ಸುಜುಕಿ 250ಸಿಸಿ ಬೈಕ್ ಬರಮಾಡಿಕೊಳ್ಳಲು ಸಜ್ಜಾಗಿರಿ
ಜಪಾನ್‌ನ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ, ಭಾರತಕ್ಕೊಂದು ಹೊಸ ಬೈಕನ್ನು ಪರಿಚಯಿಸಲಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಸುಜುಕಿ ಇನಾಝುಮಾ ಜಿಡಬ್ಲ್ಯು250 ಜನವರಿ 27ರಂದು ಬಿಡುಗಡೆಯಾಗಲಿದೆ.
ಈ 250ಸಿಸಿ ನೆಕ್ಡ್ ಬೈಕ್ ಆಗಿರುವ ಇನಾಝುಮಾ ಹೊಸ ವರ್ಷದಲ್ಲಿ ಹೊಸ ರಂಗು ನೀಡಲಿದೆ. ಪ್ರಸ್ತುತ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲವಾದರೂ ಈ ನಿರ್ವಹಣಾ ಬೈಕ್ ಜನವರಿ ತಿಂಗಳಲ್ಲೇ ಲಾಂಚ್ ಆಗಲಿದೆ ಎಂಬ ಬಗ್ಗೆ ವರದಿಗಳು ಎದ್ದಿವೆ.

ಇಷ್ಟೆಲ್ಲ ಆದರೂ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆಯೇ ಎಂಬುದು ಸಂದೇಹಕ್ಕೆ ಕಾರಣವಾಗಿದೆ. ಬ್ರಿಟನ್‌ಗೆ ಹೋಲಿಸಿದರೆ ಜಿಡಬ್ಲ್ಯು250 3.5 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಇನ್ನು ಬಲ್ಲ ಮೂಲಗಳ ವರದಿಗಳನ್ನು ನೆಚ್ಚಿಕೊಳ್ಳುವುದೇ ಆದ್ದಲ್ಲಿ ಸುಜುಕಿ ನಿರ್ವಹಣಾ ಬೈಕ್ ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದ ಗ್ರಾಹಕರಿಗೆ ಪರಿಚಯವಾಗಲಿದೆ.

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದರ 248ಸಿಸಿ ಎಂಜಿನ್ 24 ಅಶ್ವಶಕ್ತಿ (22 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹೋಂಡಾದ ಸಿಬಿಆರ್250ಆರ್ ಕೂಡಾ ಇದೇ ನಿರ್ವಹಣೆ ನೀಡುವುದರಿಂದ ಮಾರುಕಟ್ಟೆಯಲ್ಲಿ ಕಠಿಣ ಪೈಪೋಟಿಗೆ ವೇದಿಕೆ ಸಿದ್ಧವಾಗಲಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಹೋಂಡಾ ಟಾಪ್ ಎಂಡ್ ದರ 2.2 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಈ ನಿಟ್ಟಿನಲ್ಲಿ ಸುಜುಕಿ ಎಚ್ಚರಿಕೆ ವಹಿಸಬೇಕಾಗಿದ್ದು, ಸ್ಮರ್ಧಾತ್ಮಕ ದರಗಳಲ್ಲಿ ಲಾಂಚ್ ಮಾಡುವತ್ತ ಗಮನ ವಹಿಸಬೇಕಾಗಿದೆ.

ನಿಮ್ಮ ಮಾಹಿತಿಗಾಗಿ, ಸುಜುಕಿ ಇನಾಝುಮಾ ಗುಣಮಟ್ಟ ಬೈಕ್‌ಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಅಲ್ಲದೆ ಪ್ಯಾರಲಲ್ ಟ್ವಿನ್ ಸಿಲಿಂಡರ್ ಯುನಿಟ್ ಪಡೆದುಕೊಂಡಿದೆ. ದೇಶದಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್‌ಗಳ ಪೈಕಿ ನಿಂಜಾ 300 ಮಾತ್ರ ಟ್ವಿನ್ ಸಿಲಿಂಡರ್ ಮೋಟಾರಿನಲ್ಲಿ ಲಭ್ಯವಾಗುತ್ತಿರುವ ಏಕೈಕ ಬೈಕಾಗಿದೆ.


Click it and Unblock the Notifications