ಪೋರ್ಷೆಯಿಂದ 5 ಲಕ್ಷ ಬೆಲೆಬಾಳುವ ಐಷಾರಾಮಿ ಸೈಕಲ್
ಈ ಹಿಂದೆಯೂ ಹಲವು ಬಾರಿ ಭಿನ್ನ ರೀತಿಯ ಐಷಾರಾಮಿ ಸೈಕಲ್‌ಗಳ ಬಗ್ಗೆ ನಾವು ವರದಿ ಮಾಡಿರುತ್ತೇವೆ. ಆದರೆ ಈ ಬಾರಿ ಜರ್ಮನಿಯ ಲಗ್ಷುರಿ ವಾಹನ ತಯಾರಕ ಸಂಸ್ಥೆಯಾಗಿರುವ ಪೋರ್ಷೆ ತನ್ನ ಅಭಿಮಾನಿಗಳಿಗಾಗಿ ಅತಿ ವಿಶೇಷ ತ್ರಿವಳಿ ಸೈಕಲುಗಳನ್ನು ಪರಿಚಯಿಸಿದೆ.
ಸಾಮಾನ್ಯವಾಗಿ ದುಬಾರಿ ಕಾರುಗಳಿಗೆ ಪೋರ್ಷೆ ಹೆಸರುವಾಸಿದೆ. ಹಾಗಿರುವಾಗ ಸೈಕಲ್ ಎಷ್ಟ ಮಟ್ಟಿಗೆ ಪ್ರಚಾರ ಗಿಟ್ಟಿಸಿಕೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ. ಅಂದ ಹಾಗೆ ಹೈ ಎಂಡ್, ಅಲ್ಟ್ರಾ ಹಗುರ ಭಾರದ ಸೈಕಲುಗಳನ್ನು ಪೋರ್ಷೆ ಪರಿಚಯಿಸಿದೆ. ನಿಮಗೆ ತಿಳಿದಿರುವಂತೆಯೇ ವಿದೇಶಗಳಲ್ಲಿ ಸೈಕಲ್‌ಗಳು ಬೈಕ್ ಹೆಸರಿನಿಂದ ಸಂಭೋದಿಸಲಾಗುತ್ತದೆ.
ಪೋರ್ಷೆ ಲಗ್ಷುರಿ ಸೈಕಲುಗಳ ಪಟ್ಟಿ
ಪೋರ್ಷೆ ಆರ್‌ಎಕ್ಸ್,
ಪೋರ್ಷೆ ಬೈಕ್ ಆರ್‌ಎಸ್,
ಪೋರ್ಷೆ ಬೈಕ್

ಸಹಜವಾಗಿಯೇ ಪೋರ್ಷೆ ಕಾರು ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಸೈಕಲ್ ವಿನ್ಯಾಸವನ್ನು ರಚಿಸಲಾಗಿದೆ.

ಪೋರ್ಷೆ ಬೈಕ್
ಅಂದ ಹಾಗೆ ಪೋರ್ಷೆ ಬೈಕ್, ಸಿಟಿ ಸೈಕಲ್ ಆಗಿದ್ದು, ಶಿಮಾನೊ ಅಲ್ಪೈನ್ 8 ಸ್ಪೀಡ್ ಹಬ್ ಗೇರ್ ಜೋಡಣೆ ಹಾಗೂ ಮ್ಯಾಗುರ ಎಂಟಿ26 ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಮೇಲೆ ಸೂಚಿಸಲಾದ ಮೂರು ಸೈಕಲುಗಳ ಪೈಕಿ ಪೋರ್ಷೆ ಬೈಕ್, ಕಡಿಮೆ ದುಬಾರಿಯೆನಿಸಿದ್ದು, 2.2 ಲಕ್ಷ ರು.ಗಳ ಅಸುಪಾಸಿನಲ್ಲಿ ನಿಮ್ಮ ಕೈ ಸೇರಲಿದೆ.

