ಹೊಸ ವರ್ಷನ್ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನ ಮಾಲೀಕರಾದ ಧೋನಿ
ಮಹೇಂದ್ರ ಸಿಂಗ್ ಧೋನಿ ಎಂದರೆ ಯಾರಿಗೆ ತಾನೆ ಗೊತಿಲ್ಲ ಹೇಳಿ. ತನ್ನ ನಾಯಕತ್ವದಿಂದ ಕೂಲ್ ಕ್ಯಾಪ್ಟೆನ್ ಎಂದು ಹೆಸರು ಪಡೆದ ಈತ, ತನ್ನ ಬ್ಯಾಟಿಂಗ್ ಹಾಗು ವಿಕೆಟ್ ಕೀಪಿಂಗ್ ಸಾಮರ್ಥ್ಯದಿಂದ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯು ಸಹ ಜನಪ್ರಿಯತೆಯನ್ನು ಪಡೆದಿದ್ದಾರೆ.

ಗೇಮ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್ ಬಗ್ಗೆ ಮಾತ್ರ ಒಲವು ಎಂದುಕೊಂಡರೆ ಅದು ತಪ್ಪಾಗುತ್ತದೆ. ಏಕೆಂದರೆ ಅವರ ಗ್ಯಾರೇಜಿನಲ್ಲಿನ ವಾಹನಗಳನ್ನು ಕಂಡರೆ ಇವರಿಗೆ ಬೈಕ್ ಮತ್ತು ಕಾರುಗಳ ಬಗ್ಗೆ ಕೂಡಾ ಕ್ರೇಜ್ ಇದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಮಹಿ ಮೊನ್ನೆಯಷ್ಟೆ ಹಲವಾರು ನವೀಕರಣವನ್ನು ಪಡೆದು ಬಿಡುಗಡೆಗೊಂಡ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನ ಮಾಲೀಕರಾಗಿದ್ದಾರೆ.

ಹೌದು ಟಿವಿಎಸ್ ಸಂಸ್ಥೆಯು ಹಲವಾರು ನವೀಕರಣದೊಂದಿಗೆ ಟಿವಿಎಸ್ ಆರ್‍ಆರ್ ಬೈಕಿನ ಬಿಡುಗಡೆಯ ಸಮಯದಲ್ಲಿ ನಮ್ಮ ಇಂಡಿಯನ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟೆನ್ ಆಗಿದ್ದ ಎಂ.ಎಸ್ ಧೋನಿಯವರಿಗೆ ಬಹುಮಾನವಾಗಿ ನೀಡಿದ್ದಾರೆ. ಇದೀಗ ಹಲವಾರು ಬೈಕ್ ಮತ್ತು ಕಾರುಗಳನ್ನು ಒಳಗೊಂಡಿರುವ ಧೋನಿ ಇದೀಗ ಈ ಬೈಕಿನ ಮಾಲೀಕರಾಗಿದ್ದಾರೆ.

ಟಿವಿಎಸ್ ಮೋಟಾರ್ಸ್, ಅಪಾಚೆ ಆರ್‍ಆರ್ 310 ಬೈಕಿನ ಅಪ್‍ಡೇಟೆಡ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.27 ಲಕ್ಷಗಳಾಗಿದೆ.

ಅಪ್‍ಡೇಟಿನ ಭಾಗವಾಗಿ ಟಿವಿಎಸ್ ಕಂಪನಿಯು ಈ ಹೊಸ ಬೈಕಿನಲ್ಲಿ ರೇಸ್ ಟ್ಯೂನಿನ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿದೆ. ಇನ್ನು ಮುಂದೆ ಈ ಬೈಕ್ ಹೊಸ ಬಣ್ಣವಾದ ಫ್ಯಾಂಟಮ್ ಬ್ಲಾಕ್‍ನಲ್ಲಿಯೂ ದೊರೆಯಲಿದೆ. ಸ್ಲಿಪರ್ ಕ್ಲಚ್‍ನಿಂದಾಗಿ ಈ ಬೈಕ್‍ನಲ್ಲಿ ವೇಗವಾಗಿ ಡೌನ್ ಶಿಫ್ಟ್ ಮಾಡಬಹುದಾಗಿದ್ದು, ಯಾವುದೇ ಚಕ್ರಗಳು ಕುಲುಕುವುದಿಲ್ಲ ಹಾಗೂ ಚೈನ್‍ಗಳು ಅಲುಗಾಡುವುದಿಲ್ಲ. ಇದರ ಜೊತೆಗೆ ಅಸಿಸ್ಟ್ ಫಂಕ್ಷನ್ ಅಳವಡಿಸಲಾಗಿದ್ದು, ಕ್ಲಚ್ ಪ್ಲೇಟ್‍ಗಳನ್ನು ಗಟ್ಟಿಯಾಗಿ ಲಾಕ್ ಮಾಡಿ, ಎಫರ್ಟ್ ಕಡಿಮೆ ಮಾಡುತ್ತದೆ.

