ಪಲ್ಸರ್, ಅಪಾಚೆ ಪ್ರತಿಸ್ಪರ್ಧಿ ಬೈಕ್ ರಸ್ತೆಗಿಳಿಸಿದ ಹೋಂಡಾ
ಯೂನಿಕಾರ್ನ್ ಯಶಸ್ಸನ್ನು ಎತ್ತಿ ಹಿಡಿಯಲು ಹೊರಟಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ (HMSI), ನೂತನ ಸಿಬಿ ಟ್ರಿಗರ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪ್ರಮುಖವಾಗಿಯೂ ಬಜಾಜ್ ಪಲ್ಸರ್ ಹಾಗೂ ಟಿವಿಎಸ್ ಅಪಾಚೆ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದೆ.
ನೂತನ ಹೋಂಡಾ ಸಿಬಿ ಟ್ರಿಗರ್ 150ಸಿಸಿ ಬೈಕ್ ದೆಹಲಿ ಎಕ್ಸ್ ಶೋ ರೂಂ ದರ 67,384 ರು.ಗಳಾಗಿವೆ. ಎರಡು ತಿಂಗಳ ಹಿಂದೆಯಷ್ಟೇ ಈ ನೂತನ ಬೈಕನ್ನು ಅನಾವರಣಗೊಳಿಸಲಾಗಿತ್ತು. ಯೂನಿಕಾರ್ನ್‌ನಲ್ಲಿ ಬಳಕೆಯಾದ ಸಮಾನ ಎಂಜಿನ್ ವೈಶಿಷ್ಟ್ಯಗಳನ್ನು ಸಿಬಿ ಟ್ರಿಗರ್‌ನಲ್ಲೂ ಆಳವಡಿಸಲಾಗಿದೆ. ಇದರ 150ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ 14.14 ಪಿಎಸ್ (8,500 ಆರ್‌ಪಿಎಂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಕಂಪನಿಯ ಪ್ರಕಾರ ಇದರ ಪರಿಷ್ಕೃತ ಎಂಜಿನ್ ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್‌ನಲ್ಲಿ ಕಂಬೈನ್ಡ್ ಬ್ರೇಕ್ ಸಿಸ್ಟಂ (ಸಿಬಿಎಸ್) ಆಪ್ಷನ್ ಲಭ್ಯವಿರುತ್ತದೆ. ಇದು ಬೈಕ್‌ಗೆ ಹೆಚ್ಚು ಸ್ಥಿರತೆಯನ್ನು ದಯಪಾಲಿಸಲಿದೆ.
ಉಳಿದಂತೆ ಮೊನೊ ಶಾಕ್, ಎಲ್‌ಇಡಿ ಟೈಲ್ ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟ್ಯೂಬ್‌ಲೆಸ್ ಟೈರ್, ಉಚಿತ ನಿರ್ವಹಣಾ ಬ್ಯಾಟರಿ ಹಾಗೂ ಏರ್ ಫಿಲ್ಟರ್‌ಗಳಂತಹ ಸ್ಟಾಂಡರ್ಡ್ ವೈಶಿಷ್ಟ್ಗಗಳನ್ನು ಒಳಗೊಂಡಿದೆ.

ಹೋಂಡಾ ಸಿಬಿ ಟ್ರಿಗರ್
ಫೋರ್ ಸ್ಟ್ರೋಕ್,
149.1 ಸಿಸಿ,
ಸಿಂಗಲ್ ಸಿಲಿಂಡರ್,
ಏರ್ ಕೂಲ್ಡ್ ಎಂಜಿನ್
5 ಸ್ಪೀಡ್ ಗೇರ್ ಬಾಕ್ಸ್

ಹೋಂಡಾ ಸಿಬಿ ಟ್ರಿಗರ್
ನೂತನ ಬೈಕ್, ಬಜಾಜ್ ಪಲ್ಸರ್ 150 ಡಿಟಿಎಸ್-ಐ, ಯಮಹಾ ಎಫ್‌ಝಡ್-ಎಸ್ ಹಾಗೂ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಹೋಂಡಾ ಸಿಬಿ ಟ್ರಿಗರ್
Meteor Green Metallic

ಹೋಂಡಾ ಸಿಬಿ ಟ್ರಿಗರ್
Black

ಹೋಂಡಾ ಸಿಬಿ ಟ್ರಿಗರ್
Siena Red

ಹೋಂಡಾ ಸಿಬಿ ಟ್ರಿಗರ್



Click it and Unblock the Notifications