ಖದೀಮರ ಫೇವರಿಟ್ ಬೈಕ್ ಯಾವುದೇ ಗೊತ್ತೇ?
ಖದೀಮರೂ ಸಹ ಬೈಕ್ ಕದಿಯುವಾಗ ಅಚ್ಚುಮೆಚ್ಚಿನ ಬೈಕ್‌ಗಳನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರೆ ನೀವು ನಂಬಲು ಸಾಧ್ಯವೇ? ಹೌದು, ಇಲ್ಲೊಂದು ಸಮೀಕ್ಷಾ ವರದಿ ಇದನ್ನು ಪುಷ್ಠಿಕರಿಸುತ್ತಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ದಿನನಿತ್ಯ ಹಲವಾರು ಬೈಕ್ ಕಳವಿಗೀಡಾಗುತ್ತದೆ. ಅಮೆರಿಕ ದೇಶ ಕೂಡಾ ಇದರಿಂದ ಹೊರತಾಗಿಲ್ಲ. ಅಲ್ಲಿನ ರಾಷ್ಟ್ರೀಯ ವಿಮಾ ಕ್ರೈಂ ಬ್ಯೂರೋ (ಎನ್‌ಐಸಿಬಿ) ವರದಿಯ ಪ್ರಕಾರ 2012ರ ಸಾಲಿನಲ್ಲಿ ಅಮೆರಿಕದಲ್ಲಿ ಒಟ್ಟು 46,061 ಬೈಕ್‌ಗಳು ಕಳವೀಡಾಗಿದೆ. ಭಾರತಕ್ಕೆ ಹೋಲಿಸಿದರೆ ಈ ಸಂಖ್ಯೆ ತುಂಬಾನೇ ಕಡಿಮೆಯಾಗಿದೆ.
ಈ ಪೈಕಿ ಜಪಾನ್ ಮೂಲದ ಬೈಕ್‌ಗಳೇ ಕಳ್ಳರಿಗೆ ಅಚ್ಚುಮೆಚ್ಚಾಗಿದೆ. ಅಷ್ಟಕ್ಕೂ ಕಳ್ಳರ ಫೇವರಿಟ್ ಬ್ರಾಂಡ್ ಯಾವುದು ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹೌದು, ಕಳೆದ ವರ್ಷ ಅಮೆರಿಕದಲ್ಲಿ ಕಳವಿಗೀಡಾದ ಒಟ್ಟು 46,061 ಬೈಕ್‌ಗಳ ಪೈಕಿ ಹೋಂಡಾದಿಂದ ಮಾತ್ರವಾಗಿ 9,082 ಬೈಕ್‌ಗಳನ್ನು ಅಪಹರಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಹೋಂಡಾ ನಂತರದ ಸ್ಥಾನದಲ್ಲಿ ಯಮಹಾ (7517), ಸುಜುಕಿ (7017) ಮತ್ತು ಕವಾಸಕಿ (4,839) ಕಾಣಿಸಿಕೊಂಡಿದೆ. ಈ ಮೂಲಕ ಜಪಾನ್ ಬ್ರಾಂಡ್ ಬೈಕ್‌ಗಳೇ ಕಳ್ಳರ ಫೇವರಿಟ್ ಎನಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ತವರಿನ ಹರ್ಲಿ ಡೇವಿಡ್ಸನ್ ಬ್ರಾಂಡ್ ಗುರುತಿಸಿಕೊಂಡಿದೆ. ಕಳೆದ ಸಾಲಿನಲ್ಲಿ ಹರ್ಲಿಯ 3,755 ಬೈಕ್‌ಗಳು ಅಪಹರಣವಾಗಿದೆ.

ಇನ್ನು ಕಳವಿಗೀಡಾದ ಬೈಕ್‌ಗಳನ್ನು ಪ್ರದೇಶಗಳಾಗಿ ವಿಂಗಡಿಸಿದಾಗ ಕ್ಯಾಲಿಫೋರ್ನಿಯಾದಲ್ಲಿ ಅತ್ಯಧಿಕ ಅಂದರೆ 6,082 ಬೈಕ್‌ಗಳನ್ನು ಚೋರಿ ಮಾಡಲಿದೆ. ಇನ್ನುಳಿದಂತೆ ಫ್ಲೋರಿಡಾ 4110, ಟೆಕ್ಸಾಸ್ 3400, ಉತ್ತರ ಕರೋಲಿನಾ 2754 ಮತ್ತು ಇಂಡಿಯಾನಾ 2334 ಹಿಂಬಾಲಿಸಿವೆ.

ಇದನ್ನು ನಗರಗಳಾಗಿ ವಿಂಗಡಿಸಿದಾಗ ನ್ಯೂಯಾರ್ಕ್ (903), ಲಾಸ್ ವೇಗಾಸ್ (757), ಸ್ಯಾಂಡಿಯಾಗೊ (633), ಇಡಿಯಾನಾಪೊಲೀಸ್ (584), ಮಿಯಾಮಿ (535) ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

ಇಲ್ಲಿ ಅಚ್ಚರಿಗೊಳಿಸುವ ಇನ್ನೊಂದು ವಿಚಾರವೆಂದರೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳ ಕಳವು ನಡೆಯುತ್ತಿದೆ. ಅದೇ ಹೊತ್ತಿಗೆ ಚಳಿಗಾಲದಲ್ಲಿ ಬೈಕ್‌ಗಳ ಬದಲಾಗಿ ಕಾರುಗಳ ಕಳ್ಳತನ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.


Click it and Unblock the Notifications