ಆರ್‍ಆರ್ 310 ರೇಸಿಂಗ್ ಆಕ್ಸೆಸರೀಸ್‍ನ ಭಾಗವಾಗಿರುವ ಹೊಸ ಆರ್‍ಟಿ ಸ್ಲಿಪರ್ ಕ್ಲಚ್ ಟೆಕ್ನಾಲಜಿಯನ್ನು ಚಾಲ್ತಿಯಲ್ಲಿರುವ ಬೈಕುಗಳಲ್ಲಿಯೂ ಅಳವಡಿಸಬಹುದಾಗಿದೆ. ಈಗ ತಮ್ಮಲ್ಲಿರುವ ಬೈಕ್ ಅನ್ನು ಯಾವುದೇ ಟಿವಿಎಸ್ ಸರ್ವಿಸ್ ಸೆಂಟರ್‍ಗೆ ಕೊಂಡೊಯ್ದು ನಿಗದಿತ ಶುಲ್ಕವನ್ನು ಪಾವತಿಸಿ, ಈ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿಕೊಳ್ಳಬಹುದು.

ಈ ಸೂಪರ್ ಪ್ರಿಮೀಯಂ ಬೈಕ್ ಅನ್ನು ಅಲ್ಟಿಮೇಟ್ ಟ್ರಾಕ್ ವೆಪನ್ ಆಗಿ ನೋಡಲಾಗುತ್ತದೆ. ಈ ಅಪ್‍ಡೇಟ್ ನಮ್ಮ ರೇಸಿಂಗ್ ಪರಂಪರೆಯಿಂದ ಆಟೋಮೋಬೈಲ್ ಉದ್ಯಮದಲ್ಲಿಯೇ ಮೊದಲ ಬಾರಿಗೆ ಬಂದಿದೆ. ಈ ಟೆಕ್ನಾಲಜಿಯನ್ನು ಅಳವಡಿಸುತ್ತಿರುವುದು ಸ್ವಾಭಾವಿಕವಾದ ಬೆಳವಣಿಗೆಯಾಗಿದೆ. ಈ ಬದಲಾವಣೆಯಿಂದಾಗಿ ಟಿವಿಎಸ್ ಅಪಾಚೆ ಆರ್‍ಆರ್310 ಗ್ರಾಹಕರು ರೇಸಿಂಗ್ ಡೈನಾಮಿಕ್ಸ್ ಅನುಭವವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಬೈಕ್ ಪ್ರಿಯನಾಗಿರುವ ನನಗೆ, ಹೊಸ ಟಿವಿಎಸ್ ಅಪಾಚೆ ಆರ್‍ಆರ್310 ಬೈಕಿನಲ್ಲಿರುವ ಹೊಸ ಅಪ್‍ಡೇಟ್ ಖುಷಿಯನ್ನು ನೀಡಿದೆ. ಭಾರತೀಯ ಬೈಕ್ ತಯಾರಕ ಕಂಪನಿಯ ಸೂಪರ್ ಪ್ರಿಮೀಯಂ ಬೈಕ್ ಅನ್ನು ಹೊಂದುತ್ತಿರುವುದಕ್ಕೆ ಹೆಮ್ಮೆಯಾಗಿದೆ. ಟಿವಿಎಸ್ ತಂಡಕ್ಕೆ ಶುಭವನ್ನು ಕೋರುತ್ತೇನೆ. ಈ ಹೊಸ ಬೈಕಿನಿಂದ ಪ್ರಯಾಣಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.
MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಇದೊಂದು ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲೂ 312.2 ಸಿಸಿಯ ಲಿಕ್ವಿಡ್ ಕೂಲ್‍ನ ಸಿಂಗಲ್ ಸಿಲಿಂಡರ್ ರಿವರ್ಸ್ ಇನ್‍ಕ್ಲೈನ್ ಡಿಒಹೆಚ್‍ಸಿ ಎಂಜಿನ್ ಇದ್ದು, 34 ಬಿಹೆಚ್‍ಪಿ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.
MOST READ: ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?

ಇದರಲ್ಲಿಯೂ ಸಹ ಬೈ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳು, ಡ್ಯೂಯಲ್ ಚಾನೆಲ್ ಎಬಿಎಸ್ ಸಿಸ್ಟಂ, ವರ್ಟಿಕಲ್ ಸ್ಪೀಡೋ ಮೀಟರ್/ ಟ್ಯಾಕೋ ಮೀಟರ್ ಹಾಗೂ ಮಿಚೆಲಿನ್ ಪೈಲಟ್ ಸ್ಟ್ರೀಟ್ ಟಯರ್‍ಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಅಪಾಚೆ ಆರ್‍ಆರ್ 310 ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿರುವ ಟಿವಿಎಸ್ ಕಂಪನಿಯ ಬೈಕ್ ಆಗಿದೆ. ಇದರಲ್ಲಿ ಅನೇಕ ಫೀಚರ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಅಳವಡಿಸಲಾಗಿದೆ. ಈಗ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿರುವುದರಿಂದ ಮತ್ತಷ್ಟು ಹುರುಪನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಡೊಮಿನರ್ 400, ಕೆಟಿಎಂ ಆರ್‍ಸಿ 390, ಹೋಂಡಾ ಸಿಬಿ 300ಆರ್ ಹಾಗೂ ಬಿಎಂಡಬ್ಲ್ಯೂ ಜಿ 310 ಆರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








