ಮಹೀಂದ್ರ ಅಗ್ಗದ ಬೈಕ್ ಲಾಂಚ್; ಮೈಲೇಜ್ 79.4 kmpl
ದೇಶದ ಬೈಕ್ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರ ಟು ವೀಲರ್, ಎಂಟ್ರಿ ಲೆವೆಲ್ ಅಗ್ಗದ ಬೈಕ್ ಆದ ಪ್ಯಾಂಥರೊ (Pantero) ಪರಿಚಯಿಸಿದೆ.
ಪ್ರಮುಖ ಅಂಶಗಳು:
- ಸ್ಮರ್ಧಾತ್ಮಕ 39,650 ರು. (ದೆಹಲಿ ಎಕ್ಸ್ ಶೋ ರೂಂ)
- ಒಟ್ಟು ನಾಲ್ಕು ವೆರಿಯಂಟ್
- ಎಲ್ಲ ಆವೃತ್ತಿ ದೇಶಿಯವಾಗಿ ಅಭಿವೃದ್ಧಿ
- 110ಸಿಸಿ, ಮೈಕ್ರೊ ಚಿಪ್ ಇಗ್ನೈಟಡ್ 5 ಕರ್ವ್ (MCi-5) ಎಂಜಿನ್
- ಡಿಜಿಟಲ್ ಡ್ಯಾಶ್‌ಬೋರ್ಡ್, ಬೆಸ್ಟ್ ಇನ್ ಕ್ಲಾಸ್
- ಉದ್ದವಾದ ಸೀಟ್, ಗರಿಷ್ಠ ಮೈಲೇಜ್ (79.4 kmpl)
- ಎಲ್‌ಇಡಿ ಟೈಲ್ ಲ್ಯಾಂಪ್
ಪ್ರಮುಖವಾಗಿಯೂ ದೇಶದ ಪ್ರಯಾಣಿಕ ವಿಭಾಗವನ್ನು ಗಮನದಟ್ಟಿಕೊಂಡು ಹೆಚ್ಚು ವಿಶ್ವಾಸಾರ್ಹತೆ, ಸಾಧನೆ ಮತ್ತು ಕ್ರಿಯಾತ್ಮಕತೆಯಲ್ಲಿ ನೂತನ ಬೈಕ್ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ...

ವೆರಿಯಂಟ್, ದರ ಮಾಹಿತಿ
-ಪ್ಯಾಂಥರೊ (ಕಿಕ್ ಸ್ಟಾರ್ಟ್/ಸ್ಪೋಕ್ ವೀಲ್/ಅನಲಾಗ್ ಕನ್ಸೋಲ್): 39,650 ರು.
-ಪ್ಯಾಂಥರೊ (ಕಿಕ್ ಸ್ಟಾರ್ಟ್/ ಕಾಸ್ಟ್ ಅಲಾಯ್ ವೀಲ್/ಅನಲಾಗ್ ಕನ್ಸೋಲ್): 40,550 ರು.
-ಪ್ಯಾಂಥರೊ (ಸೆಲ್ಫ್ ಸ್ಟಾರ್ಟ್/ಕಾಸ್ಟ್ ಅಲಾಯ್ ವೀಲ್ಸ್/ಅನಲಾಗ್ ಕನ್ಸೋಲ್): 42,250 ರು.
-ಪ್ಯಾಂಥರೊ (ಸೆಲ್ಫ್ ಸ್ಟಾರ್ಟ್/ಕಾಸ್ಟ್ ಅಲಾಯ್ ವೀಲ್ಸ್/ಡಿಜಿಟಲ್ ಕನ್ಸೋಲ್): 43,150

ಕಂಪನಿಯ ಪ್ರಕಾರ ಮಹೀಂದ್ರ ಪ್ಯಾಂಥರೊ ಪ್ರತಿ ಲೀಟರ್‌ಗೆ ಗರಿಷ್ಠ 79.4 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸ್ಪರ್ಧಾತ್ಮಕ ದರದಲ್ಲಿ ಆಗಮನವಾಗಿರುವುದು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಲಿದೆ.

ಎಲ್‌ಇಡಿ ಪೈಲಾಟ್, ಟೈಲ್ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳಂತಹ ಆಕರ್ಷಕ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ದೇಶದ್ಯಾಂತ ವ್ಯಾಪಿಸಿರುವ ಎಲ್ಲ ಮಹೀಂದ್ರ ಟು ವೀಲರ್ ಡೀಲರ‌್‌ಶಿಪ್‌ಗಳಲ್ಲಿ ನೂತನ ಬೈಕ್ ಲಭ್ಯವಿರಲಿದೆ. ಈ ಹಿಂದೆ ಜನವರಿ ತಿಂಗಳಲ್ಲಿ ಪ್ಯಾಂಥರೊ ಬೈಕನ್ನು ಅನಾವರಣಗೊಳಿಸಲಾಗಿತ್ತು.

ಪುಣೆಯಲ್ಲಿ ಘಟಕದಲ್ಲಿ ಮಹೀಂದ್ರ ಪ್ಯಾಂಥರೊ ಸಜ್ಜುಗೊಳಿಸಲಿದ್ದು, ಆಫ್ ರೋಡ್ ಸೇರಿದಂತೆ ವಾಹನ ದಟ್ಟಣೆಯಲ್ಲೂ ಉತ್ತಮ ರೈಡಿಂಗ್ ಅನುಭವ ನೀಡಲಿದೆ.

ಚಳಿಗಾಲದ ಮಂಜಿನ ಪರಿಸ್ಥಿತಿ ಸೇರಿದಂತೆ ಕಡಿಮೆ ಗೋಚರದ ಸಂದರ್ಭದಲ್ಲಿ ಇದರ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಸುರಕ್ಷಿತ ಪಯಣವನ್ನು ಖಾತ್ರಿಪಡಿಸಲಿದೆ. ಇದೇ ಮೊದಲ ಬಾರಿಗೆ ದ್ವಿಚತಆಳವಡಿಸಲಾಗುತ್ತಿದೆ.

ಇದು ಅತಿ ಉದ್ದವಾದ ಅಂದರೆ 774ಎಂಎಂ ಸೀಟ್ ವಿನ್ಯಾಸವನ್ನು ಪಡೆದಿದೆ. ಈ ಮೂಲಕ 110ಸಿಸಿ ವಿಭಾಗದಲ್ಲಿ ಉತ್ತಮ ರೈಡಿಂಗ್ ಪ್ರತಿಪಾದಿಸಲಿದೆ. ಹಾಗೆಯೇ 165 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ.

ಪ್ಯಾಂಥರೊ ನಾಲ್ಕು ಕಲರ್ ವೆರಿಯಂಟ್ ಇಂತಿದೆ:
Fiery Red,
Sterling Silver,
Blazing Black,
Cool Black.

ಮಹೀಂದ್ರ ಪ್ಯಾಂಥರೊ




Click it and Unblock the Notifications








