ದಾಖಲೆ ಬರೆಯಲು ಹೋಗಿ ಸಾವಿಗೆ ಶರಣಾದ ಬೈಕ್ ರೇಸರ್

ಆತ ಪ್ರಖ್ಯಾತ ಮೋಟಾರ್ ಸೈಕಲ್ ರೇಸರ್. ಆದರೆ ತನ್ನದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸುವ ಸಾಹಸಕ್ಕೆ ಮುಂದಾಗಿ ಪ್ರಾಣವನ್ನೇ ತೆರುವಂತಾಗಿದೆ. ಹೌದು, ಮೋಟಾರ್ ಸೈಕಲ್ ರೇಸಿಂಗ್ ಜಗತ್ತಿಗಿಂದು ಶೋಕದ ದಿನ. ಸಾಂಪ್ರದಾಯಿಕ ಮೋಟಾರ್ ಸೈಕಲ್ ರೈಡಿಂಗ್‌ನಲ್ಲಿ ತನ್ನ ಹೆಸರಲ್ಲಿದ್ದ (ಪ್ರತಿ ಗಂಟೆಗೆ 500 ಕೀ.ಮೀ. ವೇಗ) ಅಳಿಸುವ ಸಾಹಸಕ್ಕೆ ಮುಂದಾಗಿ ಬಿಲ್ ವಾರ್ನರ್ ಸಾವಿಗೆ ಶರಣಾಗಿದ್ದಾರೆ.

ಅಮೆರಿಕದ ಲೈಮ್‌ಸ್ಟೋನ್ ಲೌರಿಂಗ್ ಏರ್ ಫೋರ್ಸ್ ಬೇಸ್‌ನಲ್ಲಿ ಈ ದುರಂತದ ಘಟನೆ ವರದಿಯಾಗಿದೆ. ಮೋಟಾರ್ ಬೈಕ್ ನಿಯಂತ್ರಣ ತಪ್ಪುವ ಮುನ್ನ ಗಂಟೆಗೆ 485 ಕೀ.ಮೀ. ವೇಗತೆ ಪಡೆದುಕೊಳ್ಳುವಲ್ಲಿ ವಾರ್ನರ್ ಯಶಸ್ವಿಯಾಗಿದ್ದರು.

ಇನ್ನೇನೂ ದಾಖಲೆ ಅಳಿಸಿಬಿಡುತ್ತಾರೆ ಎನ್ನುವಷ್ಟರಲ್ಲಿ ಅವಘಡ ಸಂಭವಿಸಿತ್ತು. ಬೈಕ್ ಅಪಘಾತಕ್ಕೀಡಾದ ತಕ್ಷಣದಲ್ಲಿ ವಾರ್ನರ್ ಪ್ರಜ್ಞೆ ತಪ್ಪಿರಲಿಲ್ಲ. ಅವರು ಸಂಭಾಷಣೆ ಮಾಡುವಷ್ಟು ಶಕ್ತರಾಗಿದ್ದರು. ಆದರೆ ತೀವ್ರ ಗಾಯಗೊಂಡ ಅವರು ಒಂದು ತಾಸಿನ ಬಳಿಕ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Bill Warner Dies Attempting To Set Speed Record

ವಿಶ್ವದಲ್ಲಿ ವಾರ್ನರ್ ದಾಖಲೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಅವರ ಆಪ್ತರಾದ ಟಿಮ್ ಕೆಲ್ಲಿ ದುಃಖತಪ್ತರಾಗಿ ನುಡಿದಿದ್ದಾರೆ.

Bill Warner Dies Attempting To Set Speed Record

ಕಸ್ಟಮೈಸ್ಡ್ ಸುಜುಕಿ ಹಯಾಬುಸ ಮೋಟಾರ್ ಸೈಕಲ್‌ನಲ್ಲಿ ಪ್ರತಿ ಗಂಟೆಗೆ 500ಕ್ಕಿಂತಲೂ ಹೆಚ್ಚು ವೇಗತೆಯಲ್ಲಿ ಸಂಚರಿಸಿ ದಾಖಲೆ ಸ್ಥಾಪಿಸಲು ವಾರ್ನರ್ ಯಶಸ್ವಿಯಾಗಿದ್ದರು.

Bill Warner Dies Attempting To Set Speed Record

ಪ್ರಸ್ತುತ ಲೈಮ್‌ಸ್ಟೋನ್ ಪೊಲೀಸ್ ಇಲಾಖೆ ಹಾಗೂ ಮೈನೆ ಸ್ಟೇಟ್ ಪೊಲೀಸ್ ತಂಡವು ಅಪಘಾತಕ್ಕೀಡಾಗಿರುವ ಕಾರಣವನ್ನು ತಿಳಿಯಲು ತನಿಖೆ ಕೈಗೆತ್ತಿಕೊಂಡಿದೆ.

Bill Warner Dies Attempting To Set Speed Record

2011ನೇ ಇಸವಿಯಲ್ಲಿ ಗಂಟೆಗೆ 311 ಮೈಲ್ ವೇಗತೆಯಲ್ಲಿ ಸಂಚರಿಸುವ ಮೂಲಕ ಬಿಲ್ ವಾರ್ನರ್ ವಿಶ್ವ ದಾಖಲೆ ಸ್ಥಾಪಿಸಿದ್ದರು.

Bill Warner Dies Attempting To Set Speed Record

ಪ್ರಸ್ತುತ ವಾರ್ನರ್ ಮರಣ ಇಡೀ ರೇಸಿಂಗ್ ಜಗತ್ತನ್ನು ತಲ್ಲಣಗೊಳಿಸಿದೆ.

Bill Warner Dies Attempting To Set Speed Record

ಒಂದು ವೇಳೆ ಜೀವಂತವಾಗಿ ಇರುತ್ತಿದ್ದರೆ 44ರ ಹರೆಯದ ವಾರ್ನರ್ ಇನ್ನು ಹಲವಾರು ದಾಖಲೆಗಳ ಒಡೆಯರಾಗುತ್ತಿದ್ದರು.

Bill Warner Dies Attempting To Set Speed Record

ಮುಂದಿನ ಸ್ಲೈಡರ್ ಮುಖಾಂತರ ಸ್ಪೀಡ್ ಸ್ಟಾರ್ ವಾರ್ನರ್ ಮೋಟಾರ್ ಬೈಕ್ ರೇಸಿಂಗ್ ಜಲಕ್ ವೀಕ್ಷಿಸಿರಿ...

ವೀಡಿಯೋ ವೀಕ್ಷಿಸಿ

More from DriveSpark

Article Published On: Tuesday, July 16, 2013, 15:57 [IST]
English summary
Bill Warner died on Sunday after losing control and zooming off a runway while trying to break his speed record at Loring Air Force Base in Limestone, Maine. Bill Warner (44), a resident of Florida, USA has set a new speed record while riding a turbocharged Suzuki Hayabusa in July 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+