ಹೋಂಡಾ 150ಸಿಸಿ ಸ್ಕೂಟರ್; ನಿಮ್ಮ ನಿರೀಕ್ಷೆ ಏನು?

By Nagaraja

ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯು ಭಾರತಕ್ಕೆ ಬೈಕ್ ಮಾತ್ರವಲ್ಲದೆ ಆಕ್ಟಿವಾದಂತಹ ಐಕಾನಿಕ್ ಸ್ಕೂಟರ್ ಮಾದರಿಗಳನ್ನು ಪ್ರದರ್ಶಿಸಿದೆ.

ಆಕ್ಟಿವಾ 110ಸಿಸಿ ಯಶಸ್ಸಿನ ಬಳಿಕ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಂಸ್ಥೆಯು 125 ಸಿಸಿ ಆವೃತ್ತಿಯನ್ನು ಪರಿಚಯಿಸಿತ್ತು. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಸಂಸ್ಥೆಯು 150ಸಿಸಿ ಸ್ಕೂಟರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅಷ್ಟಕ್ಕೂ ಈಗಾಗಲೇ ಟೆಸ್ಟಿಂಗ್ ಹಂತದಲ್ಲಿರುವ ಹೊಸ ಹೋಂಡಾ 150ಸಿಸ್ಸಿ ಸ್ಕೂಟರ್ ಮೇಲೆ ನಿಮಗಿರುವ ನಿರೀಕ್ಷೆ ಏನು? ಇದರ ಬೆಲೆ ಎಷ್ಟು? ಎಂಬಿತ್ಯಾದಿ ವಿಚಾರಗಳ ಬಗೆಗಿನ ನಮ್ಮ ಚರ್ಚೆ ಫೋಟೊ ಸ್ಲೈಡ್‌ನಲ್ಲಿ ಮುಂದುವರಿಯಲಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಈ ಹಿಂದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಹೋಂಡಾದ ಹೊಸ 15ಸಿಸಿ ಸ್ಕೂಟರ್ ಪಿಸಿಎಕ್ಸ್ ಎಂದೆನಿಸಿಕೊಳ್ಳಲಿದೆ. ಹೋಂಡಾ ಆರ್ ಆಂಡ್ ಡಿ ಘಟಕದಲ್ಲಿ ಪರೀಕ್ಷೆಗಾಗಿ ವಿದೇಶದಿಂದ ತಲುಪಿರುವ ಈ ಬಹುನಿರೀಕ್ಷಿತ ಮಾದರಿಯನ್ನು ಪ್ರಸಕ್ತ ಸಾಲಿನಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿರುವ ಇತರ ಸಾಮಾನ್ಯ ಸ್ಕೂಟರ್‌ಗಳಿಗೆ ಹೋಲಿಸಿದರೆ ಹೋಂಡಾದ ಹೊಸ 150ಸಿಸಿ ಸ್ಕೂಟರ್ ಎಂಜಿನ್ ವಿಚಾರದಲ್ಲಿ ಮಾತ್ರವಲ್ಲದೆ ಆಕಾರದಲ್ಲೂ ದೊಡ್ಡದಾಗಿರಲಿದೆ. ಅಲ್ಲದೆ 130 ಕೆ.ಜಿ ತೂಕವನ್ನು ಹೊಂದಿರಲಿದೆ. ಸಾಮಾನ್ಯ ಸ್ಕೂಟರ್‌ಗಳು 100ರಿಂದ 130ರಷ್ಟು ಕೆ.ಜಿ ಭಾರವನ್ನು ಹೊಂದಿರುತ್ತದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಈ ಮೊದಲೇ ತಿಳಿಸಿರುವಂತೆಯೇ ಹೋಂಡಾ ಹೊಸ ಸ್ಕೂಟರ್ 153ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಎಸ್‌ಒಎಚ್‌ಸಿ ಲಿಕ್ವಿಡ್ ಕೂಲ್ಡ್ ಪಿಜಿಎಂ-ಎಫ್‌ಐ ಪೆಟ್ರೋಲ್ ಮೋಟಾರ್‌ನಿಂದ ನಿಯಂತ್ರಿಸ್ಪಡಲಿದೆ. ಇದು 14 ಎನ್‌ಎಂ ತಿರುಗುಬಲಕ್ಕೆ (5,000 ಆವರ್ತನ) ಗರಿಷ್ಠ 13.4 ಅಶ್ವಶಕ್ತಿ (8500 ಆವರ್ತನಕ್ಕೆ) ಉತ್ಪಾದಿಸಲಿದೆ. ಅಂತೆಯೇ ವಿ ಮ್ಯಾಟಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಹೊಂದಿರಲಿದೆ. ಪ್ರಸ್ತುತ ಸ್ಕೂಟರ್ ಎಂಟು ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಸಹ ಹೊಂದಿರಲಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಇನ್ನು ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದ್ದಲ್ಲಿ ಹೋಂಡಾ ಪಿಎಲ್‌ಎಕ್ಸ್ 150 ಸ್ಕೂಟರ್ ವಿಶಾಲವಾದ ಹೆಡ್ ಲ್ಯಾಂಪ್ ಪಡೆದುಕೊಳ್ಳಲಿದ್ದು, ಇದರ ಮೇಲ್ಗಡೆಯಾಗಿ ವಿಂಡ್ ಡಿಫ್ಲೆಕ್ಟರ್ ಇರಲಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಹೋಂಡಾ 150 ಸಿಸಿ ಸ್ಕೂಟರ್ ಸಂಪ್ರದಾಯಿಕ ಹ್ಯಾಂಡಲ್ ಬಾರ್ ಹಾಗೂ ವಿಶಾಲವಾದ ಆಸನ ವ್ಯವಸ್ಥೆಯನ್ನು ಹೊಂದಿದೆ. ಉಳಿದಂತೆ ಅಲಾಯ್ ವೀಲ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಡಿಜಿಟಲ್ ಡಿಸ್‌ಪ್ಲೇ, ರೈಡರ್ ಫೂಟ್ ರೆಸ್ಟ್, ಪಿಲ್ಲಿಯನ್ ಗ್ರಾಬ್ ರೈಲ್ ಮುಂತಾದ ಸೌಲಭ್ಯಗಳನ್ನು ಹೊಂದಿರಲಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆಷನ್ ಪಡೆದುಕೊಂಡಿರಲಿದೆ.

ಹೋಂಡಾ ಪಿಸಿಎಕ್ಸ್ 150ಸಿಸಿ ಸ್ಕೂಟರ್

ಅಂದ ಹಾಗೆ ಮುಂಬರುವ ಹೀರೊ ಮೊಟೊಕಾರ್ಪ್ ಝಿರ್ 150 ಸಿಸಿ ಮಾದರಿಗೆ ಸ್ಪರ್ಧಿಯಾಗಲಿರುವ ಹೋಂಡಾ ಪಿಸಿಎಕ್ಸ್ 150 ಸ್ಕೂಟರ್, ಎಕ್ಸ್ ಶೋ ರೂಂ ಬೆಲೆ 70,000 ರು.ಗಳಿಂದ 75,000 ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Tuesday, January 20, 2015, 20:14 [IST]
English summary
Honda to launch PCX 150cc Scooter in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+