ಸಜುಕಿ ಯೋಶಿಮುರಾ ಸೂಪರ್ ಬೈಕ್
ಸುಜುಕಿ ಮೋಟಾರ್ ಸೈಕಲ್ ಜತೆ ಸೇರಿಕೊಂಡಿರುವ ಜಪಾನ್‌ನ ಮೋಟಾರ್ ಸೈಕಲ್ ಹಾಗೂ ಎಎಂಎ ಸೂಪರ್ ಬೈಕ್ ರೇಸಿಂಗ್ ತಂಡ ಯೋಶಿಮುರಾ ನೂತನ ಲಿಮಿಟೆಡ್ ಎಡಿಷನ್ ಜಿಎಸ್‌ಎಕ್ಸ್-ಆರ್750 ಸೂಪರ್ ಬೈಕ್ ಪರಿಚಯಿಸುತ್ತಿದೆ.
ಆದರೆ ಈ ಕಪ್ಪು ವರ್ಣದ ಯೋಶಿಮುರಾ ಸೂಪರ್ ಬೈಕ್ ಬ್ರಿಟನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಅದರಲ್ಲೂ ಬೇಸರದ ಸಂಗತಿಯೆಂದರೆ ಬಹುಬೇಗನೇ ಬುಕ್ಕಿಂಗ್ ಮಾಡಿದ 25 ಗ್ರಾಹಕರಿಗೆ ಮಾತ್ರ ದೊರಕಲಿದೆ. ಹಾಗಾಗಿ ಆರಂಭದಲ್ಲೇ ತಿಳಿಸಿರುವಂತೆಯೇ ನೀವು ಪ್ರಯತ್ನ ಪಟ್ಟರೂ ಬೈಕ್ ನಿಮ್ಮ ಕೈಸೇರುವ ಸಾಧ್ಯತೆ ಕಡಿಮೆಯಾಗಿದೆ.

ವೈಶಿಷ್ಟ್ಯ
ಕೇಸ್ ಸೆವರ್
ಚಾಸೀಸ್ ಪ್ರೊಟೆಕ್ಟರ್
ಆಕ್ಸೆಲ್ ಹೊಂದಾಣಿಕೆ ಬ್ಲಾಕ್ಸ್
ಸ್ಟೀರಿಂಗ್ ಸ್ಟೆಮ್ ನಟ್
ಬಾರ್ ಎಂಡ್
ಎಂಜಿನ್ ಪ್ಲಗ್ ಕಿಟ್
ಒಯಿಲ್ ಫಿಲ್ಲಿಂಗ್ ಪ್ಲಗ್ ಕಿಟ್
ವಿಶೇಷ ಬ್ಯಾಡ್ಜ್

ಸುಜುಕಿ ಆಕ್ಸೆಸರಿ
ಅಂದ ಹಾಗೆ ಸುಜುಕಿಯ ಸ್ಟಾಂಡರ್ಡ್ ಆಕ್ಸೆಸರಿಗಳನ್ನು ಆಮದು ಮಾಡಲಾಗಿದೆ.

ದರ ಮಾಹಿತಿ
ಇದರ ದರ 1.1 ಲಕ್ಷ ರು.ಗಳಾಗಿವೆ.

ಯೋಶಿಮುರಾ
ಯೋಶಿಮುರಾ ಎಎಂಎ ಸೂಪರ್ ಬೈಕ್ ಚಾಂಪಿಯನ್‌ಶಿಪ್ ಯಶಸ್ವಿ ತಂಡವಾಗಿದ್ದು, ಹಲವಾರು ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡಿದೆ.

ಸೂಪರ್ ಬೈಕ್
ಪ್ರಸ್ತುತ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಿರಿ...


Click it and Unblock the Notifications