ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, 12ನೇ ಆಟೋ ಎಕ್ಸ್ ಪೋದಲ್ಲಿ ವಿನೂತನ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್‌ವೊಂದನ್ನು ಪ್ರದರ್ಶಿಸಿದೆ. ಇದು ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

2014 ಆಟೋ ಎಕ್ಸ್ ಪೋ

ಹೀರೊದಿಂದ ಪ್ರದರ್ಶನಗೊಂಡಿರುವ ನೂತನ 150ಸಿಸಿ ಸ್ಕೂಟರ್ ಝಡ್‌‌ಐಆರ್ ಎಂದು ಹೆಸರಿಸಿಕೊಂಡಿದೆ. ಇದೇ ಸಂದರ್ಭದಲ್ಲಿ 125 ಸಿಸಿ ಡ್ಯಾಶ್ ಸ್ಕೂಟರ್ ಸಹ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖ ಪ್ರಚಾರ ರಾಯಭಾರಿ ರಣಬೀರ್ ಕಪೂರ್ ನೂತನ ಮಾದರಿಯನ್ನು ಅನಾವರಣಗೊಳಿಸಿದ್ದರು.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಯುರೋಪ್‌ನ ಮ್ಯಾಕ್ಸಿ ಸ್ಕೂಟರ್ ಶೈಲಿಯಲ್ಲಿ ಝಡ್‌ಐಆರ್ 150 ಸಿಸಿ ಸ್ಕೂಟರ್ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಮಾಹಿತಿಗಾಗಿ, ಈ ಹಿಂದೆ ಕೈನಾಟಿಕ್ ಬ್ಲೇಜ್ 165 ಸಿಸಿ ಗಾಡಿ ಅತಿ ಹೆಚ್ಚು ಎಂಜಿನ್ ಸಾಮರ್ಥ್ಯದ ಸ್ಕೂಟರ್ ಎನಿಸಿಕೊಂಡಿತ್ತು.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಸ್ಟೆಪ್ ಮತ್ತು ಫ್ಲ್ಯಾಟ್ ಬೋರ್ಡ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಹೀರೊ ಝಡ್‌ಐಆರ್ ಆಗಮನವಾಗಲಿದೆ. ಇದು 139 ಕೆ.ಜಿ ಭಾರ ಹಾಗೆಯೇ 2,085 ಎಂಎಂ ಉದ್ದ, 745 ಎಂಎಂ ಅಗಲ ಮತ್ತು 1385 ಎಂಎಂ ಎತ್ತರವಿರಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ನೂತನ ಝಡ್‌ಐಆರ್ ಸ್ಕೂಟರ್, ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಟಡ್, 157 ಸಿಸಿ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ 2 ವಾಲ್ವೆ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 14.08 ಅಶ್ವಶಕ್ತಿ (12.7 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಪ್ರಸ್ತುತ ಆಟೋಮ್ಯಾಟಿಕ್ ಸ್ಕೂಟರ್ ಗಂಟೆಗೆ 110 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಇನ್ನುಳಿದಂತೆ ಫೋರ್ಸ್‌ಡ್ ಡೈನಾಮಿಕ್ ಕೂಲಿಂಗ್ ಏರ್ ಸಿಸ್ಟಂ ಮತ್ತು ಇಂಟೆಗ್ರೇಟಡ್ ಹೈಡ್ರಾಲಿಕ್ ಬ್ರೇಕಿಂಗ್ ಸಿಸ್ಟಂ (ಐಎಚ್‌ಬಿಎಸ್) ಪ್ರಮುಖ ಫೀಚರ್ ಆಗಿರಲಿದೆ. ಹಾಗೆಯೇ ಫ್ರಂಟ್ ಆಂಡ್ ರಿಯರ್ ಫ್ಲವರ್ ಟೈಪ್ ಡಿಸ್ಕ್ ಬ್ರೇಕ್ ಕೂಡಾ ಹೊಂದಿರಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಹೀರೊ ಝಡ್‌ಐಆರ್, ಡ್ಯುಯಲ್ ಪ್ರೊಜೆಕ್ಟರ್ ಹೈಡ್‌ಲೈಟ್ ಜತೆ ಡೇಟೈಮ್ ರನ್ನಿಂಗ್ ಲೈಟ್ಸ್, ಇಂಟೆಗ್ರೇಟಡ್ ಪಿಲ್ಲಿಯನ್ ಹ್ಯಾಂಡಲ್, ಡಿಜಿಟಲ್ ಕನ್ಸೋಲ್ ಮತ್ತು ಫೋನ್ ಚಾರ್ಜಿಂಗ್ ಡಾಕ್ ಪಡೆದುಕೊಳ್ಳಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಮಗದೊಂದು ವಿಶೇಷತೆಯೆಂದರೆ ಝಡ್‌ಐಆರ್‌ನ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ತಂತ್ರಗಾರಿಕೆ ಸ್ಮಾರ್ಟ್ ಫೋನ್ ಜತೆ ಕನೆಕ್ಟ್ ಮಾಡಬಹುದಾಗಿದೆ. ಈ ಮೂಲಕ ಎಂಜಿನ್ ಹಾಗೂ ರೈಡಿಂಗ್ ಬಗ್ಗೆ ಮಾಹಿತಿ ಪಡೆಯಲಿದೆ.

ಹೀರೊದಿಂದ ಬರಲಿದೆ ಯುರೋಪ್ ಶೈಲಿಯ 150 ಸಿಸಿ ಸ್ಕೂಟರ್

ಅಂದ ಹಾಗೆ 2016ನೇ ಇಸವಿಯಲ್ಲಿ ಲಾಂಚ್ ಆಗಲಿದೆ. ಅಷ್ಟಕ್ಕೂ ಹೆಚ್ಚು ಎಂಜಿನ್ ಸಾಮರ್ಥ್ಯದ ಸ್ಕೂಟರ್‌ಗಳು ದೇಶದಲ್ಲಿ ಯಶಸ್ವಿಯಾಗುವುದೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚೆಕೊಳ್ಳಿರಿ...

More from DriveSpark

Article Published On: Tuesday, February 11, 2014, 12:54 [IST]
English summary
Showcased along with the Hero Dash 125cc scooter at the Auto Expo 2014, where brand ambassador Ranbir Kapoor took the veils off the new scooters, was the ZIR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+