬೈಲ್ ಚಾರ್ಜಿಂಗ್ ಸೊಕೆಟ್ ಮತ್ತು ಸ್ಟೈಲಿಷ್ ಡ್ಯುಯಲ್ ಟೋನ್ ಮಿರರ್ ಕ್ಯಾಪ್‌ಗಳು ಹೀರೊ ಡ್ಯಾಶ್ ಬೈಕ್‌ಗಳ ಕೆಲವೊಂದು ಮುಖ್ಯ ವೈಶಿಷ್ಟ್ಯವಾಗಿರಲಿದೆ.

ಹೀರೊ ಡೇರ್

ಹೀರೊ ಡೇರ್

ಸೆಗ್ಮೆಂಟ್: 125 ಸಿಸಿ

ಅತ್ತ ಹೋಂಡಾ ಆಕ್ಟಾವಿ ಐ ಆಗಮನವಾಗುತ್ತಿರುವಂತೆಯೇ ಡೇರ್ ಮೂಲಕ ಹೀರೊ ಪ್ರತಿಸ್ಪರ್ಧಿಯನ್ನು ಸಿದ್ಧಗೊಳಿಸುತ್ತಿದೆ. ವರದಿಗಳ ಪ್ರಕಾರ ವರ್ಷಾಂತ್ಯದಲ್ಲಿ ಹೀರೊ ಡೇರ್ ಲಾಂಚ್ ಆಗಲಿದೆ. ಇದು 9.38 ಅಶ್ವಶಕ್ತಿ (9.8 ಎನ್‌ಎಂ ಟಾರ್ಕ್) ಉತ್ಪಾದಿಸಬಲ್ಲ 124.6 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಹೀರೊ ಡೇರ್

ಹೀರೊ ಡೇರ್

ಡೇರ್ ಪ್ರೀಮಿಯಂ ಸ್ಕೂಟರ್‌ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದ್ದು ಇದಕ್ಕೆ ಸರಿಯಾಗಿ ದರ ನಿಗದಿಯಾಗಲಿದೆ. ಇದು ಫ್ರಂಟ್ ಡಿಸ್ಕ್ ಬ್ರೇಕ್ ಜತೆ ದೇಹ ಬಣ್ಣದ ಕ್ಯಾಲಿಪರ್, ಅಲಾಯ್ ವೀಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಡಿಜಿಟಲ್ ಕನ್ಸೋಲ್ ಪಡೆಯುವ ಸಾಧ್ಯತೆಯಿದೆ.

ಹೀರೊ ಜೀರ್

ಹೀರೊ ಜೀರ್

ಸೆಗ್ಮೆಂಟ್: 150 ಸಿಸಿ

2015-16ನೇ ಸಾಲಿನಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿರುವ ಹೀರೊ ಜೀರ್ 157.1 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಇದು ತನ್ನ ಸೆಗ್ಮೆಂಟ್‌ನ ಏಕಮಾತ್ರ ಸಾರಥಿಯಾಗಿರಲಿದ್ದು, 14 ಅಶ್ವಶಕ್ತಿ (12.7 ಎನ್‌ಎಂ ಟಾರ್ಕ್) ಉತ್ಪಾದಿಸಬಲ್ಲ ಎಂಜಿನ್ ಪಡೆದುಕೊಳ್ಳಲಿದೆ.

ಹೀರೊ ಜೀರ್

ಹೀರೊ ಜೀರ್

ಹೀರೊ ಪೈಕಿ ಜೀರ್ ಅತ್ಯಂತ ದುಬಾರಿ ಸ್ಕೂಟರ್ ಎನಿಸಿಕೊಳ್ಳಲಿದೆ. ಇದರಲ್ಲಿ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಹೈಡ್ರಾಲಿಕ್ ಫಾರ್ಕ್, ಹಿಂದುಗಡೆ ಹೊಂದಾಣಿಸಬಹುದಾದ ಡ್ಯುಯಲ್ ಶಾಕ್ಸ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜತೆ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಸ್ಮಾರ್ಟ್‌ಫೋನ್ ಇಂಟೆಗ್ರೇಷನ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಹೀರೊ ಲೀಪ್

ಹೀರೊ ಲೀಪ್

ಸಾಂಪ್ರದಾಯಿಕ ಸ್ಕೂಟರುಗಳು ಒಂದೆಡೆಯಾದರೆ ದೇಶದ ಪ್ರಪ್ರಥಮ ನಿರ್ಮಾಣ ಸಿದ್ಧ ಹೈಬ್ರಿಡ್ ಸ್ಕೂಟರ್ ಲಾಂಚ್ ಮಾಡುವ ಯೋಜನೆಯನ್ನು ಹೀರೊ ಹೊಂದಿದೆ. ಅಂದ ಹಾಗೆ 2015ನೇ ಸಾಲಿನಲ್ಲಿ ಲೀಪ್ ಲಾಂಚ್ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಹೀರೊ ಲೀಪ್

ಹೀರೊ ಲೀಪ್

ಎಲೆಕ್ಟ್ರಿಕ್ ಟ್ರಾಕ್ಷನ್ ಮೋಟಾರು ಚಲಿಸಬಲ್ಲ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಲೀಪ್ ಹೊಂದಿರಲಿದೆ. ಅಲ್ಲದೆ ಹೊಸತಾಗಿ ಅಭಿವೃದ್ಧಿಪಡಿಸಿರುವ 124 ಸಿಸಿ, 11 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಕೂಡಾ ಇರಲಿದೆ. ಹಾಗಿದ್ದರೂ ಎಷ್ಟು ದೂರದ ವರೆಗೆ ಪಯಣಿಸಬಹುದು ಎಂಬುದರ ಬಗ್ಗೆ ಹೀರೊದಿಂದ ಮಾಹಿತಿ ಲಭ್ಯವಾಗಿಲ್ಲ.

ಹೋಂಡಾಗೆ ಟಕ್ಕರ್ ನೀಡಲು ಸಾಲು ಗಟ್ಟಿ ನಿಂತಿರುವ ಹೀರೊ ಸ್ಕೂಟರುಗಳು

ಅಷ್ಟಕ್ಕೂ ಆಕ್ಟಿವಾ ಐ 125 ಸಿಸಿ ಸ್ಕೂಟರ್ ಸೇರಿದಂತೆ ಮೇಲೆ ಕೊಟ್ಟಿರುವ ಸ್ಕೂಟರುಗಳಲ್ಲಿ ಯಾವ ಆವೃತ್ತಿಯ ಬಗ್ಗೆ ಅತಿ ಹೆಚ್ಚು ಉತ್ಸುಕರಾಗಿದ್ದೀರಾ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿರಿ...

More from DriveSpark

Article Published On: Monday, March 24, 2014, 17:03 [IST]
English summary
Hero MotoCorp might well be the largest two wheeler manufacturer in India. But when it comes to scooters, rival Honda is the clear leader, controlling over half the market, thanks to the Activa & the Dio. Things could get even better for Honda when it launches the Activa 125.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+