ಟಿವಿಎಸ್ ಅಪಾಚಿ ಆರ್‌ಟಿಆರ್ 180 ಮ್ಯಾಟ್ ಬ್ಲ್ಯಾಕ್ ಎಡಿಷನ್ ಲಾಂಚ್
ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್, ತನ್ನ ಜನಪ್ರಿಯ ಅಪಾಚಿ ಸರಣಿಯಲ್ಲಿ ನೂತನ ಆರ್‌ಟಿಆರ್180 ಮ್ಯಾಟ್ ಬ್ಲ್ಯಾಕ್ ಎಡಿಷನ್ ಲಾಂಚ್ ಮಾಡಿದೆ.
ಇದಕ್ಕೂ ಮೊದಲು ವರ್ಷಾರಂಭದಲ್ಲಿ ನಡೆದ ಇಂಡಿಯಾ ಬೈಕ್ ವೀಕ್‌ನಲ್ಲಿ ಅಪಾಚಿ ಆರ್‌ಟಿಆರ್ 180 ಮ್ಯಾಟ್ ಬ್ಲ್ಯಾಕ್ ಎಡಿಷನ್ ಪ್ರದರ್ಶಿಸಿದ್ದ ಟಿವಿಎಸ್, ಇದೀಗ ಈ ಆಕರ್ಷಕ ಬೈಕನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆ ಹೊಂದಿದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 180 ಮ್ಯಾಟ್ ಬ್ಲ್ಯಾಕ್ ಎಡಿಷನ್, ಮ್ಯಾಟ್ ಕಪ್ಪು ಬಣ್ಣದೊಂದಿಗೆ ಹೆಚ್ಚುವರಿ ಗ್ರಾಫಿಕ್ಸ್‌ಗಳನ್ನು ಪಡೆಯಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದು 177.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 17 ಅಶ್ವಶಕ್ತಿ (15.5 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಪ್ರಸ್ತುತ ಟಿವಿಎಸ್ ಪೈಕಿ ಅತ್ಯಂತ ಶಕ್ತಿಶಾಲಿ ಬೈಕ್ ಎನಿಸಿಕೊಂಡಿರುವ ಆರ್‌ಟಿಆರ್ 180 ಉತ್ತರಾಧಿಕಾರಿ ಪ್ರಸಕ್ತ ಸಾಲಿನಲ್ಲೇ ಆಗಮನವಾಗುವ ನಿರೀಕ್ಷೆಯಿದೆ.

ಈ ಸಂಬಂಧ ಫಾಕ್ಸ್ ಎಕ್ಸ್ ಮೆನ್ ಡೇಯ್ಸ್ ಸಹಭಾಗಿತ್ವದಲ್ಲಿ ಜಾಹೀರಾತುವೊಂದನ್ನು ಬಿಡುಗಡೆ ಮಾಡಲಾಗಿದೆ.

ಎಲ್ಲ ಹೊಸತನದಿಂದ ಕೂಡಿದ ಟಿವಿಎಸ್ ಬೈಕ್, ಡ್ರೇಕನ್ ಕಾನ್ಸೆಪ್ಟ್ ಬೈಕ್‌ನಿಂದ ಸ್ಪೂರ್ತಿ ಪಡೆಯಲಿದೆ. ಇದನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

ವರದಿಗಳ ಪ್ರಕಾರ ಟಿವಿಎಸ್ ಹೊಸ ಬೈಕ್, ಹೆಚ್ಚು ಶಕ್ತಿಶಾಲಿ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು ನಿರ್ವಹಣಾ ಬೈಕ್ ಇಷ್ಟಪಡುವ ಗ್ರಾಹಕರಿಗೆ ಇನ್ನಷ್ಟು ಆಯ್ಕೆ ಪ್ರದಾನ ಮಾಡಲಿದೆ.


Click it and Unblock the Notifications








