ಚಮತ್ಕಾರ ಮಾಡಿತೇ ನೂತನ ಹೋಂಡಾ ಸಿಬಿಆರ್

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಸಾಗಿದ ಚೀನಾ ಅಂತರಾಷ್ಟ್ರೀಯ ಮೋಟಾರ್ ಸೈಕಲ್ ವಾಣಿಜ್ಯ ಪ್ರದರ್ಶನದಲ್ಲಿ (ಸಿಐಎಂಎಮೋಟಾರ್) ನೂತನ ಹೋಂಡಾ ಸಿಬಿಆರ್300ಆರ್ ಬೈಕ್ ಅನಾವರಣಗೊಂಡಿತ್ತು. ಹೊಸ ಎಂಜಿನ್ ಮಾನದಂಡಗಳನ್ನು ಹೊಂದಿರುವುದೇ ನೂತನ ಹೋಂಡಾ ಬೈಕ್‌ನ ವಿಶೇಷತೆಯಾಗಿದೆ.

ಪ್ರಮುಖವಾಗಿಯೂ ಕವಾಸಕಿ ನಿಂಜಾ 300 ಪ್ರತಿಸ್ಪರ್ಧಿಯಾಗಿ ಹೋಂಡಾ ನೂತನ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ನಡುವೆ ಸಿಬಿಆರ್300ಆರ್ ಎಂಜಿನ್ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಕವಾಸಕಿ ಹಾಗೂ ತನ್ನ ಹಿಂದಿನ ಆವೃತ್ತಿಗಿಂತ ಹೇಗೆ ಭಿನ್ನವಾಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ನೂತನ ಹೋಂಡಾ ಸಿಬಿಆರ್300ಆರ್

ನೂತನ ಹೋಂಡಾ ಸಿಬಿಆರ್300ಆರ್ 286ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 76ಎಂಎಂ ಬೋರ್ ಹಾಗೂ 63ಎಂಎಂ ಸ್ಟ್ರೋಕ್ ಹೊಂದಿರಲಿದೆ.

ನೂತನ ಹೋಂಡಾ ಸಿಬಿಆರ್300ಆರ್

ಇದು ಸದ್ಯ ಮಾರುಕಟ್ಟೆಯಲ್ಲಿರುವ ಸಿಬಿಆರ್250ಆರ್ 249.6 ಸಿಸಿ ಎಂಜಿನ್‌ಗಿಂತಲೂ ಹೆಚ್ಚು ಶಶ್ತಿಶಾಲಿ ಎಂಜಿನ್ ಪಡೆದುಕೊಳ್ಳಲಿದೆ.

ನೂತನ ಹೋಂಡಾ ಸಿಬಿಆರ್300ಆರ್

ಹೋಂಡಾದ ನೂತನ ಸಿಬಿಆರ್300ಆರ್ ಎಂಜಿನ್ 30.4 ಅಶ್ವಶಕ್ತಿ (8500ಆರ್‌ಪಿಎಂ) ಹಾಗೂ 27ಎನ್ ಟಾರ್ಕ್ (7250 ಆರ್‌ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನೂತನ ಹೋಂಡಾ ಸಿಬಿಆರ್300ಆರ್

ಪ್ರಸ್ತುತ ಈ ವಿಭಾಗದಲ್ಲಿ ನಿಂಜಾ 300 ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಇದರ 296ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಎಂಜಿನ್ 39 ಅಶ್ವಶಕ್ತಿ (27ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಈ ಸವಾಲನ್ನು ಹೋಂಡಾ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲವೆನಿಸಿದೆ.

ನೂತನ ಹೋಂಡಾ ಸಿಬಿಆರ್300ಆರ್

ಭಾರ ನಿರ್ಣಾಯಕ ಅಂಶವೆನಿಸಲಿದೆ. ಎಬಿಎಸ್ ತಂತ್ರಜ್ಞಾನದೊಂದಿಗೆ ಆಗಮನವಾಗಲಿರುವ ಹೋಂಡಾ ಸಿಬಿಆರ್300ಆರ್ 164 ಕೆ.ಜಿ ತೂಕ ಹೊಂದಿರಲಿದೆ. ಇನ್ನೊಂದೆಡೆ ನಿಂಜಾ 172 ಕೆ.ಜಿ ಭಾರವಿದೆ. ಇದು ಸಹ ಬೈಕ್ ಖರೀದಿಗಾರರಲ್ಲಿ ಪೈಪೋಟಿ ಸೃಷ್ಟಿ ಮಾಡಲು ಕಾರಣವಾಗಲಿದೆ.

More from DriveSpark

Article Published On: Saturday, October 19, 2013, 16:24 [IST]
English summary
The upcoming Honda CBR300R will be powered by a 286cc, single cylinder engine, with a 76mm bore and 63mm stroke.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+