ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್; ವಿಶಿಷ್ಟತೆಗಳೇನು?
ನಿರೀಕ್ಷೆಯಂತೆಯೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಪ್ರಯಾಣಿಕ ಮೋಟಾರುಸೈಕಲ್ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೊದಲು ಫೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಯಾಗಿದೆ.
ಕಡಿಮೆ ಬೆಲೆಯ ಮೈಲೇಜ್ ಬೈಕ್ - ಡಿಸ್ಕವರ್ 125ಎಂ
ಅಂದ ಹಾಗೆ, ನೂತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಸಾಮಾನ್ಯ ಸ್ಟಾರ್ ಸಿಟಿಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಹಾಗೆಯೇ ತಾಂತ್ರಿಕತೆ ಜತೆಗೆ ಹಲವಾರು ನೂತನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಎಂಜಿನ್
ಹಿಂದಿನ ಸ್ಟಾರ್ ಸಿಟಿ ಹಾಗೂ ಜೂಪಿಟರ್ ಮತ್ತು ವೆಗೊ ಸ್ಕೂಟರ್‌ಗಳಲ್ಲಿ ಆಳವಡಿಸಿರುವುದಕ್ಕೆ ಸಮಾನವಾದ 109.7ಸಿಸಿ 'ಇಕೊಥ್ರಸ್ಟ್' ಎಂಜಿನ್ ನೂತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ನಲ್ಲೂ ಆಳವಡಿಸಲಾಗಿದ್ದರೂ, ಇದನ್ನು ಪರಿಷ್ಕೃತಗೊಳಿಸಲಾಗಿರುವುದರಿಂದ ಹೆಚ್ಚಿನ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ನೂತನ ಎಂಜಿನ್, ಒಂದು ನಿಮಿಷದಲ್ಲಿ 5000 ಆವರ್ತನಕ್ಕೆ 8.3 ಅಶ್ವಶಕ್ತಿ ವಿತರಿಸಲಿದೆ. ಹಾಗೆಯೇ ಒಂದು ನಿಮಿಷದಲ್ಲಿ 5000 ಆವರ್ತನಕ್ಕೆ 8.7 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದು ಸಾಮಾನ್ಯ ಸ್ಟಾರ್ ಸಿಟಿಯಲ್ಲಿ 8.18 ಅಶ್ವಶಕ್ತಿ ಹಾಗೂ 8.1 ಎನ್‌ಎಂ ಟಾರ್ಕ್ ಆಗಿದೆ.

ಹಾಗೆಯೇ ಇದರ 4 ಸ್ಪೀಡ್ ಗೇರ್ ಬಾಕ್ಸ್ ಕೇವಲ 8 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗ ಹಾಗೆಯೇ ಗಂಟೆಗೆ ಗರಿಷ್ಠ 90 ಕೀ.ಮೀ. ವೇಗತೆ ಪ್ರದಾನ ಮಾಡಲಿದೆ.

ಮೈಲೇಜ್
ಸಂಸ್ಥೆಯ ಪ್ರಕಾರ ನೂತನ ಇಕೊಥ್ರಸ್ಟ್ ಎಂಜಿನ್, ಸಾಮಾನ್ಯ ಪರಿಸ್ಥಿತಿಯಲ್ಲಿ ಲೀಟರ್‌ಗೆ 85 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಂದರೆ ಸಾಮಾನ್ಯ ಸ್ಟಾರ್ ಸಿಟಿ ಆವೃತ್ತಿಗಿಂತಲೂ ಒಂದು ಕೀ.ಮೀ. ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬ್ರೇಕ್, ಸಸ್ಫೆಷನ್
ಡಿಸ್ಕ್ ಬ್ರೇಕ್ ಐಚ್ಛಿಕವಾಗಿಲ್ಲದಿದ್ದರೂ, 130 ಎಂಎಂ ಮುಂಭಾಗದಲ್ಲಿ ಡ್ರಮ್ ಬ್ರೇಕ್ ಹಾಗೆಯೇ ಹಿಂದುಗಡೆ 110 ಎಂಎಂ ಪಡೆದುಕೊಳ್ಳಲಿದೆ. ಇನ್ನುಳಿದಂತೆ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಅದೇ ರೀತಿ ಹಿಂದುಗಡೆ 5 ಸ್ಟೆಪ್ ಹೊಂದಾಣಿಸಬಹುದಾದ ಶಾಕ್ ಅಬ್ಸಾರ್ಬರ್ ಪಡೆದುಕೊಳ್ಳಲಿದೆ.

ವೈಶಿಷ್ಟ್ಯ, ಸ್ಟೈಲ್
ಸಾಮಾನ್ಯ ಸ್ಟಾರ್ ಸಿಟಿಗಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ನೂತನ ಸ್ಟಾರ್ ಸಿಟಿ ಪ್ಲಸ್ ಪಡೆದುಕೊಳ್ಳಲಿದೆ. ಅವುಗಳೆಂದರೆ
- ಅನಾಲಾಗ್/ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜತೆ ಸರ್ವಿಸ್ ಇಂಡಿಕೇಟರ್,
- ಕ್ಲಿಯರ್ ಲೆನ್ಸ್ ಇಂಡಿಕೇಟರ್,
- ನಂಬರ್ ಪ್ಲೇಟ್ ಇಲ್ಯೂಮಿನೇಟರ್,
- ಕಲರ್ಡ್ ಶಾಕ್ ಅಬ್ಸಾರ್ಬರ್ ಸ್ಪ್ರಿಂಗ್ಸ್,
- ಕ್ರೋಮ್ ಹ್ಯಾಂಡಲ್ ಬಾರ್,
- ಸ್ಟೈನ್‌ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್ ಜತೆ ಇಕೊಥ್ರಸ್ಟ್ ಬ್ಯಾಡ್ಜಿಂಗ್,
- ಡ್ಯುರಾ ಲೈಫ್ ಟೈರ್ ಅಲಾಯ್ ವೀಲ್ (ಶೇ. 12ರಷ್ಟು ಹೆಚ್ಚು ಗ್ರಿಪ್ ಹಾಗೂ ಶೇ. 20ರಷ್ಟು ಹೆಚ್ಚು ಬಾಳ್ವಿಕೆ),
- ನ್ಯೂ ಸ್ಟೈಲಿಂಗ್ ಸ್ಟಿಕರ್

ಬೆಲೆ
ಎಕ್ಸ್ ಶೋ ರೂಂ ದೆಹಲಿ - 44,000 ರು.

ಇದೀಗ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








