ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

By Nagaraja

ಸಾಹಸ ಬೈಕ್‌ಗಳನ್ನು ಉತ್ಪಾದಿಸುವದಲ್ಲಿ ಸುಜುಕಿ ಸದಾ ಒಂದು ಹೆಜ್ಜೆ ಮುಂದಿದೆ. ಜಪಾನ್ ಮೂಲದ ಈ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯು ಇದೀಗ ಭಾರತಕ್ಕೆ ಎರಡನೇ ತಲೆಮಾರಿನ ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಅಡ್ವೆಂಚರ್ ಬೈಕ್ ಪರಿಚಯಿಸಿದೆ.

ಭಾರತದಕ್ಕೆ ಪ್ರವೇಶ ಪಡೆದಿರುವ ಸುಜುಕಿ ಹೊಸ ಬೈಕ್‌ನ ಪುಣೆ ಎಕ್ಸ್ ಶೋ ರೂಂ ದರ 14.95 ಲಕ್ಷ ರು.ಗಳಾಗಿರಲಿದೆ. ಇದು ಪ್ರಮುಖವಾಗಿಯೂ ಕೆಟಿಎಂ, ಬಿಎಂಡಬ್ಲ್ಯು ಹಾಗೂ ಟ್ರಯಂಪ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

2002ನೇ ಇಸವಿಯಲ್ಲಿ ಮೊದಲ ಬಾರಿಗೆ ಪ್ರವೇಶಿಸಿದ್ದ ಸುಜುಕಿ ಅಡ್ವೆಂಚರ್ ಬೈಕ್, ಆಕ್ರಮಣಕಾರಿ ವಿನ್ಯಾಸ ಕಾಪಾಡಿಕೊಂಡಿದೆ. ಇದು ಸಾರಿಗೆ ಅಗತ್ಯದ ಜತೆಗೆ ನಿಮ್ಮ ಸಾಹಸ ಮನೋಭಾವನೆಯನ್ನು ಹೊರತೆರೆಯಲಿದೆ.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

1037 ಸಿಸಿ ವಿಟ್ವಿನ್ ಎಂಜಿನ್‌ನಿಂದ ನಿಯಂತ್ರಿಸ್ಪಡುವ ಸುಜುಕಿಯ ನೂತನ ವಿ ಸ್ಟ್ರೋಮ್ 1000 ಎಬಿಎಸ್, 101 ಅಶ್ವಶಕ್ತಿ (103 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

ವಿ ಸ್ಟ್ರೋಮ್ ಗಂಟೆಗೆ ಗರಿಷ್ಠ 180 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಬೈಕ್ ಬೃಹತ್‌ ಗಾತ್ರವನ್ನು ಪಡೆದಿರುವುದರಿಂದ ಸಣ್ಣ ಮೈಕಟ್ಟಿನವರಿಗೆ ಸ್ವಲ್ಪ ಕಷ್ಟಕರವಾಗಬಹುದು.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

ಸುಜುಕಿಯು ಇದರಲ್ಲಿ ಪೂರ್ಣವಾಗಿಯೂ ಹೊಂದಾಣಿಸಬಹುದಾದ ಅಪ್‌ಸೈಡ್ ಡೌನ್ (ಯುಎಸ್‌ಡಿ) ಫಾರ್ಕ್ ಮತ್ತು ಹಿಂದುಗಡೆ ಮೊನೊಶಾಕ್ ಆಳವಡಿಸಿದೆ. ಟ್ರಯಂಪ್ ಹಾಗೂ ಬಿಎಂಡಬ್ಲ್ಯು ಪರಿಗಣಿಸಿದಾಗ ಇದು ಉತ್ತಮ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಿದೆ. ಅದೇ ರೀತಿ ಎಬಿಸಿ, ಮೂರು ವಿಧದ ಟ್ರಾಕ್ಷನ್ ಕಂಟ್ರೋಲ್ ಸ್ಟಾಂಡರ್ಡ್ ಆಗಿ ಲಭಿಸಲಿದೆ.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

ಇನ್ನು ಅತ್ಯುತ್ತಮ ಮೈಲೇಜ್ ಸಹ ಕಾಪಾಡಿಕೊಂಡಿದೆ. ಇದು ಪ್ರತಿ ಲೀಟರ್‌ಗೆ ನಗರ ಪ್ರದೇಶದಲ್ಲಿ 17ರಿಂದ 20 ಅಂತೆಯೇ ತೆರೆದ ರಸ್ತೆಗಳಲ್ಲಿ 23ರಿಂದ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸುಜುಕಿ ವಿ ಸ್ಟ್ರೋಮ್ 1000 ಎಬಿಎಸ್ ಭಾರತ ಪ್ರವೇಶ

ವಿನ್ಯಾಸದ ವಿಚಾರದಲ್ಲಿ ವಿ ಸ್ಟ್ರೋಮ್ ವಿಶಿಷ್ಟತೆ ಕಾಪಾಡಿಕೊಂಡಿದೆ. ಇದು ದೈನಂದಿನ ಪಯಣದ ಜೊತೆಗೆ ಸಾಹಸ ಯಾತ್ರೆಯನ್ನು ಬಯಸುವವರಿಗೆ ಹೆಚ್ಚು ಹೊಂದಿಕೆಯಾಗಲಿದೆ.

More from DriveSpark

Article Published On: Thursday, June 26, 2014, 14:30 [IST]
English summary
The V-Strom offers good on-road performance as well as decent off-road agility as well. The bike is now on sale for INR 14.95 lakh (ex-showroom Pune).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+