ಎಚ್‌ಇಟಿ ಡ್ರೀಮ್ ಯುಗಾ ಲಾಂಚ್; ಮೈಲೇಜ್ ಸೂಪರ್
ಇನ್ನು ಮೈಲೇಜ್ ಬಗ್ಗೆ ಚಿಂತೆ ಬೇಡ. ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ, ನೂತನ ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ತಂತ್ರಜ್ಞಾನದೊಂದಿಗೆ ಡ್ರೀಮ್ ಯುಗಾ ಲಾಂಚ್ ಮಾಡಿದೆ. ಇದು ಗರಿಷ್ಠ ಮೈಲೇಜ್ ನೀಡುವಲ್ಲಿ ನೆರವಾಗಲಿದೆ.
ಈ ಮೂಲಕ ಆಕ್ಟಿವಾ-ಐ ಬಿಡುಗಡೆಯಾದ ಕೆಲವೇ ಕೆಲವು ದಿನಗಳೊಳಗೆ ಹೋಂಡಾದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ನೂತನ ಎಚ್‌ಇಟಿ ತಂತ್ರಜ್ಞಾನ ಹೊಂದಿರುವ ಡ್ರೀಮ್ ಯುಗಾ ದೆಹಲಿ ಎಕ್ಸ್ ಶೋ ರೂಂ ದರ 45,101 ರು.ಗಳಾಗಿವೆ.
ಏನಿದು ಎಚ್‌ಇಟಿ ತಂತ್ರಜ್ಞಾನ?
ಎಚ್‌ಇಟಿ ತಂತ್ರಜ್ಞಾನ ಪ್ರಕಾರ ಡ್ರೀಮ್ ಯುಗಾದಲ್ಲಿ ಹಗುರ ಭಾರದ ಪರಿಕರಗಳನ್ನು ಬಳಕೆ ಮಾಡಿರುವುದರಿಂದ ಎಂಜಿನ್ ಘರ್ಷಣೆಯನ್ನು ಕಡಿಮೆ ಮಾಡಲು ನೆರವಾಗಲಿದ್ದು, ಇದರಿಂದ ಒಟ್ಟಾರೆ ಇಂಧನ ದಕ್ಷತೆಯು ಶೇಕಡಾ 11ರಷ್ಟು ವೃದ್ಧಿಸಲಿದೆ. ಅಷ್ಟೇ ಅಲ್ಲದೆ ಹಿಂದಿನ ಆವೃತ್ತಿಗೆ ಹೋಲಿಸಿದರೆ ಎಂಜಿನ್ ಭಾರವು ಶೇಕಡಾ 8ರಷ್ಟು ಕಡಿಮೆಯಾಗುತ್ತಿದೆ. ಇದರ ಒಟ್ಟು ಭಾರ 108 ಕೆ.ಜಿ ಮಾತ್ರವಾಗಿರಲಿದೆ.
ಅಷ್ಟಕ್ಕೂ ಹೋಂಡಾ ಡ್ರೀಮ್ ಯುಗಾ ಎಷ್ಟು ಮೈಲೇಜ್ ನೀಡಲಿದೆ ಎಂಬುದನ್ನು ಎಂದು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ನೂತನ ಹೋಂಡಾ ಡ್ರೀಮ್ ಯುಗಾ 110ಸಿಸಿ ಎಂಜಿನ್‌ನಿಂದನ ನಿಯಂತ್ರಿಸಲ್ಪಡುತ್ತಿದ್ದು 8.5 ಬಿಎಚ್‌ಪಿ ಪೀಕ್ ಪವರ್ (8.91 ಎನ್‌ಎಂ ಟರ್ಕ್ಯೂ) ಉತ್ಪಾದಿಸುತ್ತದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಮೈಲೇಜ್ ಎಷ್ಟು?
ಕಂಪನಿಯ ಪ್ರಕಾರ ನೂತನ ಎಚ್‌ಇಟಿ ತಂತ್ರಗಾರಿಕೆ ಹೊಂದಿರುವ ಹೋಂಡಾ ಡ್ರೀಮ್ ಯುಗಾ, ಪ್ರತಿ ಲೀಟರ್‌ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು ಎಚ್‌ಇಟಿ ರಹಿತ ಮಾದರಿಗಳಿಗೆ ಹೋಲಿಸಿದರೆ 2 ಕೀ.ಮೀ.ಗಳಷ್ಟು ಹೆಚ್ಚು ಮೈಲೇಜ್ ನೀಡಲಿದೆ.

