ಸದ್ಯದಲ್ಲೇ 2014 ಹೀರೊ ಪ್ಲೆಷರ್ ಎಂಟ್ರಿ
ಹುಡುಗರು ಮಾತ್ರ ಏಕೆ ಎಲ್ಲ ಮೋಜು ಅನುಭವಿಸಬೇಕು? ಎಂಬ ಟ್ಯಾಗ್ ಮೂಲಕ ಎಂಟ್ರಿ ಕೊಟ್ಟಿರುವ ಹೀರೊ ಪ್ಲೆಷರ್ ಸ್ಕೂಟರ್, ಪ್ರಮುಖವಾಗಿಯೂ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮಾರುಕಟ್ಟೆ ಪ್ರವೇಶ ಪಡೆದಿತ್ತು.
ಪ್ರಸ್ತುತ ಹೀರೊ ಪ್ಲೆಷರ್ 2014 ಆಗಮನಕ್ಕೆ ಸಿದ್ಧಗೊಂಡಿದೆ. ಈ ಸಂಬಂಧ ವೆಬ್‌ಸೈಟ್‌ನಲ್ಲಿ ಹೊಸ ಗಾಡಿಯ ಪರಿಚಯವಾಗಿದೆ. ಬಣ್ಣ ಬಣ್ಣದ ಪ್ಲೆಷರ್ ನಿಜಕ್ಕೂ ಯುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದೆ.

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದ್ದ 2014 ಪ್ಲೆಷರ್, ಕೆಲವೊಂದು ಬದಲಾವಣೆ ಪಡೆದುಕೊಳ್ಳಲಿದೆ. ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕನ್ಸೋಲ್ ಜತೆಗೆ ಡ್ಯುಯಲ್ ಟೋನ್ ಕಲರ್ ಸ್ಕೀಮ್ ಹೆಚ್ಚು ಆಕರ್ಷಣೆಗೆ ಪಾತ್ರವಾಗಲಿದೆ.

ಈ ಮೊದಲೇ ತಿಳಿಸಿರುವಂತೆಯೇ ಬಣ್ಣ ಬಣ್ಣಗಳಲ್ಲಿ ಹೊಸ ಪ್ಲೆಷರ್ ನಿಮಗೆ ಸಿಗಲಿದೆ. ಅವುಗಳೆಂದರೆ
ಬೋಲ್ಡ್ ಬ್ಲ್ಯಾಕ್,
ಬ್ಯೂಟಿಫುಲ್ ಬ್ಲೂ,
ಪ್ಲೇಫುಲ್ ರೆಡ್ ಆಂಡ್ ವೈಟ್,
ಬಹುಕಾಂತೀಯ ಹಸಿರು ಬಣ್ಣ,
ಔಟ್‌ಗೋಯಿಂಗ್ ಆರೆಂಜ್,
ರಾವಿಶಿಂಗ್ ರೆಡ್,
ಪ್ರೇಕ್ಷಣೀಯ ಬೆಳ್ಳಿ ಬಣ್ಣ,
ಉತ್ಸಾಹಿ ನೇರಳೆ ಬಣ್ಣ,
ಸ್ವಾರಸ್ಯಕರ ಬಿಳಿ ಬಣ್ಣ.

ಹಾಗೆಯೇ ಹೊಸ ಪ್ಲೆಷರ್ ಸ್ಕೂಟರಿನಲ್ಲಿ ಕಾಂಬಿ ಬ್ರೇಕ್ ಇರಲಿದೆ. ಹಾಗೆಯೇ ಲಗ್ಗೇಜ್ ಜಾಗದಲ್ಲಿ ಬೂಟ್ ಲೈಟ್ ಇರಲಿದೆ. ಅಲ್ಲದೆ ಮೊಬೈಲ್ ಚಾರ್ಜಿಂಗ್ ಸಾಕೆಟ್ ಸಹ ಲಗತ್ತಿಸಲಾಗಿದೆ.

ವೈಶಿಷ್ಟ್ಯ
ಸ್ಟನ್ನಿಂಗ್ ಮೀಟರ್ ಕನ್ಸೋಲ್
ಸ್ಟನ್ನಿಂಗ್ ಟೈಲ್ ಲೈಟ್
ಬಹು ಪ್ರತಿಫಲಿಸುವ ಹೆಡ್‌ಲೈಟ್
ಲಗ್ಗೇಜ್ ಬಾಕ್ಸ್‌ನಲ್ಲಿ ಬೂಟ್ ಲೈಟ್
ಇಂಟೇಗ್ರೇಟಡ್ ಬ್ರೇಕಿಂಗ್ ಸಿಸ್ಟಂ
ಮೊಬೈಲ್ ಚಾರ್ಜರ್ ಸಾಕೆಟ್
ಟ್ಯೂಬ್‌ಲೆಸ್ ಟೈರ್

ಅಂದ ಹಾಗೆ ಹೀರೊ ಪ್ಲೆಷರ್ 102 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7 ಬಿಎಚ್‌ಪಿ (8 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಪ್ರಮುಖವಾಗಿಯೂ ಹೋಂಡಾ ಆಕ್ಟಿವಾ, ಟಿವಿಎಸ್ ಸ್ಕೂಟಿ, ಯಮಹಾ ರೇ ಹಾಗೂ ಸುಜುಕಿ ಲೆಟ್ಸ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. ಒಟ್ಟಿನಲ್ಲಿ 2014 ಹೀರೊ ಪ್ಲೆಷರ್ ಸದ್ಯದಲ್ಲೇ ಲಾಂಚ್ ಆಗುವ ಬಗ್ಗೆ ಮಾಹಿತಿಯಿದೆ.

ಎಂಜಿನ್ : 102 ಸಿಸಿ, ಏರ್ ಕೂಲ್ದ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ
ಇಗ್ನಿಷನ್ : ಸಿಡಿಐ
ಗರಿಷ್ಠ ವೇಗತೆ : ಗಂಟೆಗೆ 77 ಕೀ.ಮೀ.
ಕ್ಲಚ್: ಡ್ರೈ, ಆಟೋಮ್ಯಾಟಿಕ್ ಸೆಂಟ್ರಿಫ್ಯೂಗಲ್ ಕ್ಲಚ್
ಉದ್ದ: 1750 ಎಂಎಂ
ಅಗಲ: 705 ಎಂಎಂ
ಎತ್ತರ: 115 ಎಂಎಂ
ವೀಲ್‌ಬೇಸ್: 1240 ಎಂಎಂ
ಗ್ರೌಂಡ್ ಕ್ಲಿಯರನ್ಸ್: 125 ಎಂಎಂ
ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ: 5 ಲೀಟರ್
ಕರ್ಬ್ ಬಾರ: 103 ಕೆ.ಜಿ


Click it and Unblock the Notifications








