ನಟಿ ಪರಿಣಿತಿ ಮನಗೆದ್ದ ಸುಜುಕಿಯ ಹೊಸ 'ಲೆಟ್ಸ್' ಸ್ಕೂಟರ್
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರುಸೈಕಲ್ ಇಂಡಿಯಾ, ಪ್ರಮುಖವಾಗಿಯೂ ಹೆಣ್ಮಕ್ಕಳನ್ನು ಗುರಿಯಾಗಿರಿಸಿಕೊಂಡು ನೂತನ 'ಲೆಟ್ಸ್' 110ಸಿಸಿ ಸ್ಕೂಟರನ್ನು ಅನಾವರಣಗೊಳಿಸಿದೆ.
ಸುಜುಕಿ ನೂತನ ಬೈಕ್ 'ಜಿಕ್ಸರ್'ಗೆ ಜೈ ಹೋ ಹಾಡಿದ ಸಲ್ಮಾನ್
ಸುಜುಕಿಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸುಜುಕಿಯ ನೂತನ ಉತ್ಪನ್ನವನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ನೂತನ ಜಿಕ್ಸರ್ 150ಸಿಸಿ ಬೈಕ್ ಸಹ ಅನಾವರಣಗೊಳಿಸಿದ್ದರು.

ದೇಶದಲ್ಲಿ ಸುಜುಕಿಯಿಂದ ಆಕ್ಸೆಸ್ ಹಾಗೂ ಸ್ವಿಶ್ ಆವೃತ್ತಿಗಳು ಲಭ್ಯವಿದೆ. ಇವೆರಡು 125ಸಿಸಿ ಸ್ಕೂಟರ್ ಆಗಿರುವುದರಿಂದ ಇದಕ್ಕಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯದ ಸ್ಕೂಟರ್ ಬಿಡುಗಡೆ ಮಾಡಲು ಕಂಪನಿ ಯೋಜನೆ ಹಾಕಿಕೊಂಡಿದೆ.

ಕಾಲೇಜು ವಿದ್ಯಾರ್ಥಿನಿಗಳು ಸೇರಿದಂತೆ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಸುಜುಕಿ ಲೆಟ್ಸ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ 110ಸಿಸಿ ಸ್ಕೂಟರ್ ವಿಭಾಗದಲ್ಲೂ ಸುಜುಕಿ ತನ್ನ ಸಾನಿಧ್ಯ ಗಟ್ಟಿ ಮಾಡಲಿದೆ.

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ 110ಸಿಸಿ ಆಕ್ಟಿವಾ ಐ ಸ್ಪರ್ಧಾಳುವಾಗಿ ಸುಜುಕಿ ಲೆಟ್ಸ್ ಗುರುತಿಸಿಕೊಳ್ಳಲಿದೆ.

ಸುಜುಕಿ ಜಿಕ್ಸರ್ ತರಹನೆ ಲೆಟ್ಸ್ ಲಾಂಚ್ ಕೂಡಾ ಮುಂಬರುವ ಜುಲೈ ತಿಂಗಳಲ್ಲೇ ನಡೆಯಲಿದೆ.

ಇದು 112.8ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 8.7 ಅಶ್ವಶಕ್ತಿ (7 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸುಜುಕಿ ಜಿಕ್ಸರ್ ತರಹನೇ ನೂತನ ಸುಜುಕಿ ಇಕೊ ನಿರ್ವಹಣಾ (ಎಸ್‌ಇಪಿ) ಎಂಜಿನ್ ತಂತ್ರಜ್ಞಾನವನ್ನು ಲೆಟ್ಸ್ ಸ್ಕೂಟರ್‌ನಲ್ಲಿ ಆಳವಡಿಸಲಾಗಿದೆ. ಇದು ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ನೆರವಾಗಲಿದೆ.

ಸುಜುಕಿ ಪ್ರಕಾರ ನೂತನ ಲೆಟ್ಸ್ 110 ಸಿಸಿ ಸ್ಕೂಟರ್ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಲಿದೆ.

ನೂತನ ಸುಜುಕಿ ಲೆಟ್ಸ್ 1810ಎಂಎಂ ಉದ್ದ, 660 ಎಂಎಂ ಅಗಲ, 1120 ಎಂಎಂ ಎತ್ತರ ಮತ್ತು 1250 ಉದ್ದದ ವೀಲ್ ಬೇಸ್ ಹೊಂದಿದೆ. ಹಾಗೆಯೇ 765 ಎಂಎಂ ಸೀಟು ಎತ್ತರ ಹಾಗೂ 98 ಕೆ.ಜಿ ಭಾರವನ್ನು ಹೊಂದಿರುತ್ತದೆ.

ಅಂತೆಯೇ ಸುಜುಕಿ ಲೆಟ್ಸ್ 5.2 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇನ್ನುಳಿದಂತೆ ಹೆಚ್ಚುವರಿ ತಾಂತ್ರಿಕ ಮಾಹಿತಿಗಳು ಇನ್ನಷ್ಟೇ ಆಗಮನವಾಗಬೇಕಿದೆ.

ಈ ಮೊದಲೇ ತಿಳಿಸಿರುವಂತೆಯೇ ಕಾಲೇಜು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿರುವ ಸುಜುಕಿ ಲೆಟ್ಸ್, ಹೋಂಡಾ ಆಕ್ಟಿವಾ ಐ ಮತ್ತು ಯಮಹಾ ರೇ ಆವೃತ್ತಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

ಲೆಟ್ಸ್ ನಿರ್ಮಾಣ ವೆಚ್ಚ ಕಡಿತಗೊಳಿಸುವುದರಲ್ಲಿ ವಿಶೇಷ ಗಮನ ಹರಿಸಿರುವ ಸುಜುಕಿ, ಪ್ಲಾಸ್ಟಿಕ್ಟ್ ಬಿಡಿಭಾಗಗಳನ್ನು ಹೆಚ್ಚು ಬಳಕೆ ಮಾಡಿವೆ. ನೀವಿಲ್ಲಿ ನೋಡುತ್ತಿರುವಂತೆಯೇ ಇದರ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಬೇಸಿಕ್ ಲುಕ್ ಪಡೆದಿದೆ.

ಅಂತಿಮವಾಗಿ ಸುಜುಕಿ ಲೆಟ್ಸ್ ಸ್ಪರ್ಧಾತ್ಮಕ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ. ಅಂದರೆ ಆಕ್ಟಿವಾ ಐ ಮತ್ತು ಯಮಹಾ ರೇ ಆವೃತ್ತಿಗಿಂತಲೂ ಕಡಿಮೆ ಬೆಲೆಗಳಲ್ಲಿ ಆಗಮನವಾಗಲಿದೆ.

ಈ ಕೆಳಕಂಡ ಬಣ್ಣಗಳಲ್ಲಿ ಸುಜುಕಿ ಲೆಟ್ಸ್ ಲಭ್ಯವಿರಲಿದೆ - ಪಿಯರ್ಲ್ ಮೈರಾ ರೆಡ್, ಮೆಟ್ಯಾಲಿಕ್ ಟ್ರಿಟನ್ ಬ್ಲ್ಯೂ, ಪಿಯರ್ಲ್ ಮೈರೇಜ್ ವೈಟ್, ಗ್ಲಾಸ್ ಸ್ಪಾರ್ಕ್ಲ್ ಬ್ಲ್ಯಾಕ್ ಮತ್ತು ಮೆಟ್ಯಾಲಿಕ್ ಸೋನಿಕ್ ಸಿಲ್ವರ್.


Click it and Unblock the Notifications