ಒಟ್ಟು ಮೂರು ವೆರಿಯಂಟ್ಸ್
ಕಿಕ್ ಸ್ಟಾರ್ಟ್ - ಡ್ರಮ್ ಬ್ರೇಕ್ - ಸ್ಪೋಕ್ಡ್ ವೀಲ್ಸ್
ಕಿಕ್ ಸ್ಟಾರ್ಟ್ - ಡ್ರಮ್ ಬ್ರೇಕ್ - ಅಲಾಯ್ ವೀಲ್ಸ್
ಸೆಲ್ಫ್ ಸ್ಟಾರ್ಟ್ - ಡ್ರಮ್ ಬ್ರೇಕ್ - ಅಲಾಯ್ ವೀಲ್ಸ್

ಒಟ್ಟು ಐದು ಕಲರ್ ವೆರಿಯಂಟ್‌ಗಳಲ್ಲಿ ನೂತನ ಡ್ರೀಮ್ ಯುಗಾ ಆಗಮನವಾಗುತ್ತಿದೆ. ಅವುಗಳೆಂದರೆ
black,
monsoon grey metallic,
alpha red metallic,
force silver metallic ಹಾಗೂ
maple brown metallic

ಇನ್ನು 2013 ಹೋಂಡಾ ಡ್ರೀಮ್ ಯುಗಾ, ಟ್ಯೂಬ್‌ಲೆಸ್ ಟೈರ್‌ನೊಂದಿಗೆ ಆಗಮನವಾಗುತ್ತಿದೆ. ನಿಮ್ಮ ಮಾಹಿತಿಗಾಗಿ, ಡ್ರೀಮ್ ಯುಗಾ ಲಾಂಚ್ ಆದ ವರ್ಷದೊಳಗೆ ಒಂದು ಲಕ್ಷ ಯುನಿಟ್ ಸೇಲ್ ಮಾಡುವಲ್ಲಿ ಹೋಂಡಾ ಯಶಸ್ವಿಯಾಗಿದೆ.

ಹೋಂಡಾ ಕೊನೆಯದಾಗಿ ಇದೇ ವಿಭಾಗದಲ್ಲಿ ಡ್ರೀಮ್ ನಿಯೋ ಬೈಕ್ ಲಾಂಚ್ ಮಾಡಿತ್ತು. ಇದು ಪ್ರಮುಖವಾಗಿಯೂ ಹೀರೊದ ಸ್ಲ್ಪೆಂಡರ್ ಪ್ಲಸ್ ಟಾರ್ಗೆಟ್ ಮಾಡಿಕೊಂಡಿತ್ತು.

ಪ್ರಸ್ತುತ 2016ರ ವೇಳೆಗೆ ದೇಶದ ನಂ.1 ಪ್ರಯಾಣಿಕ ವಾಹನ ಪಟ್ಟ ಪಡೆಯುವುದು ಹೋಂಡಾ ಗುರಿಯಾಗಿದೆ.

ಏತನ್ಮಧ್ಯೆ ಮುಂಬರುವ ತಿಂಗಳಲ್ಲಿ ಎಚ್‌ಇಟಿ ತಂತ್ರಜ್ಞಾನ ಹೊಂದಿರುವ ಹೋಂಡಾ ಶೈನ್, ಸ್ಟನ್ನರ್, ಯೂನಿಕಾರ್ನ್ ಹಾಗೂ ಟ್ರಿಗರ್ ಬೈಕ್‌ಗಳನ್ನು ಲಾಂಚ್ ಮಾಡಲು ಕಂಪನಿ ಯೋಜನೆ ಹೊಂದಿದೆ. ಈ ಮೂಲಕ ಪ್ರತಿ ಮೂರು ತಿಂಗಳ ಅಂತರಾಳದಲ್ಲಿ ಪರಿಷ್ಕೃತ ಮಾಡೆಲ್ ಬಿಡುಗಡೆ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯನ್ನು ಕೊಳ್ಳೆ ಹೊಡೆಯುವ ಗುರಿ ಹೊಂದಿದೆ.


Click it and Unblock the Notifications