ಹೋಂಡಾ ಕ್ರೀಡಾ ಬೈಕ್ ಬರಮಾಡಿಕೊಳ್ಳಲು ಸಜ್ಜಾಗಿರಿ
ಕಳೆದ ವರ್ಷ ನಾವು ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ 2014ನೇ ವರ್ಷಾರಂಭದಲ್ಲಿ ನೂತನ ಸಿಬಿಆರ್500ಆರ್ ಲಾಂಚ್ ಮಾಡುವ ಬಗ್ಗೆ ವರದಿ ಮಾಡಿದ್ದೆವು. ಇದನ್ನು ಪುಷ್ಠಿಕರಿಸಿರುವ ಜಪಾನ್ ಮೂಲದ ಈ ವಾಹನ ಸಂಸ್ಥೆಯು ನೂತನ ಸಿಬಿಆರ್500ಆರ್ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲು ಸಜ್ಜಾಗುತ್ತಿದೆ.
ಹಾಗಿದ್ದರೂ ಮಿಡ್-ಸೈಜ್ ಕ್ರೀಡಾ ಬೈಕ್ ವಿಭಾಗದಲ್ಲಿ ಗುರುತಿಸಿಕೊಂಡಿರುವ ನೂತನ ಸಿಬಿಆರ್500ಆರ್ ಯಾವಾಗ ದೇಶದ ರಸ್ತೆ ಪ್ರವೇಶಿಸಲಿದೆ ಎಂಬುದು ಇನ್ನೂ ಅಸ್ಪಷ್ಟ. ಆದಾಗ್ಯೂ ಈ ಅನಾವರಣ ಸಮಾರಂಭವನ್ನು ವಿಶ್ಲೇಷಕರ ಜತೆಗೆ ಬೈಕ್ ಪ್ರೇಮಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಈ ಹಿಂದೆ ತನ್ನ ತಾಂತ್ರಿಕ ತಜ್ಞರಿಗೆ 500ಆರ್ ಹ್ಯಾಂಡ್ಲಿಂಗ್ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ನೀಡುವ ಸಂದರ್ಭದಲ್ಲೇ ಹೋಂಡಾ ಸಿಬಿಆರ್ ಪ್ರವೇಶ ಬಗ್ಗೆ ಸುಳಿವು ದೊರಕಿತ್ತು. ಇದರಂತೆ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಹೊಸ ಮಾದರಿ ಪ್ರದರ್ಶಿಸುವುದು ಹೋಂಡಾ ಗುರಿಯಾಗಿರಿಸಿದೆ.

ನಿಮ್ಮ ಮಾಹಿತಿಗಾಗಿ, ದೇಶದ ಅತ್ಯಂತ ಜನಪ್ರಿಯ ಬೈಕ್ ಆಗಿರುವ ಹೋಂಡಾ ಈಗಾಗಲೇ ದೆಹಲಿ ಆಟೋ ಎಕ್ಸ್ ಪೋಗೆ ಸಕಲ ರೀತಿ ಪೂರ್ವ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಈ ಮಹತ್ತರ ಸಮಾರಂಭದಲ್ಲಿ ಒಂದಕ್ಕಿಂತ ಹೆಚ್ಚು ಸ್ಪೋರ್ಟ್ಸ್ ಬೈಕ್‌ಗಳನ್ನು ಹೋಂಡಾ ಪ್ರದರ್ಶಿಸಲಿದೆ.

ಅಷ್ಟಕ್ಕೂ ಒಂದೇ ವಾಕ್ಯದಲ್ಲಿ ಬಣ್ಣಿಸುವುದಾದ್ದಲ್ಲಿ ಹೋಂಡಾ ಸಿಬಿಆರ್500ಆರ್ ಎಂಬುದು ಸಿಬಿಆರ್1000ಆರ್‌ಆರ್ ಆವೃತ್ತಿಯ ತದ್ರೂಪವಾಗಿರಲಿದೆ. ಈ ಮೂಲಕ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಹೋಂಡಾ ಗುರಿಯಾಗಿರಿಸಿಕೊಳ್ಳುತ್ತಿದೆ.

ತಾಂತ್ರಿಕ ವಿಶಿಷ್ಟತೆಗಳು
- 470ಸಿಸಿ ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್,
- ಸಿಕ್ಸ್ ಸ್ಪೀಡ್ ಮ್ಯಾನುವಲ್,
- 46.9 ಬಿಎಚ್‌ಪಿ,
- ಗರಿಷ್ಠ ವೇಗತೆ ಗಂಟೆಗೆ 170 ಕೀ.ಮೀ.
- 31 ಇಂಚು ಸೀಟು ಎತ್ತರ

ಕ್ರೀಡಾ ಲುಕ್ ಹೊಂದಿರುವ ಹೊರತಾಗಿಯೂ ಭಾರತೀಯ ಗ್ರಾಹಕರ ಅಗತ್ಯಕ್ಕಾನುಸಾರವಾಗಿ ಇಬ್ಬರು ಸವಾರರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ.


Click it and Unblock the Notifications