ದೇಶದಲ್ಲಿ ಹೋಂಡಾ ಸಿಬಿ150ಆರ್ ಸ್ಟ್ರೀಟ್‌ಫೈರ್ ಲಾಂಚ್
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ಸ್ ದೇಶದ ಮಾರುಕಟ್ಟೆಗೆ ನೂತನ 150ಸಿಸಿ ಬೈಕ್ ಪರಿಚಯಿಸುವ ಕುರಿತು ನಾವು ಈಗಾಗಲೇ ಮಾಹಿತಿಯನ್ನು ಕೊಟ್ಟಿರುತ್ತೇವೆ.
ಇದನ್ನು ಆದಷ್ಟು ಬೇಗ ನನಸಾಗಿಸುತ್ತಿರುವ ದೇಶದ ಪ್ರಖ್ಯಾತ ಕಂಪನಿಯು 2013 ಫೆಬ್ರವರಿ ಆರಂಭದಲ್ಲೇ ನೂತನ ಸಿಬಿ 150ಆರ್ ಬೈಕ್ ಪರಚಯಿಸುತ್ತಿದೆ. 2012ನೇ ಜಕಾರ್ತ ಮೋಟಾರ್ ಶೋದಲ್ಲೇ ಹೊಂಡ ತನ್ನ ಬಹುನಿರೀಕ್ಷಿತ ಬೈಕನ್ನು ಪರಿಚಯಿಸಿತ್ತು. ಇದೀಗ ಪ್ರಯಾಣಿಕ ಸೆಗ್ಮೆಂಟ್‌ಗೆ ಸೇರಿದ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ.
ನೂತನ ಹೋಂಡಾ ಸಿಬಿ150ಆರ್ 150 ಸಿಸಿ, ಸಿಂಗಲ್ ಸಿಲಿಂಡರ್-4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದನ್ನು ನಾವು ಈ ಹಿಂದಿನ ಸಿಬಿಆರ್ 150ಆರ್ ಆವೃತ್ತಿಯಲ್ಲಿ ನೋಡಿದ್ದೇವೆ. ಆದರೆ ಹೊಸ ಮಾಡೆಲ್ ಟರ್ಕ್ಯೂನಲ್ಲಿ ವ್ಯತ್ಯಾಸ ಕಂಡುಬರಲಿದ್ದು, 150ಸಿಸಿ ಎಂಜಿನ್ 18 ಬಿಎಚ್‌ಪಿಯಲ್ಲಿ 13.1 ಎನ್‌ಎಂ ಪೀಕ್ ಟರ್ಕ್ಯೂ ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.
ಕೆಲವೊಂದು ನೂತನ ಫೀಚರ್‌ಗಳನ್ನು ಹೋಂಡಾ ಸಿಬಿ150 ಆರ್‌ನಲ್ಲಿ ಆಳವಡಿಸಲಾಗಿದ್ದು, ಪರಿಷ್ಕೃತ ಸೀಟ್ ಆರಾಮದಾಯಕ ಸಂಚಾರಕ್ಕೆ ನೆರವಾಗಲಿದೆ. ಈ ವರೆಗೆ ದರ ದುಬಾರಿಯಾಗಿರುವುದು ದೇಶದಲ್ಲಿ ಹೋಂಡಾ ಸಿಬಿಆರ್ ಹಿನ್ನಡೆಗೆ ಕಾರಣವಾಗಿತ್ತು. ಆದರೆ ಹೊಸ ಸಿಬಿ ಸಿಬಿ150 ಆರ್ ಕೂಡಾ 1 ಲಕ್ಷಕ್ಕೂ ಮೇಲ್ಪಟ್ಟಿರುವುದರಿಂದ ನೂತನ ವೈಶಿಷ್ಟ್ಯಗಳು ಗ್ರಾಹಕರನ್ನು ಯಾವ ರೀತಿ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೋಂಡಾ ಸಿಬಿ 150ಆರ್ ಸ್ಟ್ರೀಟ್‌ಫೈರ್
ಹೋಂಡಾ ಸಿಬಿ 150ಆರ್ ಸ್ಟ್ರೀಟ್‌ಫೈರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಹೋಂಡಾ ಸಿಬಿ 150ಆರ್ ಸ್ಟ್ರೀಟ್‌ಫೈರ್
ಸ್ಟೈಲಿಷ್ ಲುಕ್

ಹೋಂಡಾ ಸಿಬಿ 150ಆರ್ ಸ್ಟ್ರೀಟ್‌ಫೈರ್
ಸ್ಟೈಲಿಷ್ ಲುಕ್

ಹೋಂಡಾ ಸಿಬಿ 150ಆರ್ ಸ್ಟ್ರೀಟ್‌ಫೈರ್
ಸ್ಟೈಲಿಷ್ ಲುಕ್


Click it and Unblock the Notifications








