ಹೋಂಡಾ ಡ್ರೀಮ್ ಯುಗಾ ಸೀಮಿತ ಆವೃತಿ ಲಾಂಚ್
ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹೋಂಡಾ ಟು ವೀಲರ್ಸ್, ದೇಶದ ಮಾರುಕಟ್ಟೆಗೆ ನೂತನ ಹೋಂಡಾ ಡ್ರೀಮ್ ಯುಗಾ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ನಿಮ್ಮ ಮಾಹಿತಿಗಾಗಿ, ಡ್ರೀಮ್ ಯುಗಾ ಹೋಂಡಾ ಬ್ರಾಂಡ್‌ನಿಂದ ದೇಶದಲ್ಲಿ ಬಿಡುಗಡೆಯಾಗಿರುವ ಅತಿ ಅಗ್ಗದ ಬೈಕಾಗಿದೆ. ದೇಶದಲ್ಲಿ ಈಗಾಗಲೇ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಜಪಾನ್ ಮೂಲದ ಈ ವಾಹನ ತಯಾರಕ ಕಂಪನಿಯು ಡ್ರೀಮ್ ಯುಗಾ ಮುಖಾಂತರ ಇನ್ನಷ್ಟು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಇಷ್ಟಕ್ಕೂ ನೂತನ 110 ಸಿಸಿ ಲಿಮಿಟೆಡ್ ಎಡಿಷನ್ ಡ್ರೀಮ್ ಯುಗಾದಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ವೈಶಿಷ್ಟ್ಯಗಳೇನು?
- ಡ್ಯುಯಲ್ ಟೋನ್ ಕಲರ್,
- 3ಡಿ ಹೋಂಡ್ ಬ್ಯಾಡ್ಜ್ ,
- ತಾಜಾ ಡಿಕಾಲ್ಸ್,
- ದೇಹ ಬಣ್ಣ ಹೊಂದಿರುವ ರಿಯರ್ ವ್ಯೂ ಮಿರರ್,
- ಮಫ್ಲರ್ ಪ್ರೊಟೆಕ್ಟರ್‌ನಲ್ಲಿ ಕ್ರೋಮ್ ಫಿನಿಶ್

ದರ ಮಾಹಿತಿ
ನೂತನ ಲಿಮಿಟೆಡ್ ಎಡಿಷನ್ ಹೋಂಡಾ ಡ್ರೀಮ್ ಯುಗಾ ದೆಹಲಿ ಎಕ್ಸ್ ಶೋ ರೂಂ ದರ 45,101 ರು.ಗಳಾಗಿವೆ.

ಹಬ್ಬದ ಆವೃತ್ತಿ
ಹಬ್ಬದ ಆವೃತ್ತಿ ಆಗಮನವಾಗುತ್ತಿರುವಂತೆಯೇ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೂತನ ಹೋಂಡಾ ಡ್ರೀಮ್ ಯುಗಾ ಸೀಮಿತ ಆವೃತ್ತಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೋಂಡಾ ತಿಳಿಸಿದೆ.

ಡ್ರೀಮ್ ಯುಗಾ ಯಶಸ್ಸು
2012 ಮೇ ತಿಂಗಳಲ್ಲಿ ಲಾಂಚ್ ಆಗಿದ್ದ ಹೋಂಡಾ ಡ್ರೀಮ್ ಯುಗಾ ಬಿಡುಗಡೆಯಾದ ಒಂದು ವರ್ಷದೊಳಗೆ ಮೂರು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಇದು ಮಾರುಕಟ್ಟೆಯಲ್ಲಿ ಡ್ರೀಮ್ ಯುಗಾ ಯಶಸ್ಸನ್ನು ಸಾರುತ್ತಿದೆ.

ಎಂಜಿನ್
110 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಹೋಂಡಾ ಡ್ರೀಮ್ ಯುಗಾ, 8.5 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್
ಅಲ್ಲದೆ ಇತ್ತೀಚೆಗಷ್ಟೇ ಹೋಂಡಾ ಎಂಜಿನ್ ಪರಿಷ್ಕೃತಗೊಳಿಸಲಾಗಿತ್ತು. ನೂತನ ಹೋಂಡಾ ಇಕೊ ತಂತ್ರಜ್ಞಾನ (ಎಚ್‌ಇಟಿ) ನೆರವಿನೊಂದಿಗೆ ಪ್ರತಿ ಲೀಟರ್‌ಗೆ ಗರಿಷ್ಠ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.


Click it and Unblock the Notifications