ಹ್ಯೊಸಂಗ್ ಅಕ್ವಿಲಾ ಪ್ರೊ ಜಿವಿ 650ಆರ್ ಲಾಂಚ್
ಭಾರತದಲ್ಲಿ ಡಿಎಸ್‌ಕೆ ಗ್ರೂಪ್ ಜತೆ ಪಾಲುದಾರಿಕೆ ಹೊಂದಿರುವ ವಿಶ್ವದ ಪ್ರೀಮಿಯಂ ಬೈಕ್ ತಯಾರಕ ಕಂಪನಿಯಾದ ಹ್ಯೊಸಂಗ್ ಮೋಟಾರ್‌ಸೈಕಲ್ಸ್ ನೂತನ ಅಕ್ವಿಲಾ ಪ್ರೊ ಜಿವಿ 650ಆರ್ ಕ್ರೂಸರ್ ಬೈಕ್ ಅನ್ನು ಪರಿಚಯಿಸಿದೆ.
ಪ್ರಸ್ತುತ ಬೈಕ್ ದರ ಭಾರತೀಯ ರುಪಾಯಿ ಪ್ರಕಾರ 4.99 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಕ್ವಿಲಾ ಜತೆ ಮತ್ತೊಂದು ಫೇಸ್‌ಲಿಫ್ಟಡ್ ಜಿಟಿ ಪ್ರೊ 650ಆರ್ ಸ್ಪೋರ್ಟ್ಸ್ ಬೈಕ್ ಕೂಡಾ ಲಾಂಚ್ ಆಗಿದ್ದು, 4.69 ಲಕ್ಷ ರುಪಾಯಿಗಳಿಗೆ ದೊರಕಲಿದೆ.
ಸ್ಪೋರ್ಟ್ಸ್ ಬೈಕ್ ಪ್ರಿಯರು ಹ್ಯೊಸಂಗ್ ಕ್ರೂಸ್ ಬೈಕ್ ಬಗ್ಗೆ ಅತೀವ ಕುತೂಹಲವನ್ನು ಹೊಂದಿದ್ದಾರೆ. ಇದೀಗ ಈ ಎರಡು ನೂತನ ಬೈಕ್‌ಗಳು ಡಿಎಸ್‌ಕೆ ಶೋ ರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.

ನೂತನ ಕ್ರೂಸರ್ ಬೈಕ್
ದೇಶದ ಹೈ-ಇಂಡ್ ಮೋಟಾರ್ ಸೈಕಲ್ ಖರೀದಿಗಾರರಿಗೆ ಅಕ್ವಿಲಾ ಹೆಸರು ಹೊಸತೇನಲ್ಲ. ದಶಕದಿಂದಲೂ ಅಕ್ವಿಲಾ 250ಆರ್ ಕ್ರೂಸ್ ಬೈಕ್‌ಗಳನ್ನು ಕೈನಾಟಿಕ್ ಆಮದು ಮಾಡಿಕೊಳ್ಳುತ್ತಿದ್ದವು. ಇದೀಗ ಹೆಚ್ಚು ಪವರ್‌ಫುಲ್ ಎಂಜಿನ್‌ನೊಂದಿಗೆ ಅಕ್ವಿಲಾ ಆಗಮನವಾಗಿದೆ.

ನೂತನ ಕ್ರೂಸರ್ ಬೈಕ್
ಜಿಟಿ 650ಆರ್ ಬೈಕ್‌ನಲ್ಲಿ ಕಂಡುಬಂದಿರುವ ಅದೇ 650ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹ್ಯೊಸಂಗ್ ಪ್ರೊ ಜಿವಿ 650ಆರ್ ಬೈಕ್‌ನಲ್ಲಿ ಪ್ರಯೋಗಿಸಲಾಗಿದೆ. ಪ್ರಸ್ತುತ ಎಂಜಿನ್ 9000 ಆರ್‌ಪಿಎಂನಲ್ಲಿ 74 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7500 ಆರ್‌ಪಿಎಂನಲ್ಲಿ ಗರಿಷ್ಠ ಟರ್ಕ್ಯೂ ಔಟ್‌ಫುಟ್ 62.1 ಎನ್‌ಎಂ ಆಗಿರಲಿದೆ.

