ಸದ್ದಿಲ್ಲದೆ ಹೀರೊ ಪ್ಲೆಷರ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸದ್ದಿಲ್ಲದೆ ತನ್ನ ಜನಪ್ರಿಯ ಪ್ಲೆಷರ್ ಸ್ಕೂಟರ್ ಆವೃತ್ತಿಯ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ. ವಾಹನ ಮೂಲಗಳಿಂದ ಲಭಿಸಿರುವ ಮಾಹಿತಿಗಳ ಪ್ರಕಾರ ಮಾರ್ಚ್ ತಿಂಗಳಲ್ಲೇ ಹೀರೊದಿಂದ ಅನೇಕ ಹೊಸ ಮಾದರಿಗಳನ್ನು ನಿರೀಕ್ಷಿಸಲಾಗಿತ್ತು. ಇದರಲ್ಲಿ ಕರಿಜ್ಮಾ, ಕರಿಜ್ಮಾ ಝಡ್‌ಎಂಆರ್, ಎಕ್ಸ್‌ಟ್ರೀಮ್ ಮತ್ತು ಪ್ಲೆಷರ್ ಪ್ರಮುಖವಾಗಿತ್ತು.
ಅಂತೂ ಮಾರ್ಚ್ ಮಾಸಂತ್ಯದ ವೇಳೆಯಲ್ಲಿ ಹೀರೊದಿಂದ ಪ್ಲೆಷರ್ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆಯಾಗಿದೆ. ಈ ಹಿಂದೆ 2013 ಅಕ್ಟೋಬರ್ ತಿಂಗಳಲ್ಲೇ ನೂತನ ಪ್ಲೆಷರ್ 102 ಸಿಸಿ ಸ್ಕೂಟರ್ ಅನಾವರಣಗೊಳಿಸಲಾಗಿತ್ತು. 2014 ಹೀರೊ ಪ್ಲೆಷರ್ ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.ಇದರ ಬೇಸ್ ವೆರಿಯಂಟ್ ದರ 53,120 ರು.ಗಳಾಗಿರಲಿದೆ.

ಅದೇ ರೀತಿ ಅಲಾಯ್ ವೀಲ್ ಪಡೆದುಕೊಳ್ಳಲಿರುವ ಹೈಯರ್ ಎಂಡ್ ವರ್ಷನ್ ಎಕ್ಸ್ ಶೋ ರೂಂ ದರ 54,730 ರು.ಗಳಾಗಿವೆ. ಅಲ್ಲದೆ ಹೆಚ್ಚಿನ ಕಲರ್ ವೆರಿಯಂಟ್‌ಗಳಲ್ಲೂ ಲಭ್ಯವಿರಲಿದೆ.

ಅಂದ ಹಾಗೆ ಹೀರೊ ಪ್ಲೆಷರ್ 102 ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಇದು6.74 ಅಶ್ವಶಕ್ತಿ (7.85 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಅಷ್ಟೇ ಅಲ್ಲದೆ ನೂತನ ಇಂಟೆಗ್ರೇಟಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್) ಸಹ ಪ್ಲೆಷರ್ ಸ್ಕೂಟರನ್ನು ವಿಭಿನ್ನವಾಗಿಸಲಿದೆ. ಇದರ ಜತೆಗೆ ಫೋನ್ ಚಾರ್ಜರ್, ಸೈಡ್ ಸ್ಟಾಂಡ್ ಇಂಡಿಕೇಟರ್ ಹಾಗೂ ಸ್ಟೋರೆಜ್ ಏರಿಯಾ ಸೌಲಭ್ಯವಿರಲಿದೆ.

ವೈಶಿಷ್ಟ್ಯ
ಹೊಸ ಲುಕ್,
ಸ್ಟೈಲಿಷ್ ಟೈಲ್ ಲೈಟ್,
ಹೊಸತಾದ ಡಿಜಿಟಲ್ ಕನ್ಸೋಲ್,
ಟ್ಯೂಬ್‌ಲೆಸ್ ಚಕ್ರ ಜತೆಗೆ ಐಬಿಎಸ್,
ಲಗ್ಗೇಜ್ ಬಾಕ್ಸ್‌ನಲ್ಲಿ ಬೂಟ್ ಲೈಟ್,
ಮೊಬೈಲ್ ಚಾರ್ಜಿಂಗ್ ಸಾಕೆಟ್

ಕಲರ್ ಆಯ್ಕೆ
ಬೋಲ್ಡ್ ಬ್ಲ್ಯಾಕ್,
ಬ್ಯೂಟಿಫುಲ್ ಬ್ಲೂ,
ಪ್ಲೇಫುಲ್ ರೆಡ್ ಆಂಡ್ ವೈಟ್,
ಬಹುಕಾಂತೀಯ ಹಸಿರು ಬಣ್ಣ,
ಔಟ್‌ಗೋಯಿಂಗ್ ಒರೆಂಜ್,
ರಾವಿಶಿಂಗ್ ರೆಡ್,
ಸ್ಪೆಕ್ಟಾಕ್ಯೂಲರ್ ಸಿಲ್ವರ್,
ಪೆರ್ಕಿ ಪರ್ಪಲ್,
ವಿಟ್ಟಿ ವೈಟ್


Click it and Unblock the Notifications








