ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

By Nagaraja

ದೇಶದ ನಂ.1 ಸ್ಫೋರ್ಟ್ಸ್ ಬೈಕ್ ಹಾಗೂ ಅಷ್ಟೇ ಜನಪ್ರಿಯ ಗಿಟ್ಟಿಸಿಕೊಂಡಿರುವ ಬೈಕ್ ಆಗಿರುವ ಬಜಾಜ್ ಪಲ್ಸರ್ ಈಗಲೂ ಮಾರುಕಟ್ಟೆಯಲ್ಲಿ ತನ್ನ ಆವೇಗವನ್ನು ಕಾಪಾಡಿಕೊಂಡಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಯಮಹಾ ಬೈಕ್‌ಗಳು ಆಗಮನವಾದರೂ ಪಲ್ಸರ್ ಯಶಸ್ಸನ್ನು ಮುಟ್ಟಲು ಮಾತ್ರ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಕ್ರೀಡಾ ಬೈಕ್ ಅನುಭವ ಹಾಗೂ ಗರಿಷ್ಠ ಇಂಧನ ಕ್ಷಮತೆ ಪಲ್ಸರ್ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಿತ್ತು.

ನಟಿ ಪರಿಣಿತಿ ಮನಗೆದ್ದ ಸುಜುಕಿಯ ಹೊಸ 'ಲೆಟ್ಸ್' ಸ್ಕೂಟರ್

ಅಷ್ಟಕ್ಕೂ ಪಲ್ಸರ್‌ಗ ಸರಿಯಾಟಿಯಾಗಿ ನಿಲ್ಲಲು ಯಾವ ಬೈಕ್‌ನಿಂದ ಸಾಧ್ಯ? ಎಂಬ ಸಹಜವಾದ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಕೂಡಿ ಬಂದಿರುವ ಸದ್ಯದ ಉತ್ತರ 'ಜಿಕ್ಸರ್'. ಹೌದು, ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರುಸೈಕಲ್ ಇಂಡಿಯಾ ಸಂಸ್ಥೆಯು ನೂತನ ಜಿಕ್ಸರ್ 150 ಸಿಸಿ ಬೈಕ್ ರಸ್ತೆಗಿಳಿಸುತ್ತಿದೆ. ಇದು ಯಮಹಾದ ಎಫ್‌ಝಡ್ ಆವೃತ್ತಿಗೂ ನಿಕಟ ಪೈಪೋಟಿ ಒಡ್ಡಲಿದೆ. ಅಷ್ಟಕ್ಕೂ ನೂತನ ಸುಜುಕಿ ಜಿಕ್ಸರ್ ಬೈಕ್‌ನಲ್ಲಿರುವ ವಿಶಿಷ್ಟತೆಗಳು ಯಾವುವು? ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ..

ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಹಾಗೂ ಸಂಸ್ಥೆಯ ಪ್ರಮುಖ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಲ್ಮಾನ್ ಖಾನ್ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ನೂತನ 150ಸಿಸಿ ಜಿಕ್ಸರ್ ಬೈಕ್ ಅನಾವರಣಗೊಳಿಸಿದ್ದರು.

ಸ್ಟೈಲಿಷ್ ಬೈಕ್

ಸ್ಟೈಲಿಷ್ ಬೈಕ್

ಮೊದಲ ನೋಟಕ್ಕೆ ಆಕ್ರಮಣಕಾರಿ ವಿನ್ಯಾಸ ಪಡೆದುಕೊಳ್ಳುವಲ್ಲಿ ಸುಜುಕಿ ಜಿಕ್ಸರ್ ಯಶಸ್ವಿಯಾಗಿದೆ. ಇದು ಖಂಡಿತವಾಗಿ ಯಮಹಾ ಎಫ್‌ಝಡ್ ಹಾಗೂ ಹೋಂಡಾ ಸಿಬಿ ಟ್ರಿಗರ್ ಆವೃತ್ತಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

ಸ್ಮರ್ಧಾತ್ಮಕ ದರ

ಸ್ಮರ್ಧಾತ್ಮಕ ದರ

ಇನ್ನೊಂದು ಪ್ರಮುಖ ಅಂಶವೆಂದರೆ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಬೇಕಾಗಿರುವುದು ಅತಿ ಮುಖ್ಯವಾಗಿದೆ. ಇದು 150ಸಿಸಿ ವಿಭಾಗದಲ್ಲಿ ಪಲ್ಸರ್‌ಗಿಂತ ಸ್ವಲ್ಪ ಪ್ರೀಮಿಯಂ ಆಗಿ ಗುರುತಿಸಿಕೊಳ್ಳಲಿರುವುದರಿಂದ ದರ ಬಹುದೊಡ್ಡ ಪಾತ್ರ ವಹಿಸಲಿದೆ.

ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

ಸುಜುಕಿ ಜಿಕ್ಸರ್‌ನಲ್ಲಿ ಕಂಡುಬಂದಿರುವ ಇನ್ನೊಂದು ಪ್ರಮುಖ ಫೀಚರ್ ಏನೆಂದರೆ, ಹಿಂದುಗಡೆ ಮೊನೊ ಶಾಕ್ ಸಸ್ಪೆಷನ್ ಮತ್ತು ದಪ್ಪವಾದ ಟ್ಯೂಬ್‌ಲೆಸ್ ಟೈರ್ ಆಳವಡಿಸಲಾಗಿದೆ.

ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

ಇನ್ನು ಕ್ರೀಡಾತ್ಮಕ ಲುಕ್‌‌ ಪ್ರಧಾನ ಮಾಡುವ ನಿಟ್ಟಿನಲ್ಲಿ ಹಿಂದುಗಡೆ ಪ್ರಯಾಣಿಕರಿಗೆ ಬಾಗಿರುವಂತಹ ವಿನ್ಯಾಸ ಕಲ್ಪಿಸಲಾಗಿದೆ. ಅಂತೆಯೇ ಕ್ಯಾನ್ ರೂಪಿತ ಡ್ಯುಯಲ್ ಎಕ್ಸಾಸ್ಟ್ (ಸೈಲನ್ಸರ್) ಕೊಡಲಾಗಿದೆ.

ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

ಇನ್ನು ಮುಂದಗಡೆಯಿಂದ ನೋಡುವಾಗ ಪಲ್ಸರ್ 200ಎನ್‌ಎಸ್ ತರಹನೇ ಭಾಸವಾಗುತ್ತಿದೆ. ಇದರ ಪ್ರಯೋಜನವನ್ನು ಸುಜುಕಿ ಜಿಕ್ಸರ್ ಪಡೆಯುವ ಸಾಧ್ಯತೆಯಿದೆ.

ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?

ಈ ಮೊದಲೇ ತಿಳಿಸಿರುವಂತೆಯೇ ಸುಜುಕಿ 155ಸಿಸಿ ಬೈಕ್‌ನಲ್ಲಿ ನೂತನ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಗಾರಿಕೆ ಆಳವಡಿಸಲಾಗಿದೆ. ಇದು ಗರಿಷ್ಠ ಇಂಧನ ಕ್ಷಮತೆ ನೀಡಲಾಗಿದೆ.

More from DriveSpark

Article Published On: Tuesday, January 28, 2014, 10:58 [IST]
English summary
Unveiled today at an event held in Mumbai, Suzuki Motorcycles India revealed its new 150cc segment motorcycle in India. Named Gixxer, the cover was pulled off the new motorcycle by brand ambassador Salman Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+