ಪೋರ್ಷೆ ಬೈಕ್ ಆರ್‌ಎಕ್ಸ್
ಇನ್ನುಳಿದಂತೆ ಪೋರ್ಷೆ ಬೈಕ್ ಆರ್‌ಎಕ್ಸ್, ಆಫ್ ರೋಡ್ ಬೈಸಿಕಲ್ ಆಗಿದೆ. ಇದರ ಕಾರ್ಬನ್ ಫೈಬರ್ ಫ್ರೇಮ್ ಸ್ಥಿರತೆಯ ಚಾಲನೆಯನ್ನು ಒದಗಿಸಲಿದೆ. ಅಲ್ಲದೆ 20 ಸ್ಪೀಡ್ ಶಿಮಾನೊ ಗೇರ್ ಕೂಡಾ ಪಡೆದುಕೊಂಡಿದೆ.

ಪೋರ್ಷೆ ಬೈಕ್ ಆರ್‌ಎಕ್ಸ್ 27.5 ಇಂಚು ಹೊಂದಿದ್ದು, ಡಿಟಿ ಸ್ವಿಸ್ ಏರ್ ಸಸ್ಫೆಷನ್ ಫ್ರಂಟ್ ಫಾರ್ಕ್ಸ್ ಮತ್ತು ಮ್ಯಾಗುರದ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಹೊಂದಿದೆ.

ಜರ್ಮನಿಯಲ್ಲಿ ಪೋರ್ಷೆ ಬೈಕ್ ಆರ್‌ಎಕ್ಸ್ ದರ ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಪೋರ್ಷೆ ಬೈಕ್ ಆರ್‌ಎಸ್
ಅಂತಿಮವಾಗಿ ಈ ಮೂರು ಸೈಕಲುಗಳ ಪೈಕಿ ಪೋರ್ಷೆ ಬೈಕ್ ಆರ್‌ಎಸ್ ಅತಿ ದುಬಾರಿಯೆನಿಸಿದೆ. ಇದು ಸ್ಪೋರ್ಟಿ ಸಿಟಿ ಬೈಕಾಗಿದ್ದು, ಕಾರ್ಬನ್ ಫ್ರೇಮ್ ಪಡೆದುಕೊಂಡಿದೆ.

ಮೂರು ಸೈಕಲ್‌ಗಳ ಪೈಕಿ ಅತಿ ಕಡಿಮೆ ಅಂದರೆ 9 ಕೆ.ಜಿ ಮಾತ್ರ ತೂಕ ಹೊಂದಿರುವ ಪೋರ್ಷೆ ಬೈಕ್ ಆರ್‌ಎಸ್, 20 ಸ್ಪೀಡ್ ಶಿಮಾನೊ ಗೇರ್ ಸಿಸ್ಟಂ ಮತ್ತು ಮ್ಯಾಗುರದ ಅಲ್ಟ್ರಾ ಲೈಟ್‌ವೇಟ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಪೋರ್ಷೆ ಬೈಕ್ ಆರ್‌ಎಸ್, ಐದು ಲಕ್ಷ ರು.ಗಳಷ್ಟ ದುಬಾರಿಯಾಗಿದೆ.

ಹಾಗೊಂದು ವೇಳೆ ಈ ದುಬಾರಿ ಬೈಕ್‌ಗಳನ್ನು ಕಳ್ಳತ ಮಾಡುವುದು ಸುಲಭ ಎಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಆಂಟಿ ಥೆಫ್ಟ್ ಲೇಬಲ್ ಜತೆಗೆ ಯೂನಿಕ್ ಕೋಡ್ ಹೊಂದಿರುವ ಈ ಬೈಕ್‌ಗಳನ್ನು ಸ್ಮಾರ್ಟ್ ಫೋನ್ ಅಪ್ಲೀಕೇಷನ್ ಮುಖಾಂತರ ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ.


Click it and Unblock the Notifications








