ಬೈಕ್ ಪ್ರಿಯರ ಬಯಕೆಗಳಿನುಸಾರವಾದ ಕಸ್ಟಮ್ ಬೈಕ್
ಲ್ಯಾಂಡ್ ರೋವರ್ ಪರಿಷ್ಕೃತಗೊಳಿಸುವುದರಲ್ಲಿ ಬ್ರಿಟನ್ ಮೂಲದ ಎ. ಖಾನ್ ಡಿಸೈನ್ ಎತ್ತಿದ ಕೈ. ಇದೇ ಮೊದಲ ಬಾರಿಗೆ ಬ್ರಿಟನ್ ಮೂಲದ ಅಫ್ಜಲ್ ಖಾನ್, ಬೈಕ್‌ಗಳಿಗೂ ಕಸ್ಟಮೈಸ್ಡ್ ಸ್ಪರ್ಶ ನೀಡಿದೆ.
ಕಳೆದ ತಿಂಗಳಷ್ಟೇ ಡೆನ್ಮಾರ್ಕ್ ತಲಹದಿಯದ ಮೋಟಾರುಸೈಕಲ್ ಲಾಚ್ ಜೆನ್ಸನ್ (Lauge Jensen) ನಡುವೆ ಖಾನ್ ಡಿಸೈನ್ ಕೈಜೋಡಿಸಿಕೊಂಡಿತ್ತು. ಇದರ ಫಲವೆಂಬಂತೆ ಆಕರ್ಷಕ ಬೈಕ್ ನಿರ್ಮಾಣವಾಗಿದೆ.

ಎ. ಖಾನ್ ವಿನ್ಯಾಸಿತ ಕೆಫೆ ರೇಸರ್ ಆಗಿರುವ ಲಾಜ್ ಜೆನ್ಸನ್, ಸೀಮಿತ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ.

ನಿಮ್ಮ ಮಾಹಿತಿಗಾಗಿ ಈ ವಿಶಿಷ್ಟ ವಿನ್ಯಾಸಿತ ಬೈಕ್ ಕೇವಲ 10 ಯುನಿಟ್‌ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.

ಪ್ರಸ್ತುತ ಬೈಕ್ ಬ್ರಿಟನ್ ಮಾರುಕಟ್ಟೆಯಲ್ಲಿ ಮಾತ್ರ ಎಕ್ಸ್‌ಕ್ಲೂಸಿವ್ ಮಾರಾಟಕ್ಕೆ ಲಭ್ಯವಾಗಲಿದೆ. ಹಾಗೆಯೇ ಲಂಡನ್‌ನ ಚೆಲ್ಸಿಯಾ ಕಿಂಗ್ಸ್ ರಸ್ತೆಯಲ್ಲಿ ಪ್ರದರ್ಶನವಾಗಲಿದೆ.

ವೈಶಿಷ್ಟ್ಯಗಳು
ಹ್ಯಾಂಡ್ ಟ್ರಿಮ್ಡ್ ರೇಸಿಂಗ್ ಸೀಟ್ ಡ್ರಿಲ್ಡ್ ಪೆಡ್ಯಾಲ್, ಕಸ್ಟಮ್ ಡೈಯಲ್ಸ್ ಆಂಡ್ ಇಂಡಿಕೇಟರ್, ಶಾರ್ಪ್ ಇನ್ಸ್ಟ್ರುಮೆಂಟ್, ಎಕ್ಸಾಸ್ಟ್ ಟಿಪ್ಸ್, ವಿಷ್ಯುಲಿ ಡ್ರಾಮಟಿಕ್ ಹ್ಯಾಂಡಲ್‌ಬಾರ್, ಫ್ರಂಟ್ ಫಾರ್ಕ್ಸ್ ಆಂಡ್ ಫ್ರಂಟ್ ಆಂಡ್ ರಿಯರ್ ಲ್ಯಾಂಪ್.

ಕೈಯಿಂದ ನಿರ್ಮಿತ ಈ ಸೀಮಿತ ಆವೃತ್ತಿಯು ವಿ2 ಎಂಜಿನ್ ಹೊಂದಿದೆ.

ಎ. ಖಾನ್ ಪ್ರಕಾರ ಇದು ಯುರೋ4 ಎಮಿಷನ್ ಸ್ಟಾಂಡರ್ಡ್ ನಿಯಂತ್ರಿತ ಜಗತ್ತಿನ ಏಕಮಾತ್ರ ಮೋಟಾರು ಸೈಕಲ್ ಆಗಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಇದು ನಾಲ್ಕು ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 260 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇದನ್ನು ಮಾಲಿಕರ ಬಯಕೆಗಳಿನುಸಾರವಾಗಿ ಪರಿಷ್ಕೃಗೊಳಿಸಲಾಗುವುದು.

ಇಲ್ಲಿದೆ ನೋಡಿ ಇತ್ತೇಚೆಗಷ್ಟೇ ಮಾರಾಟವಾದ ಲಾಜ್ ಜೆನ್ಸನ್ ಚಿನ್ನದ ಲೇಪನದ ಕಸ್ಟಮೈಸ್ಡ್ ಬೈಕ್. ಇದು ಬರೋಬ್ಬರಿ 850000 ಅಮೆರಿಕನ್ ಡಾಲರ್‌ಗಳಿಗೆ ಮಾರಾಟವಾಗಿತ್ತು.


Click it and Unblock the Notifications








