ಮೈ ಚಾಚಿಕೊಂಡಿರುವ ಸಿಂಗಲ್ ಸೀಟ್ ಬೈಕ್ ಮೋಡಿ
ವಾಹನ ಜಗತ್ತಿನ ಎಂಜಿನಿಯರ್‌ಗಳು ಒಂದಲ್ಲ ಒಂದು ಹೊಸತನವನ್ನು ಕಂಡು ಹುಡುಕುವುದರಲ್ಲಿ ಸದಾ ತಲ್ಲೀನರಾಗಿರುತ್ತಾರೆ. ಇದು ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ವಿನೂತನ ಸೃಷ್ಟಿಗೆ ಎಡೆಮಾಡಿಕೊಡುತ್ತದೆ.
ಇಂತಹದೊಂದು ವಿನೂತನ ಸೃಷ್ಟಿಗೆ ವಾಷಿಂಗ್ಟನ್ ಡಿಸಿ ತಲಹದಿಯ ಸುಪ್ರಿನ್ ಎಕ್ಸೊಡಸ್ ಹೇತುವಾಗಿದೆ. ವಾಹನ ಪ್ರಿಯರಿಗಂತೂ ಮೈ ವಿಸ್ತಾರವಾಗಿ ಚಾಚಿಕೊಂಡಿರುವ
ಈ ಬೈಕ್ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದರಲ್ಲಿ ಯಾವುದೇ ಸಂಶಯವೂ ಬೇಡ.

ಬಿಎಂಡಬ್ಲ್ಯು
ಬಿಎಂಡಬ್ಲ್ಯು ಕೆ1200ಎಲ್‌ಟಿ ಟೂರಿಂಗ್ ಮೋಟಾರ್ ಸೈಕಲ್ ತಲಹದಿಯಲ್ಲಿ ಇದರನ್ನು ರೂಪಿಸಲಾಗಿದೆ.

ಕಸ್ಟಮೈಸ್ಡ್ ಬೈಕ್
ಎಂಜಿನ್ ಹಾಗೂ ಇತರ ಪರಿಕರಗಳನ್ನು ಹೊರತುಪಡಿಸಿ ಸಂಪೂರ್ಣ ಕಸ್ಟಮೈಸ್ಡ್ ಬೈಕ್ ಇದಾಗಿದೆ.

ಏಕಮಾತ್ರ ಸವಾರ
ಇದರ ಪ್ರಮುಖ ವೈಶಿಷ್ಟ್ಯ ಏನೆಂದರೆ ಸಾಮಾನ್ಯ ದ್ವಿಚಕ್ರ ವಾಹನಗಳಿಗೆ ವಿರುದ್ಧವಾಗಿ ಏಕಮಾತ್ರ ಸವಾರರಿಗೆ ಆರಾಮದಾಯಕವಾಗಿ ಚಲಿಸುವ ರೇಸಿಂಗ್ ಸಿಟ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಸಿಟ್ಟಿಂಗ್ ವ್ಯವಸ್ಥೆ
ವಿಸ್ತಾರವಾದ ಮೈಕಟ್ಟನ್ನು ಈ ವಿಶೇಷ ಬೈಕ್ ಹೊಂದಿದ್ದು, ಇನ್ನು ನೆಲದಿಂದ ಸ್ವಲ್ಪ ಮೇಲೆ ಸಿಟ್ಟಿಂಗ್ ವ್ಯವಸ್ಥೆಯಿದೆ.

ಭಾರ
ಅಧಿಕ ಭಾರದ ಎಂಜಿನ್ ಇರುವುದರಿಂದಲೇ ಬೈಕ್‌ನ ಒಟ್ಟು ತೂಕ 308 ಕೆ.ಜಿಗಳಷ್ಟು ಏರಿಕೆಯಾಗಿದೆ. ಇನ್ನು ಫೈವ್ ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿದೆ.

ಬಿಎಂಡಬ್ಲ್ಯು ಮೊಟೊರಾಡ್ ಎಂಜಿನ್
ಇನ್ನು ಇದರಲ್ಲಿ 126 ಅಶ್ವಶಕ್ತಿ ಉತ್ಪಾದಿಸುವ 1172 ಸಿಸಿ ಎಂಜಿನ್ ಆಳವಡಿಸಲಾಗಿದೆ. ದೀರ್ಘ ಪಯಣಕ್ಕೆ ಇದು ಹೆಚ್ಚು ನೆರವಾಗಲಿದೆ.

ನಿರ್ವಹಣೆ
ಕಂಪನಿಯ ಪ್ರಕಾರ ಕೇವಲ 4.1 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 241 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಕಡಿಮೆ ಗ್ರೌಂಡ್ ಕ್ಲಿಯರನ್ಸ್
ಇನ್ನು ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಹೊಂದಿದ್ದರೂ ದೀರ್ಘ ದೂರದ ಪಯಣಕ್ಕೆ ತಕ್ಕದಾಗಿ ಬೈಕ್ ತಯಾರಿಸಲಾಗಿದೆ.

ಮೈಲೇಜ್
ದೊಡ್ಡ ಆಕಾರ ಹೊಂದಿರುವ ಹೊರತಾಗಿಯೂ ಪ್ರತಿ ಲೀಟರ್‌ಗೆ 34 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸುರಕ್ಷತೆ
ಹಾಗಿದ್ದರೂ ಎಕ್ಸೊಡಸ್ ಸುರಕ್ಷತೆ ಸಂಬಂಧಿಸಿದಂತೆ ಆಟೋ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲಸ್ತರದಲ್ಲಿರುವ ಸಿಟ್ಟಿಂಗ್ ವ್ಯವಸ್ಥೆಯೇ ತೊಂದರೆಗೆ ಕಾರಣವಾಗಲಿದೆಯೆಂಬ ಅಭಿಪ್ರಾಯವಿದೆ.

ಅಭಿವೃದ್ಧಿ
ಇಷ್ಟೆಲ್ಲ ಆದರೂ ಎಕ್ಸೊಡಸ್ ಸೂಪರ್ ಇನ್ನು ಕೂಡಾ ಅಭಿವೃದ್ಧಿ ಹಂತದಲ್ಲಿದ್ದು, ಗ್ರಾಹಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನದಲ್ಲಿದೆ.


Click it and Unblock the Notifications