ನೂತನ ಕ್ರೂಸರ್ ಬೈಕ್
ಅಂದರೆ ಹ್ಯೊಸಂಗ್ ಅಕ್ವಿಲಾ ಪ್ರೊ ಜಿವಿ 650ಆರ್ ಬೈಕ್ ಪ್ರತಿ ಗಂಟೆಗೆ ಗರಿಷ್ಠ 192 ಕೀ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.

ನೂತನ ಕ್ರೂಸರ್ ಬೈಕ್
ಫೈವ್ ಸ್ಪಿಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಹ್ಯೊಸಂಗ್ ಅಕ್ವಿಲಾ ಪ್ರೊ ಜಿವಿ 650 ಕ್ರೂಸ್ ಬೈಕ್ ಲಭ್ಯವಿರಲಿದೆ.

ನೂತನ ಕ್ರೂಸರ್ ಬೈಕ್
ಹ್ಯೊಸಂಗ್ ಅಕ್ವಿಲಾ ಪ್ರೊ ಜಿವಿ 650ಆರ್ ಬೈಕ್‌ನ ಮತ್ತೊಂದು ಪ್ರಮುಖ ಫೀಚರ್ ಏನೆಂದರೆ ಇದರ ಬೆಲ್ಟ್ ಡ್ರೈವ್ ಆಗಿದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಹರ್ಲಿ ಡೇವಿಡ್ಸನ್ ಬೈಕ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬೈಕ್‌ಗಳಿಗೆ ಈ ಸೌಲಭ್ಯ ಲಭ್ಯವಿಲ್ಲ.

ನೂತನ ಕ್ರೂಸರ್ ಬೈಕ್
ಇದೇ ಸಂದರ್ಭದಲ್ಲಿ 250ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಅಕ್ವಿಲಾ ಬೈಕ್ ವರ್ಷನ್ ಮಾಡುವ ಇರಾದೆಯನ್ನು ಹ್ಯೊಸಂಗ್ ವ್ಯಕ್ತಪಡಿಸಿದೆ. ಅಂದರೆ ಅಕ್ವಿಲಾ ಜಿವಿ 250ಆರ್ ಬೈಕ್ 3 ಲಕ್ಷ ಅಸುಪಾಸಿನಲ್ಲಿರಲಿದೆ.

ಅದೇ ರೀತಿ ಜಿಟಿ 650ಆರ್ ಸೂಪರ್ ಬೈಕ್‌ನಲ್ಲೂ ಸುಧಾರಿತ ಲುಕ್, ವಿನ್ಯಾಸ, ಹೆಡ್‌ಲೈಟ್ ಎಲ್ಲವೂ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

ಆದರೆ ತಾಂತ್ರಿಕತೆಯಲ್ಲಿ ಹ್ಯೊಸಂಗ್ ಜಿಟಿ 650ಆರ್ ಬೈಕ್‌ನಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಇದರಲ್ಲಿ 650ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಎಂಜಿನ್ ಬಳಸಲಾಗಿದೆ.

ಹ್ಯೊಸಂಗ್ ಜಿಟಿ 650ಆರ್ ಫೇಸ್‌ಲಿಫ್ಟ್ ವರ್ಷನ್ ಬೈಕ್ ಪ್ರಿಯರ ಮನಗೆಲ್ಲುವ ಭರವಸೆಯನ್ನು ಡಿಎಸ್‌ಕೆ ಹೊಂದಿದೆ.

ದಕ್ಷಿಣ ಕೊರಿಯಾದಿಂದ ಆಮದು ಮಾಡಲಾದ ಬಿಡಿಭಾಗಗಳನ್ನು ದೇಶದಲ್ಲಿ ಡಿಎಸ್‌ಕೆ ಜೋಡಣೆ ಮಾಡಲಾಗುತ್ತದೆ. ಇದರಿಂದಾಗಿ ಈ ಸೂಪರ್ ಬೈಕ್‌ನ ದರ 5.09 ಲಕ್ಷ ರು.ಗಳಿಂದ 4.79 ಲಕ್ಷ ರು.ಗಳಿಗೆ ಇಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications








