ಅತಿ ಶೀಘ್ರದಲ್ಲೇ ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್ ಲಾಂಚ್

By Nagaraja

ಇನ್ನೇನು ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್ ಭಾರತದ ರಸ್ತೆ ಪ್ರವೇಶಿಸಲಿದೆ. ಇದರಂತೆ ಜಪಾನ್‌ನ ಈ ವಾಹನ ತಯಾರಕ ಸಂಸ್ಥೆಯು ಬಿಡುಗಡೆ ದಿನಾಂಕ ಹಾಗೂ ಬೆಲೆ ಎಂಬಿತ್ಯಾದಿ ಮಹತ್ವಪೂರ್ಣ ವಿವರಗಳನ್ನು ಹೊರಗೆಡವಿದೆ.

ಇದಕ್ಕೂ ಮೊದಲು 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್, ಪ್ರಸಕ್ತ ತಿಂಗಳಲ್ಲೇ ಲಾಂಚ್ ಆಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ನೂತನ ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್ ಲಭ್ಯವಾಗಲಿದೆ. ಅವುಗಳೆಂದರೆ ಸ್ಟಾಂಡರ್ಡ್ ಹಾಗೂ ಡಿಲಕ್ಸ್ (ಎವಿಯೇಟರ್‌ನಲ್ಲಿರುವುದಕ್ಕೆ ಸಮಾನ)

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಸ್ಟಾಂಡರ್ಡ್ ವೆರಿಯಂಟ್‌ನಲ್ಲಿ ಅಲಾಯ್ ವೀಲ್‌ ಹಾಗೂ ಡ್ರಮ್ ಬ್ರೇಕ್‌ಗಳ ಕೊರತೆ ಕಾಡಲಿದೆ. ಇನ್ನೊಂದೆಡೆ ದಿಲಕ್ಸ್ ವೆರಿಯಂಟ್‌ಗಳಲ್ಲಿ ಫ್ರಂಟ್ ಡಿಸ್ಕ್ ಹಾಗೂ ಅಲಾಯ್ ವೀಲ್ ಸೌಲಭ್ಯವಿರಲಿದೆ.

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಇದರ ಡಿಸ್ಕ್ ಬ್ರೇಕ್ 190 ಎಂಎಂ ಹಾಗೂ ಡ್ರಮ್ ಬ್ರೇಕ್ 130 ಎಂಎಂ ಆಗಿರಲಿದೆ. ಅಲ್ಲದೆ ಹೋಂಡಾದ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಸಹ ಸ್ಟಾಂಡರ್ಡ್ ಆಗಿ ದೊರಕಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಬ್ಲ್ಯಾಕ್, ಮೆಟ್ಯಾಲಿಕ್ ಬ್ಲ್ಯೂ, ಪೀಯರ್ಲ್ ವೈಟ್ ಮತ್ತು ಮೆಟ್ಯಾಲಿಕ್ ಸಿಲ್ವರ್

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಹಾಗೆಯೇ ಟೆಲಿಸ್ಕಾಪಿಕ್ ಫೋರ್ಕ್ ಫ್ರಂಟ್ ಸಸ್ಪೆಷನ್ ಸ್ಟಾಂಡರ್ಡ್ ಆಗಿರಲಿದೆ. ಅಂದರೆ ಫ್ರಂಟ್ ಹಾಗೂ ರಿಯರ್ ವೀಲ್‌ಗಳು ಎವಿಯೇಟರ್‌ನಲ್ಲಿರುವುದಕ್ಕೆ ಸಮಾನವಾಗಿ ಅನುಕ್ರಮವಾಗಿ 12 ಹಾಗೂ 10 ಇಂಚುಗಳಲ್ಲಿ ಆಗಮನವಾಗಲಿದೆ.

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಹೋಂಡಾದ ನೂತನ ಆಕ್ಟಿವಾ ಸ್ಕೂಟರ್ 124.9 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8.6 ಬಿಎಚ್‌ಪಿ (10.12 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ವಿ-ಮ್ಯಾಟಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ)

ದರ ಮಾಹಿತಿ (ಎಕ್ಸ್ ಶೋ ರೂಂ)

ಆಕ್ಟಿವಾ 125 ಸ್ಟಾಂಡರ್ಡ್ - ರು. 56,000 (ಆವಿಯೇಟರ್ ರು. 50,915, ಆಕ್ಟಿವಾ 110 ಸಿಸಿ ರು. 49881)

ಆಕ್ಟಿವಾ 125 ಡಿಲಕ್ಸ್ - ರು. 61,000 (ಆವಿಯೇಟರ್ ರು. 56,286)

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಬಲ್ಲ ಮೂಲಗಳ ಪ್ರಕಾರ, ನೂತನ ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್ ಬುಕ್ಕಿಂಗ್ ಈಗಾಗಲೇ ಡೀಲರ್‌ಶಿಪ್‌ಗಳಲ್ಲಿ ಆರಂಭಗೊಂಡಿದೆ. ಇದಕ್ಕಾಗಿ ಗ್ರಾಹಕರು ಮುಂಗಡವಾಗಿ ರು. 5000 ಪಾವತಿಸಬೇಕಾಗಿದೆ.

ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರ್

ಇದೀಗ ಪವರ್‌ಫುಲ್ ಫ್ಯಾಮಿಲಿ ಸ್ಕೂಟರ್ ಎಂದೆನಿಸಿಕೊಂಡಿರುವ ಸುಜುಕಿ ಆಕ್ಸೆಸ್ 125 ಆವೃತ್ತಿಗೆ ಹೋಂಡಾದ ನೂತನ ಆಕ್ಟಿವಾ ಸೆಡ್ಡು ನೀಡಲಿದೆ.

ಇಂದಿನ ಫೇಸ್‌ಬುಕ್ ವೀಡಿಯೋ ನೋಡಲು ಮರೆಯದಿರಿ

Post by DriveSpark.

More from DriveSpark

Article Published On: Saturday, April 5, 2014, 9:47 [IST]
English summary
There is exciting news for all those who have been waiting for the Honda Activa 125 to launch ever since its reveal at the Auto Expo 2014 in February. Honda Two Wheeler has now officially commenced bookings for the new 125cc scooter for the amount of Rs 5,000.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+