ಇಂಡೋನೇಷ್ಯಾ ರಸ್ತೆಗಿಳಿದ ಕವಾಸಕಿ ಭಾರತಕ್ಕೆ ಬರುತ್ತಾ?
ಜಪಾನಿನ ಹೆಸರಾಂತ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ತಯಾರಕರಾದ ಕವಾಸಕಿ, ಇಂಡೋನೇಷ್ಯಾದಲ್ಲಿ ನೂತನ ಕವಾಸಕಿ ಝಡ್250 ಸ್ಟ್ರೀಟ್ ಫೈಟರ್ ಬೈಕನ್ನು ಬಿಡುಗಡೆಗೊಳಿಸಿದೆ. ಇದು ಭಾರತಕ್ಕೆ ಪ್ರವೇಶಿಸಲಿದೆಯೇ ಎಂಬುದು ಬೈಕ್ ಉತ್ಸಾಹಿಗಳ ಕುತೂಹಲಕ್ಕೆ ಕಾರಣವಾಗಿದೆ.
ಝಡ್800 ಮಾಡೆಲ್‌ನಿಂದ ಪ್ರೇರಣೆ ಪಡೆದುಕೊಂಡು 250 ಸಿಸಿ ಕವಾಸಕಿ ಸ್ಪೋರ್ಟ್ಸ್ ಬೈಕ್ ತಯಾರಿಸಲಾಗಿದೆ. ಇದರ 250 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ನಾವಿದನ್ನು 2013 ಕವಾಸಕಿ ನಿಂಜಾ 250ಆರ್ ಮಾಡೆಲ್‌ನಲ್ಲಿ ನೋಡಿದ್ದೆವು. ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ಎಂಜಿನ್ ನಿರ್ಮಾಣವಾಗಿದೆ. ಹಾಗಿದ್ದರೂ ಪವರ್ ಹಾಗೂ ಟರ್ಕ್ಯೂ ಅಂಶ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಬಾಡಿ ಫ್ರೇಮ್, ಟೆಲಿಸ್ಕಾಪಿಕ್ ಫ್ರಂಟ್ ಫೋರ್ಕ್ಸ್ ಹಾಗೂ ಮೊನೊಶೋಕ್ ರಿಯರ್ ಸಸ್ಷೆಷನ್ ಎಲ್ಲವನ್ನು ನಿಂಜಾದಿಂದ ಆಮದು ಮಾಡಲಾಗಿದೆ. ಒಟ್ಟಿನಲ್ಲಿ ನಿಂಜಾದ ಪರಿಷ್ಕೃತ ಆವೃತ್ತಿಯಾಗಿರಲಿದೆ ಸ್ಟ್ರೀಟ್ ಫೈಟರ್.
ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿರುವ ಸ್ಟ್ರೀಟ್ ಫೈಟರ್ ದರ ಐದು ಸಾವಿರ ಡಾಲರ್ ಆಗಿದೆ. ಹಾಗೆಯೇ ಬಿಳಿ, ಕೆಂಪು ಹಾಗೂ ಕಪ್ಪು ವರ್ಣಗಳಲ್ಲಿ ಲಭ್ಯವಾಗಲಿದೆ. 2013 ಕವಾಸಕಿ ಝಡ್250 ಸ್ಟ್ರೀಟ್ ಫೈಟರ್ ಯಾವಾಗ ಭಾರತ ಪ್ರವೇಶ ಮಾಡಲಿದೆ ಎಂಬುದು ಬೈಕ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್
ನಿಂಜಾ ಮಾದರಿಕ್ಕಿಂತಲೂ ಸ್ಟ್ರೀಟ್ ಫೈಟರ್ ಸ್ವಲ್ಪ ಹೆಚ್ಚು ಟರ್ಕ್ಯೂ ಪವರ್ ನೀಡುವ ಸಾಧ್ಯತೆಯಿದೆ. ಆದರೆ ಸಮಾನ ಎಂಜಿನ್ ಬಳಕೆ ಮಾಡಲಾಗಿದೆ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್
ಸ್ಟ್ರೀಟ್ ಫೈಟರ್ ಸ್ವಾಭಾವಕ್ಕೆ ಅನುಗುಣವಾಗಿ ಎಂಜಿನ್ ನಿರ್ವಹಣೆಯತ್ತ ಕವಾಸಕಿ ಗಮನ ವಹಿಸಿದೆ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್
ನಿಂಜಾದಿಂದ ಕೇವಲ ಎಂಜಿನ್ ಮಾತ್ರ ಆಮದು ಮಾಡಲಾಗಿಲ್ಲ. ಬದಲಾಗಿ ಇತರ ಹಲವು ಫೀಚರ್‌ಗಳನ್ನು ಆಳವಡಿಸಲಾಗಿದೆ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್
ಹಾಗಿದ್ದರೂ ನಿಂಜಾ ಪರಿಷ್ಕೃತ ಆವೃತ್ತಿಯೇ ಕವಾಸಕಿ ಸ್ಟ್ರೀಟ್ ಫೈಟರ್ ಎಂಬುದಕ್ಕೆ ಸರಿಯಾದ ಉತ್ತರ ಬಂದಿಲ್ಲ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್
ಕವಾಸಕಿ ಭಾರತಕ್ಕೆ ಪ್ರವೇಶಿಸಿದರೆ ಸ್ಪೋರ್ಟ್ಸ್ ಬೈಕ್ ಉತ್ಸಾಹಿಗಳನ್ನು ಖಂಡಿತವಾಗಿಯೂ ಆಕರ್ಷಿಸಲಿದೆ.

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್

ಕವಾಸಕಿ ಝಡ್250 ಸ್ಟ್ರೀಟ್ ಫೈಟರ್



Click it and Unblock the Notifications








